ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜರ್ಮನಿಗೆ ಆಘಾತವಿಕ್ಕಿ ನಾಕೌಟ್‌ಗೆ ಲಗ್ಗೆಯಿಟ್ಟ ಈಕ್ವೆಡಾರ್

FIFA World Cup 2026: ಗುಂಪಿನಲ್ಲಿ 4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದ ಈಕ್ವೆಡಾರ್ 32ರ ಹಂತಕ್ಕೆ ಅರ್ಹತೆ ಪಡೆಯಿತು. ಪಂದ್ಯದ 77ನೇ ನಿಮಿಷದಲ್ಲಿ ಮ್ಯಾನ್ಯುಯೆಲ್ ನೆಯೂರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ಚಿಮ್ಮಿಸಿದ ಪ್ಲಾಟೊ ವಿಶ್ವಕಪ್‌ನಲ್ಲಿ ತಮ್ಮ ತಂಡ ಮುಂದಿನ ಹಂತಕ್ಕೆ ಮುನ್ನಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಜರ್ಮನಿಗೆ ಆಘಾತವಿಕ್ಕಿ ನಾಕೌಟ್‌ಗೆ ಲಗ್ಗೆಯಿಟ್ಟ ಈಕ್ವೆಡಾರ್

Ecuador's Gonzalo Plata -

Abhilash BC
Abhilash BC Jun 26, 2026 9:51 AM

ನ್ಯೂಯಾರ್ಕ್, ಜೂ.26: ಅಚ್ಚರಿಯ ಫಲಿತಾಂಶವೊಂದರಲ್ಲಿ ಬಲಿಷ್ಠ ಜರ್ಮನಿ ತಂಡದ ರಕ್ಷಣಾ ವಿಭಾಗದ ಲೋಪಗಳ ಲಾಭ ಎತ್ತಿದ ಈಕ್ವೆಡಾರ್(Ecuador) ತಂಡ ಫಿಫಾ ವಿಶ್ವಕಪ್(FIFA World Cup 2026) ಟೂರ್ನಿಯಲ್ಲಿ 2-1 ಅಂತರದ ಗೆಲುವಿನೊಡನೆ 32ರ ಸುತ್ತಿಗೆ ಮುನ್ನಡೆದಿದೆ. ನಿರ್ಣಾಯಕ ಹಂತದಲ್ಲಿ ಗೋಲು ಗೋಝ್ಸಾಲೊ ಪ್ಲಾಟಾ ಗೆಲುವಿನ ಹೀರೋ ಎನಿಸಿದರು.

ಅತ್ಯಂತ ರೋಚಕವಾಗಿ ಸಾಗಿದ ಈ ಪಂದ್ಯದ ಆರಂಭದಲ್ಲಿ ಜರ್ಮನಿ ಸುಲಭವಾಗಿ ಗೆಲುವು ಸಾಧಿಸಬಹುದೆಂದು ಎಲ್ಲರೂ ನಿರೀಕ್ಷಿಸಿದ್ದರು. ಅದರಂತೆ ಜರ್ಮನಿ 2ನೇ ನಿಮಿಷದಲ್ಲಿ ಲೆರಾಯ್ ಸಾನೆ ಬಾರಿಸಿದ ಗೋಲಿನಿಂದ ಮುನ್ನಡೆ ಗಳಿಸಿತು. ಆದರೆ ಈ ಮುನ್ನಡೆ ಹೆಚ್ಚು ಹೊತ್ತು ಇರಲಿಲ್ಲ. 7 ನಿಮಿಷದ ಅಂತರದಲ್ಲಿ ಈಕ್ವೆಡಾರ್ ಕೂಡ ಗೋಲಿನ ಖಾತೆ ತೆರೆಯಿತು. ನಿಕೋಲಸ್ ಅಂಗ್ಯುಲಾ ಈಕ್ವೆಡಾರ್ ಪರ ಟೂರ್ನಿಯಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಲು ನೆರವಾದರು.

ಇದಾದ ಬಳಿಕ ಈಕ್ವೆಡಾರ್ ತಂಡ ಉತ್ಕೃಷ್ಟ ಮಟ್ಟದ ಆಟವಾಡಿತು. ಜರ್ಮನಿಯ ಹಲವು ಪ್ರಯತ್ನಗಳನ್ನು ವಿಫಲ ಮಾಡಿತು. ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯ ಇನ್ನೇನು ಡ್ರಾದಲ್ಲಿ ಮುಕ್ತಾಯವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾಗ ಕಾರ್ನರ್‌ನಿಂದ ಪ್ಲಾಟಾ ಹೊಡೆದ ಗೋಲು ಈಕ್ವೆಡಾರ್‌ ತಂಡದ ಐತಿಹಾಸಿಕ ವಿಜಯಕ್ಕೆ ಕಾರಣವಾಯಿತು.

ಇಂದಿನ ಭಾರತ-ಐರ್ಲೆಂಡ್‌ ಮೊದಲ ಟಿ20 ನಡೆಯುವುದು ಅನುಮಾನ; ಪಂದ್ಯಕ್ಕೆ ಭಾರೀ ಮಳೆ ಭೀತಿ

ಗುಂಪಿನಲ್ಲಿ 4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದ ಈಕ್ವೆಡಾರ್ 32ರ ಹಂತಕ್ಕೆ ಅರ್ಹತೆ ಪಡೆಯಿತು. ಪಂದ್ಯದ 77ನೇ ನಿಮಿಷದಲ್ಲಿ ಮ್ಯಾನ್ಯುಯೆಲ್ ನೆಯೂರ್ ಅವರನ್ನು ವಂಚಿಸಿ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ಚಿಮ್ಮಿಸಿದ ಪ್ಲಾಟೊ ವಿಶ್ವಕಪ್‌ನಲ್ಲಿ ತಮ್ಮ ತಂಡ ಮುಂದಿನ ಹಂತಕ್ಕೆ ಮುನ್ನಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದರು. ಈಗಾಗಲೇ ಜಮರ್ನಿ ನಾಕೌಟ್‌ ಹಂತಕ್ಕೇರಿದ ಕಾರಣ ಈ ಸೋಲು ತಂಡಕ್ಕೆ ದೊಡ್ಡ ಹಾನಿ ಮಾಡಲಿಲ್ಲ.

ಜಪಾನ್‌ ವಿರುದ್ಧ ಸಮಬಲ ಸಾಧಿಸಿದ ಸ್ವೀಡನ್‌

ದಿನದ ಮತ್ತೊಂದು ಪಂದ್ಯದಲ್ಲಿ ಜಪಾನ್‌ ವಿರುದ್ಧ ಸ್ವೀಡನ್‌ ಸಮಬಲ ಸಾಧಿಸಿತು. ಆಂಥೋನಿ ಎಲಂಗಾ ಅವರು ಬಾರಿಸಿದ ಅದ್ಭುತ ಗೋಲು ಪಂದ್ಯವನ್ನು 1-1ಕ್ಕೆ ಸಮಬಲಗೊಳಿಸಿ ಸ್ವೀಡನ್ ತಂಡವು ವಿಶ್ವಕಪ್‌ನ ನಾಕೌಟ್ ಹಂತಕ್ಕೆ ಪ್ರವೇಶವನ್ನು ಖಚಿತಪಡಿಸಿತು. ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸಲಿಲ್ಲ. ಆದರೆ ದ್ವಿತೀಯಾರ್ಧದ 10 ನಿಮಿಷಗಳ ನಂತರ ದೈಜೆನ್ ಮೇಡಾ ಗೋಲು ಬಾರಿಸಿ ಜಪಾನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಕೆಲವೇ ನಿಮಿಷಗಳಲ್ಲಿ ಆಂಥೋನಿ ಎಲಂಗಾ ಅವರು ಗೋಲು ಹೊಡೆದು ಪಂದ್ಯವನ್ನು ಸಮಬಲಕ್ಕೆ ತಂದರು. ಪಂದ್ಯದಲ್ಲಿ ಜಪಾನ್ ತಂಡವು 3 ನೇರ ಗುರಿಯೊಂದಿಗೆ 8 ಗೋಲು ಪ್ರಯತ್ನ ನಡೆಸಿದರೆ, ಸ್ವೀಡನ್ ತಂಡವು 5 ನೇರ ಗುರಿಯೊಂದಿಗೆ 11 ಗೋಲು ಪ್ರಯತ್ನ ನಡೆಸಿತು.