ಪರಾಗ್ವೆಯನ್ನು 4-1 ಅಂತರದಿಂದ ಸೋಲಿಸಿ ಭರ್ಜರಿ ಶುಭಾರಂಭ ಮಾಡಿದ ಅಮೆರಿಕ
FIFA World Cup 2026: ಈ ಫಲಿತಾಂಶವು ಯುನೈಟೆಡ್ ಸ್ಟೇಟ್ಸ್ ತಂಡವನ್ನು ಗ್ರೂಪ್ ಡಿಯಲ್ಲಿ ಬಲವಾದ ಆರಂಭಿಕ ಸ್ಥಾನದಲ್ಲಿ ಇರಿಸಿದೆ. ಆತಿಥೇಯರು ಮುಂದಿನ ಪಂದ್ಯವನ್ನು ಜೂನ್ 19 ರಂದು ಸಿಯಾಟಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಟಲಿದೆ. ಅದೇ ದಿನ ಪರಾಗ್ವೆ ತಂಡ ಟರ್ಕಿಯನ್ನು ಎದುರಿಸಲಿದೆ.
USA thrash Paraguay -
ಲಾಸ್ ಏಂಜಲೀಸ್, ಜೂ.13: ಕ್ಯಾಲಿಫೋರ್ನಿಯಾದ ಇಂಗಲ್‌ವುಡ್‌ನಲ್ಲಿರುವ ಸೋಫಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗ್ರೂಪ್ ಡಿ ಆರಂಭಿಕ ಪಂದ್ಯದಲ್ಲಿ ಪರಾಗ್ವೆಯನ್ನು 4-1 ಗೋಲುಗಳಿಂದ ಸೋಲಿಸುವ ಮೂಲಕ, ಆತಿಥೇಯ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕಾ ಫಿಫಾ ವಿಶ್ವಕಪ್(FIFA World Cup 2026)ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.
1994 ರ ನಂತರ ಮೊದಲ ಬಾರಿಗೆ ತವರು ನೆಲದಲ್ಲಿ ವಿಶ್ವಕಪ್ ಪಂದ್ಯವನ್ನು ಆಡುತ್ತಿರುವ ಆತಿಥೇಯರು ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಡ್ಯಾಮಿಯನ್ ಬೊಬಡಿಲ್ಲಾ ಅವರ ಆರಂಭಿಕ ಗೋಲು, ನಂತರ ಫೋಲಾರಿನ್ ಬೊಲೊಗುನ್ ಮೊದಲಾರ್ಧದಲ್ಲಿ ಎರಡು ಬಾರಿ ಗೋಲು ಗಳಿಸಿ ತಂಡಕ್ಕೆ ದೃಢವಾದ ಮುನ್ನಡೆ ತಂದುಕೊಟ್ಟರು.
ಮೊದಲಾರ್ಧದ ನಿಗದಿತ ಸಮಯದಲ್ಲಿ ಮೊನಾಕೊ ಫಾರ್ವರ್ಡ್ ಆಟಗಾರ ಮತ್ತೊಮ್ಮೆ ಗೋಲು ಗಳಿಸಿ ಪಂದ್ಯದ ಗೆಲುವಿನ ರೂವಾರಿಯಾದರು. ಪೆನಾಲ್ಟಿ ಪ್ರದೇಶದ ಬಲ ಅಂಚಿನಲ್ಲಿ ಮಲಿಕ್ ಟಿಲ್ಮನ್ ನೀಡಿದ ಪಾಸ್ ಅನ್ನು ಸ್ವೀಕರಿಸಿದ ಬೊಲೊಗುನ್, ಗೋಲು ಬಾರಿಸಿ ಸಂಭ್ರಮಿಸಿದರು. ವಿರಾಮದ ವೇಳೆಗೆ 3-0 ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಪರಾಗ್ವೆ ತಂಡವು ಗೋಲಿನ ಖಾತೆ ತೆರೆಯಿತು. 73ನೇ ನಿಮಿಷದಲ್ಲಿ ಮೌರಿಸಿಯೊ ಗೋಲು ಬಾರಿಸಿದರು.
ಇಂದಿನ ಏಕದಿನ ಪಂದ್ಯದಲ್ಲಿ ಮಹತ್ವದ ದಾಖಲೆ ಬರೆಯಲು ಸಜ್ಜಾದ ಶ್ರೇಯಸ್ ಅಯ್ಯರ್
ಕಳೆದ ತಿಂಗಳು ಕ್ರಿಸ್ಟಲ್ ಪ್ಯಾಲೇಸ್ ಪರ ಆಡುವಾಗ ಪಾದದ ಗಾಯದಿಂದ ಬಳಲುತ್ತಿದ್ದ ನಂತರ ಯುನೈಟೆಡ್ ಸ್ಟೇಟ್ಸ್‌ನ ಅಂತಿಮ ಅಭ್ಯಾಸ ಪಂದ್ಯಗಳಿಂದ ತಪ್ಪಿಸಿಕೊಂಡಿದ್ದ ಡಿಫೆಂಡರ್ ಕ್ರಿಸ್ ರಿಚರ್ಡ್ಸ್ ಕೂಡ ಈ ಪಂದ್ಯಕ್ಕೆ ಮರಳಿದರು.
🇺🇸 USA 4-1 Paraguay 🇵🇾
— Alee (@ImAleeJeje) June 13, 2026
Uno más al ultimo minuto para los gringos para acabarla de chingar jajaj ptmpic.twitter.com/vHXxB4alMG
ಈ ಫಲಿತಾಂಶವು ಯುನೈಟೆಡ್ ಸ್ಟೇಟ್ಸ್ ತಂಡವನ್ನು ಗ್ರೂಪ್ ಡಿಯಲ್ಲಿ ಬಲವಾದ ಆರಂಭಿಕ ಸ್ಥಾನದಲ್ಲಿ ಇರಿಸಿದೆ. ಆತಿಥೇಯರು ಮುಂದಿನ ಪಂದ್ಯವನ್ನು ಜೂನ್ 19 ರಂದು ಸಿಯಾಟಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಟಲಿದೆ. ಅದೇ ದಿನ ಪರಾಗ್ವೆ ತಂಡ ಟರ್ಕಿಯನ್ನು ಎದುರಿಸಲಿದೆ.