Women's World Cup Prize Money: ನಾಳೆ ಮಹಿಳಾ ವಿಶ್ವಕಪ್ ಫೈನಲ್; ಚಾಂಪಿಯನ್ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ದಾಖಲೆಯ ಬಹುಮಾನದ ಹಣವನ್ನು ಮಹಿಳಾ ಕ್ರಿಕೆಟ್‌ಗೆ ನಿರ್ಣಾಯಕ ಕ್ಷಣ ಎಂದು ಶ್ಲಾಘಿಸಿದ್ದಾರೆ. "ಈ ನಾಲ್ಕು ಪಟ್ಟು ಬಹುಮಾನದ ಹಣದ ಹೆಚ್ಚಳವು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತು ಕ್ಷಣವಾಗಿದೆ ಮತ್ತು ಅದರ ದೀರ್ಘಕಾಲೀನ ಬೆಳವಣಿಗೆಗೆ ನಮ್ಮ ಸ್ಪಷ್ಟ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಜಯ್ ಶಾ ಹೇಳಿದರು.
-
Abhilash BC
Nov 1, 2025 4:26 PM
ನವಿ ಮುಂಬೈ: ಮಹಿಳಾ ಏಕದಿನ ವಿಶ್ವಕಪ್ ಫೈನಲ್(Women's World Cup) ಪಂದ್ಯಕ್ಕೆ ವೇದಿಕೆ ಸಜ್ಜುಗೊಂಡಿದೆ. ಭಾನುವಾರ ನವಿ ಮುಂಬೈನಲ್ಲಿ ಚೊಚ್ಚಲ ಕಪ್ ಗೆಲ್ಲುವ ಇರಾದೆಯೊಂದಿಗೆ ಭಾರತ ಮತ್ತು ದಕ್ಷಿಣ ಆಫ್ರಿಕಾ(India Women vs South Africa Women) ಸೆಣಸಾಡಲಿದೆ. ವಿನ್ನರ್ ಮತ್ತು ರನ್ನರ್ ಅಪ್ ತಂಡಕ್ಕೆ ಸಿಗುವ ಬಹುಮಾನ(Women's World Cup Prize Money) ಮೊತ್ತದ ವಿವರ ಇಲ್ಲಿದೆ. ಪಂದ್ಯಾವಳಿಯ ಚಾಂಪಿಯನ್ ತಂಡ 37.3 ಕೋಟಿ ರೂ.ಗಳನ್ನು ಪಡೆಯಲಿದ್ದಾರೆ. ರನ್ನರ್ ಅಪ್ ತಂಡವು 20 ಕೋಟಿ ರೂ.ಗಳನ್ನು ಪಡೆಯಲಿದೆ. ಒಟ್ಟು ಬಹುಮಾನ ಮೊತ್ತ ₹122.5 ಕೋಟಿ. ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಲಾ ₹9.89 ಕೋಟಿ ಮೊತ್ತ ತಮ್ಮದಾಗಿಸಿಕೊಳ್ಳಲಿವೆ.
ಐದು ಮತ್ತು ಆರನೇ ಸ್ಥಾನ ಪಡೆದ ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ತಂಡಗಳಿಗೆ ₹ 5.8 ಕೋಟಿ ದೊರೆಯಲಿದೆ. ಏಳನೇ ಸ್ಥಾನಿ ಬಾಂಗ್ಲಾದೇಶ ಮತ್ತು ಎಂಟನೇ ಸ್ಥಾನಿ ಪಾಕಿಸ್ತಾನ ₹2.3 ಕೋಟಿ ಸಂಪಾದಿಸಲಿವೆ. ಇದಲ್ಲದೆ ಗುಂಪು ಹಂತದ ಪ್ರತಿಯೊಂದು ಗೆಲುವಿಗೂ ತಂಡಕ್ಕೆ 28 ಲಕ್ಷ ರೂ. ಸಿಗಲಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಅವರು ದಾಖಲೆಯ ಬಹುಮಾನದ ಹಣವನ್ನು ಮಹಿಳಾ ಕ್ರಿಕೆಟ್‌ಗೆ ನಿರ್ಣಾಯಕ ಕ್ಷಣ ಎಂದು ಶ್ಲಾಘಿಸಿದ್ದಾರೆ. "ಈ ನಾಲ್ಕು ಪಟ್ಟು ಬಹುಮಾನದ ಹಣದ ಹೆಚ್ಚಳವು ಮಹಿಳಾ ಕ್ರಿಕೆಟ್‌ಗೆ ಒಂದು ಹೆಗ್ಗುರುತು ಕ್ಷಣವಾಗಿದೆ ಮತ್ತು ಅದರ ದೀರ್ಘಕಾಲೀನ ಬೆಳವಣಿಗೆಗೆ ನಮ್ಮ ಸ್ಪಷ್ಟ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ"
ಇದನ್ನೂ ಓದಿ ICC WTC Final 2025: ವಿಶ್ವ ಟೆಸ್ಟ್ ಫೈನಲ್ ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ
"ನಮ್ಮ ಸಂದೇಶ ಸರಳವಾಗಿದೆ. ಮಹಿಳಾ ಕ್ರಿಕೆಟಿಗರು ಈ ಕ್ರೀಡೆಯನ್ನು ವೃತ್ತಿಪರವಾಗಿ ಆರಿಸಿಕೊಂಡರೆ ಪುರುಷರೊಂದಿಗೆ ಸಮಾನವಾಗಿ ನಡೆಸಿಕೊಳ್ಳಲಾಗುತ್ತದೆ ಎಂದು ತಿಳಿದಿರಬೇಕು. ಈ ಉನ್ನತಿಯು ವಿಶ್ವ ದರ್ಜೆಯ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಅನ್ನು ನೀಡುವ ಮತ್ತು ಮುಂದಿನ ಪೀಳಿಗೆಯ ಆಟಗಾರ್ತಿಯರಿಗೆ ಮತ್ತು ಅಭಿಮಾನಿಗಳಿಗೆ ಸ್ಫೂರ್ತಿ ನೀಡುವ ನಮ್ಮ ಮಹತ್ವಾಕಾಂಕ್ಷೆಯನ್ನು ಒತ್ತಿಹೇಳುತ್ತದೆ" ಎಂದು ಶಾ ಹೇಳಿದ್ದಾರೆ.