ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ
Lausanne Diamond League: ನೀರಜ್ ಲೌಸಾನೆ ಡೈಮಂಡ್ ಲೀಗ್‌ನಲ್ಲಿ ಸಾಕಷ್ಟು ಕಠಿಣ ಪೈಪೋಟಿ ಎದುರಿಸಬೇಕಾಗುತ್ತದೆ. ಕಾಮನ್‌ವೆಲ್ತ್ ಚಾಂಪಿಯನ್ ರುಮೇಶ್ ಪತಿರಾಜ್ ಕೂಡ ಕಣದಲ್ಲಿದ್ದಾರೆ. ಅವರು 92.62 ಮೀಟರ್ ದಾಖಲೆಯೊಂದಿಗೆ ವಿಶ್ವದ ಅಗ್ರಸ್ಥಾನದಲ್ಲಿದ್ದಾರೆ. ಗ್ಲ್ಯಾಸ್ಗೋದಲ್ಲಿ ಅವರು ತಮ್ಮ ಜಾವೆಲಿನ್ ಅನ್ನು 89.75 ಮೀಟರ್‌ಗೆ ಎಸೆಯುವ ಮೂಲಕ ಚಿನ್ನ ಗೆದ್ದಿದ್ದರು.
Neeraj Chopra -
ನವದೆಹಲಿ, ಆ. 4: ಗ್ಲ್ಯಾಸ್ಗೋದಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಲೌಸನ್ನೆ ಡೈಮಂಡ್ ಲೀಗ್‌ನಲ್ಲಿ ಮತ್ತೆ ಆಟಕ್ಕೆ ಮರಳಲಿದ್ದಾರೆ.
ಸ್ವಿಸ್ ನಗರದಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಸ್ಪರ್ಧೆಯ ನಾಲ್ಕನೇ ಲೆಗ್‌ನಲ್ಲಿ ಚೋಪ್ರಾ 10 ಅಗ್ರ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುತ್ತಾರೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಮುನ್ನ ಈ ಟೂರ್ನಿ ಚೋಪ್ರಾಗೆ ಉತ್ತಮ ವೇದಿಕೆಯಾಗಿದೆ. ಆಗಸ್ಟ್ 21 ರಂದು ಲೌಸಾನ್ನೆ ಡೈಮಂಡ್ ಲೀಗ್ ನಡೆಯಲಿದೆ.
ಹರಿಯಾಣದ 28 ವರ್ಷದ ನೀರಜ್ ಲೌಸಾನೆ ಡೈಮಂಡ್ ಲೀಗ್‌ನಲ್ಲಿ ಸಾಕಷ್ಟು ಕಠಿಣ ಪೈಪೋಟಿ ಎದುರಿಸಬೇಕಾಗುತ್ತದೆ. ಕಾಮನ್‌ವೆಲ್ತ್ ಚಾಂಪಿಯನ್ ರುಮೇಶ್ ಪತಿರಾಜ್ ಕೂಡ ಕಣದಲ್ಲಿದ್ದಾರೆ. ಅವರು 92.62 ಮೀಟರ್ ದಾಖಲೆಯೊಂದಿಗೆ ವಿಶ್ವದ ಅಗ್ರಸ್ಥಾನದಲ್ಲಿದ್ದಾರೆ. ಗ್ಲ್ಯಾಸ್ಗೋದಲ್ಲಿ ಅವರು ತಮ್ಮ ಜಾವೆಲಿನ್ ಅನ್ನು 89.75 ಮೀಟರ್‌ಗೆ ಎಸೆಯುವ ಮೂಲಕ ಚಿನ್ನ ಗೆದ್ದರು. ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್‌ಗೂ ಈ ಕೂಟ ಮಹತ್ವದಾಗಿದೆ.
ಪ್ರಸ್ತುತ ವಿಶ್ವ ಚಾಂಪಿಯನ್ ಟ್ರಿನಿಡಾಡ್ ಮತ್ತು ಟೊಬಾಗೊದ ಕೆಶೋರ್ನ್ ವಾಲ್ಕಾಟ್, ಮಾಜಿ ವಿಶ್ವ ಚಾಂಪಿಯನ್ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಮತ್ತು ಜರ್ಮನಿಯ ಮಾಜಿ ಒಲಿಂಪಿಕ್ ಚಾಂಪಿಯನ್ ಥಾಮಸ್ ರೋಹ್ಲರ್, ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜಾಕುಬ್ ವಡ್ಲೆಜ್, ಜರ್ಮನಿಯ ಜೂಲಿಯನ್ ವೆಬರ್, ಸ್ವಿಟ್ಜರ್ಲೆಂಡ್‌ನ ಸೈಮನ್ ವೈಲ್ಯಾಂಡ್ ಮತ್ತು ಅಮೇರಿಕನ್ ಕರ್ಟಿಸ್ ಥಾಂಪ್ಸನ್ ಸಹ ಕಣದಲ್ಲಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ನಕ್ಷೆ ವಿವಾದ: 'ನಾವೂ ಭಾರತೀಯರೇ' ಎಂದು ಲವ್ಲಿನಾ ಬೋರ್ಗೊಹೇನ್ ಬೇಸರ
ಲೌಸಾನ್ನೆ ಲೆಗ್ ನಂತರ, ಜ್ಯೂರಿಚ್ ಆಗಸ್ಟ್ 27 ರಂದು ಜಾವೆಲಿನ್‌ನಲ್ಲಿ ಮುಂದಿನ ಲೆಗ್ ನಡೆಯಲಿದ್ದು, ಸೆಪ್ಟೆಂಬರ್ 4/5 ರಂದು ಬ್ರಸೆಲ್ಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಏಷ್ಯನ್ ಕ್ರೀಡಾಕೂಟ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಐಚಿ-ನಗೋಯಾದಲ್ಲಿ ನಡೆಯಲಿದೆ.
"ಫಿಟ್‌ನೆಸ್ ಮೊದಲಿನಂತಿದೆ ಎಂದು ನಾನು ಹೇಳಲಾರೆ. ಆದರೆ ನಾನು ನಿಧಾನವಾಗಿ ಅಲ್ಲಿಗೆ ತಲುಪುತ್ತಿದ್ದೇನೆ. ಏಷ್ಯನ್ ಕ್ರೀಡಾಕೂಟಕ್ಕೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನಾನು ಡೈಮಂಡ್ ಲೀಗ್‌ನಲ್ಲಿ ಸ್ಪರ್ಧಿಸುತ್ತೇನೆ. ಹೆಚ್ಚಿನ ಸುಧಾರಣೆ ಇರುತ್ತದೆ. ನಿಧಾನವಾಗಿ ಸುಧಾರಿಸುತ್ತೇನೆ" ಎಂದು ಗ್ಲ್ಯಾಸ್ಗೋದಲ್ಲಿ ಬೆಳ್ಳಿ ಗೆದ್ದ ನಂತರ ಚೋಪ್ರಾ ಹೇಳಿದ್ದರು.
ಲೌಸನ್ನೆ ಡೈಮಂಡ್ ಲೀಗ್ ಪಟ್ಟಿ
ಆಂಡರ್ಸನ್ ಪೀಟರ್ಸ್ (ಗ್ರೆನಡಾ)
ಅರ್ಷದ್ ನದೀಮ್ (ಪಾಕಿಸ್ತಾನ)
ಕರ್ಟಿಸ್ ಥಾಂಪ್ಸನ್ (ಯುಎಸ್ಎ)
ಜಕುಬ್ ವಾಡ್ಲೆಜ್ (ಜೆಕ್)
ಜೂಲಿಯನ್ ವೆಬರ್ (ಜರ್ಮನಿ)
ಕೆಶಾರ್ನ್ ವಾಲ್ಕಾಟ್ (ಟ್ರಿನಿಡಾಡ್ ಮತ್ತು ಟೊಬಾಗೊ)
ನೀರಜ್ ಚೋಪ್ರಾ (ಭಾರತ)
ರುಮೇಶ್ ಪತಿರಾಜ್ (ಶ್ರೀಲಂಕಾ)
ಸೈಮನ್ ವೈಲ್ಯಾಂಡ್ (ಸ್ವಿಟ್ಜರ್ಲೆಂಡ್)
ಥಾಮಸ್ ರೋಹ್ಲರ್ (ಜರ್ಮನಿ)