ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup: ಸತತ 2 ಪಂದ್ಯ ಸೋತ ಅಫ್ಘಾನಿಸ್ತಾನ ತಂಡಕ್ಕೆ ಸೂಪರ್‌-8ಕ್ಕೆ ಅವಕಾಶ ಇದೆಯಾ?

ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಣ ಐಸಿಸಿ ಟಿ20 ವಿಶ್ವಕಪ್‌ ಪಂದ್ಯ ಎರಡು ಸೂಪರ್‌ ಓವರ್‌ಗಳ ಅತ್ಯಂತ ರೋಚಕತೆಯಿಂದ ಕೂಡಿತ್ತು. ಆದರೆ, ಕಠಿಣ ಹೋರಾಟ ನೀಡಿದ ಹೊರತಾಗಿಯೂ ಆಫ್ಘನ್‌ ಅಂತಿಮವಾಗಿ ಎರಡನೇ ಸೂಪರ್‌ ಓವರ್‌ನಲ್ಲಿ ಸೋಲು ಒಪ್ಪಿಕೊಂಡಿತ್ತು. ಇದರೊಂದಿಗೆ ರಶೀದ್‌ ಖಾನ್‌ ನಾಯಕತ್ವದ ಅಫ್ಘಾನಿಸ್ತಾನ ತಂಡ ಸತತ ಎರಡರಲ್ಲಿ ಸೋತಿದೆ.

ಅಫ್ಘಾನಿಸ್ತಾನ ತಂಡಕ್ಕೆ ಸೂಪರ್‌-8ರ ಹಂತಕ್ಕೆ ಇನ್ನೂ ಚಾನ್ಸ್‌ ಇದೆಯಾ?

ಅಫ್ಘಾನಿಸ್ತಾನ ತಂಡದ ಸೂಪರ್‌-8ರ ಹಂತದ ಲೆಕ್ಕಾಚಾರ. -

Profile
Ramesh Kote Feb 11, 2026 10:19 PM

ಅಹಮದಾಬಾದ್‌: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಸೂಪರ್ ಓವರ್‌ನಲ್ಲಿ ಸೋಲಿನ ಆಘಾತದ ನಂತರ ಅಫ್ಘಾನಿಸ್ತಾನದ 2026ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಮುಂದಿನ ಹಾದಿ ಹೆಚ್ಚು ಕಷ್ಟಕರವಾಗಿದೆ. ಆದರೆ ಸೂಪರ್-8ರ ಹಂತಕ್ಕೆ ತಲುಪುವ ಇವರ ಆಸೆ ಇನ್ನೂ ಜೀವಂತವಾಗಿ ಹಾಗೇಯೇ ಇದೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ (AFG vs NZ) ಸೋತು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ ರಶೀದ್ ಖಾನ್ (Rashid Khan) ನೇತೃತ್ವದ ಆಫ್ಘನ್‌, ಟೂರ್ನಿಯಲ್ಲಿ ಉಳಿಯಲು ಅದೃಷ್ಟ ಮತ್ತು ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ನೆಟ್‌ ರನ್‌ರೇಟ್‌ ದರವನ್ನು ಸುಧಾರಿಸಲು ಯುಎಇ ಮತ್ತು ಕೆನಡಾ ವಿರುದ್ಧದ ಇನ್ನುಳಿದ ಎರಡೂ ಗುಂಪು ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲುವುದು ಅಫ್ಘಾನಿಸ್ತಾನ ತಂಡಕ್ಕೆ ತುಂಬಾ ಅಗತ್ಯವಾಗಿದೆ.

ಅಫ್ಘಾನಿಸ್ತಾನ ತಂಡದ ಸೂಪರ್‌-8ಕ್ಕೆ ಅರ್ಹತೆ ಪಡೆಯಲು ಎರಡು ಲೆಕ್ಕಾಚಾರಗಳು ಇವೆ. ಮೊದಲ ಲೆಕ್ಕಾಚಾರದ ಪ್ರಕಾರ, ನ್ಯೂಜಿಲೆಂಡ್ ತಂಡ, ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು ನಂತರ, ಯುಎಇ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕು. ಕೊನೆಯದಾಗಿ ಕೆನಡಾ, ಯುಎಇಯನ್ನು ಸೋಲಿಸುವ ಅಗತ್ಯವಿದೆ. ಈ ಲೆಕ್ಕಾಚಾರ ನಡೆದರೆ ನ್ಯೂಜಿಲೆಂಡ್ ಗ್ರೂಪ್ ʻಡಿ ʼ ಗುಂಪಿನಲ್ಲಿ ಅಗ್ರಸ್ಥಾನವನ್ನು ಪಡೆಯುತ್ತದೆ. ಆದರೆ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಲಾ 4 ಅಂಕಗಳೊಂದಿಗೆ ಸಮಬಲ ಸಾಧಿಸುತ್ತವೆ. ಆಗ ನೆಟ್‌ ರನ್‌ರೇಟ್‌ ಸೂಪರ್‌-8ರ ಅರ್ಹತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ, ಆಫ್ಘನ್‌ ಕೊನೆಯ ಎರಡೂ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆದ್ದರೆ, ಮುಂದಿನ ಸುತ್ತಿಗೆ ತಲುಪಲಿದೆ.

AFG vs SA: ಅಫ್ಘಾನಿಸ್ತಾನ ಎದುರು ಎರಡನೇ ಸೂಪರ್‌ ಓವರ್‌ ಥ್ರಿಲ್ಲರ್‌ ಗೆದ್ದ ದಕ್ಷಿಣ ಆಫ್ರಿಕಾ!

ಸಣ್ಣ ತಂಡಗಳು ಪಂದ್ಯಗಳನ್ನು ಗೆಲ್ಲಲೇಬೇಕು

ಎರಡನೇ ಲೆಕ್ಕಾಚಾರದ ಪ್ರಕಾರ, ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್ ಅನ್ನು ಸೋಲಿಸಿದರೆ ದಕ್ಷಿಣ ಆಫ್ರಿಕಾ 8 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುತ್ತದೆ. ಈ ವೇಳೆ ಕೆನಡಾ ತಂಡ, ನ್ಯೂಜಿಲೆಂಡ್ ಅನ್ನು ಸೋಲಿಸಬೇಕು ಹಾಗೂ ನಂತರ ಯುಎಇ, ಕೆನಡಾವನ್ನು ಸೋಲಿಸಬೇಕು. ಇದು ಸಂಭವಿಸಿದಲ್ಲಿ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ಎರಡೂ ತಲಾ 4 ಅಂಕಗಳನ್ನು ಹೊಂದಿರುತ್ತವೆ. ಮತ್ತೊಮ್ಮೆ, ಸೂಪರ್ 8 ತಲುಪುವ ಎರಡನೇ ತಂಡವನ್ನು ನೆಟ್‌ ರನ್‌ರೇಟ್‌ ದರದಿಂದ ನಿರ್ಧರಿಸಲಾಗುತ್ತದೆ, ಇದರಲ್ಲಿ ಅಫ್ಘಾನಿಸ್ತಾನ ನ್ಯೂಜಿಲೆಂಡ್‌ಗಿಂತ ಉತ್ತಮ ಸ್ಥಾನದಲ್ಲಿರಬೇಕಾಗುತ್ತದೆ.

AUS vs IRE:‌ ನೇಥನ್‌ ಎಲ್ಲಿಸ್‌ ಮಾರಕ ದಾಳಿ, ಆಸ್ಟ್ರೇಲಿಯಾ ತಂಡಕ್ಕೆ ಸುಲಭ ತುತ್ತಾದ ಐರ್ಲೆಂಡ್!

ಡಿ ಗುಂಪಿನಲ್ಲಿ ಮೂರು ಬಲಿಷ್ಠ ತಂಡಗಳು

ಈ ಟೂರ್ನಿಯ ಡಿ ಗುಂಪಿನಲ್ಲಿ ಮೂರು ಬಲಿಷ್ಠ ತಂಡಗಳು ಸ್ಥಾನ ಪಡೆದಿವೆ. ಏಕೆಂದರೆ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಂದೇ ಗುಂಪಿನಲ್ಲಿ ಇರುವ ಕಾರಣ ಸೂಪರ್‌-8ರ ಹಂತಕ್ಕೆ ತಲುಪಲು ಭಾರಿ ಪೈಪೋಟಿ ನಡೆಯುತ್ತದ. ಆದರೆ, ಅಫ್ಘಾನಿಸ್ತಾನ ಆರಂಭಿಕ ಎರಡೂ ಪಂದ್ಯಗಳನ್ನು ಸೋತರುವ ಕಾರಣ, ಟೂರ್ನಿಯ ಸೂಪರ್‌-8ರ ಹಂತದಿಂದ ಬಹುತೇಕ ಹೊರಬಿದ್ದಿದೆ. ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿಫೈನಲಿಸ್ಟ್ ಆಗಿದ್ದ ಅಫ್ಘಾನಿಸ್ತಾನ, ಪ್ರಸ್ತುತ ನಿರ್ಣಾಯಕ ಹಂತದಲ್ಲಿದೆ. ರಶೀದ್ ಖಾನ್ ಮತ್ತು ಅವರ ತಂಡವು ಮುಂದಿನ ಫೆಬ್ರವರಿ 16 ರಂದು ಯುಎಇ ಮತ್ತು ಫೆಬ್ರವರಿ 19 ರಂದು ಕೆನಡಾವನ್ನು ಎದುರಿಸಲಿದೆ.