ಮೂರನೇ ಟಿ20ಗೆ ಭಾರತ-ಇಂಗ್ಲೆಂಡ್ ಸಜ್ಜು; ಭಾರತ ಪರ 2 ಬದಲಾವಣೆ ಸಾಧ್ಯತೆ
ENG vs IND 3rd T20: ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿರುವ ಪಿಚ್ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರ ಪಿಚ್ ಗಳಲ್ಲಿ ಒಂದಾಗಿದೆ. ಸ್ಥಳದ ಮೇಲ್ಮೈ ಉತ್ತಮ ಬೌನ್ಸ್ ಅನ್ನು ಹೊಂದಿದ್ದು, ಬ್ಯಾಟರ್‌ಗಳು ಮುಕ್ತವಾಗಿ ರನ್ ಗಳಿಸಲು ಸುಲಭವಾಗುತ್ತದೆ.
ENG vs IND -
ನಾಟಿಂಗ್‌ಹ್ಯಾಮ್, ಜು.6: ಪ್ರವಾಸಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯದಲ್ಲಿ ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದ ಜೋಶ್‌ನಲ್ಲಿರುವ ಹ್ಯಾರಿ ಬ್ರೂಕ್ ಪಡೆ ಈ ಪಂದ್ಯವನ್ನು ಗೆದ್ದು ಸರಣಿ ಮುನ್ನಡೆ ಕಾಯ್ದುಕೊಳ್ಳಲು ಎದುರು ನೋಡುತ್ತಿದ್ದರೆ, ಶ್ರೇಯಸ್ ಅಯ್ಯರ್ ಬಳಗ ಸರಣಿ ಸಮಬಲದ ಯೋಜನೆಯಲ್ಲಿದೆ.
ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 190 ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಆದರೆ ಬೌಲರ್‌ಗಳು ಸಂಪೂರ್ಣವಾಗಿ ವಿಫಲರಾದರು. ಇಂಗ್ಲೆಂಡ್ ಒಂದು ಓವರ್ ಬಾಕಿ ಇರುವಾಗಲೇ ಗುರಿ ತಲುಪಿತ್ತು. ಹೀಗಾಗಿ ಭಾರತ ಮೂರನೇ ಪಂದ್ಯದಲ್ಲಿ ಬೌಲಿಂಗ್ ಲಯಕ್ಕೆ ಮರಳುವ ಅನಿವಾರ್ಯತೆ ಇದೆ.
ಮತ್ತೊಂದೆಡೆ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನಂತರ ಆತ್ಮವಿಶ್ವಾಸದಿಂದ ಇಂಗ್ಲೆಂಡ್ ನಾಟಿಂಗ್‌ಹ್ಯಾಮ್ ಪಂದ್ಯಕ್ಕೆ ಕಾಲಿಡಲಿದೆ. ಅವರ ಬ್ಯಾಟಿಂಗ್ ಘಟಕವು ಬೆನ್ನಟ್ಟುವಿಕೆಯ ಸಮಯದಲ್ಲಿ ಒತ್ತಡದ ನಡುವೆಯೂ ಶಾಂತತೆಯನ್ನು ತೋರಿಸಿತು. ಆದರೆ ಆಂಗ್ಲರ ಬೌಲಿಂಗ್ ಘಟಕವೂ ಭಾರತದಂತೆ ಸುಧಾರಿಸಬೇಕಿದೆ.
ಪಿಚ್ ವರದಿ
ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿರುವ ಪಿಚ್ ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್‌ಗೆ ಅತ್ಯಂತ ಅನುಕೂಲಕರ ಪಿಚ್ ಗಳಲ್ಲಿ ಒಂದಾಗಿದೆ. ಸ್ಥಳದ ಮೇಲ್ಮೈ ಉತ್ತಮ ಬೌನ್ಸ್ ಅನ್ನು ಹೊಂದಿದ್ದು, ಬ್ಯಾಟರ್‌ಗಳು ಮುಕ್ತವಾಗಿ ರನ್ ಗಳಿಸಲು ಸುಲಭವಾಗುತ್ತದೆ. ಕ್ರೀಡಾಂಗಣವು ಇಲ್ಲಿಯವರೆಗೆ 16 ಟಿ20 ಪಂದ್ಯಗಳನ್ನು ಆಯೋಜಿಸಿದೆ, ಮೊದಲು ಬ್ಯಾಟ್ ಮಾಡಿದ ತಂಡಗಳು 10 ಸಂದರ್ಭಗಳಲ್ಲಿ ಜಯಗಳಿಸಿವೆ. ಹೀಗಾಗಿ ಟಾಸ್ ಗೆದ್ದ ನಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಲು ಮುಂದಾಗಬಹುದು.
ಮುಖಾಮುಖಿ
ಆಡಿದ ಪಂದ್ಯಗಳು- 32
ಇಂಗ್ಲೆಂಡ್ ಗೆಲುವು- 13
ಭಾರತ-18 ಗೆಲುವು
ರದ್ದು- 01
ಸಂಭಾವ್ಯ ತಂಡಗಳು
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ (ನಾಯಕ), ಜಾಕೋಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಆದಿಲ್ ರಶೀದ್, ಜೋಫ್ರಾ ಆರ್ಚರ್, ಜೋಶ್ ಟಂಗ್.
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿ.ಕೀ.), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಪ್ರಿನ್ಸ್ ಯಾದವ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ