ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್‌ ಲೀಗ್‌ ಪಂದ್ಯಗಳ ಮುಕ್ತಾಯ; ಸೋಮವಾರದಿಂದ ನಾಕೌಟ್‌ ಆರಂಭ

FIFA World Cup: ಈ ಬಾರಿ ದಾಖಲೆಯ 48 ತಂಡಗಳು ಟೂರ್ನಿಯಲ್ಲಿ ಆಡಿತ್ತು. ಇದರಲ್ಲಿ 32 ತಂಡಗಳು ನಾಕೌಟ್‌ ಪ್ರವೇಶ ಪಡೆಯಿತು. ಕೇವಲ 5 ಲಕ್ಷ ಜನಸಂಖ್ಯೆಯುಲ್ಲ, ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಂಡ ಕೇಪ್ ವರ್ಡೆ ನಾಕೌಟ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಿದೆ.

ಫಿಫಾ ವಿಶ್ವಕಪ್‌ ನಾಕೌಟ್‌ ಪಂದ್ಯಗಳ ವೇಳಾಪಟ್ಟಿ ಅಂತಿಮ

FIFA World Cup -

Abhilash BC
Abhilash BC Jun 28, 2026 10:51 AM

ಫ್ಲೋರಿಡಾ(ಅಮೆರಿಕ), ಜೂ.28: 23ನೇ ಆವೃತ್ತಿಯ ಫಿಫಾ ಫುಟ್ಬಾಲ್‌(FIFA World Cup 2026) ವಿಶ್ವಕಪ್‌ನ ಅರ್ಧ ಭಾಗ ಮುಕ್ತಾಯಗೊಂಡಿದ್ದು, 104 ಪಂದ್ಯಗಳ ಪೈಕಿ ಎಲ್ಲ ಲೀಗ್‌ ಪಂದ್ಯಗಳು ಪೂರ್ಣಗೊಂಡಿವೆ. ಅಲ್ಜೀರಿಯಾ ಮತ್ತು ಆಸ್ಟ್ರಿಯಾ ತಂಡಗಳ ನಡುವಣ ಪಂದ್ಯ 3-3 ಅಂತರದ ರೋಮಾಂಚಕಾರಿ ಡ್ರಾ ದೊಂದಿಗೆ ಲೀಗ್‌ ಮುಕ್ತಾಯಗೊಂಡಿತು. ಇನ್ನು ನಾಕೌಟ್‌ ಪಂದ್ಯಗಳ ಸರದಿ ಸೋಮವಾರದಿಂದ ನಾಕೌಟ್‌ ಹಂತದ ಪಂದ್ಯಗಳು ಶುರುವಾಗಲಿವೆ.

ಈ ಬಾರಿ ದಾಖಲೆಯ 48 ತಂಡಗಳು ಟೂರ್ನಿಯಲ್ಲಿ ಆಡಿತ್ತು. ಇದರಲ್ಲಿ 32 ತಂಡಗಳು ನಾಕೌಟ್‌ ಪ್ರವೇಶ ಪಡೆಯಿತು. ಕೇವಲ 5 ಲಕ್ಷ ಜನಸಂಖ್ಯೆಯುಲ್ಲ, ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಪಾಲ್ಗೊಂಡ ಕೇಪ್ ವರ್ಡೆ ನಾಕೌಟ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್‌ ಪ್ರವೇಶಿಸಿದೆ.

ನಾಕೌಟ್‌ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ದಕ್ಷಿಣ ಆಫ್ರಿಕಾ vs ಕೆನಡಾ: ಜೂನ್ 29, ಬೆಳಿಗ್ಗೆ 12:30 IST

ಬ್ರೆಜಿಲ್ vs ಜಪಾನ್: ಜೂನ್ 29, ರಾತ್ರಿ 10:30 IST

ಜರ್ಮನಿ vs ಪರಾಗ್ವೆ: ಜೂನ್ 30, ಬೆಳಿಗ್ಗೆ 2:30 IST

ನೆದರ್ಲ್ಯಾಂಡ್ಸ್ vs ಮೊರಾಕೊ: ಜೂನ್ 30, ಬೆಳಿಗ್ಗೆ 6:30 IST

ಐವರಿ ಕೋಸ್ಟ್ vs ನಾರ್ವೆ: ಜೂನ್ 30, ಸಂಜೆ 10:30 IST

ಫ್ರಾನ್ಸ್ vs ಸ್ವೀಡನ್: ಜುಲೈ 1, ಬೆಳಿಗ್ಗೆ 2:30 IST

ಮೆಕ್ಸಿಕೊ vs ಈಕ್ವೆಡಾರ್: ಜುಲೈ 1, ಬೆಳಿಗ್ಗೆ 6:30 IST

IND vs IRE: ವೈಭವ್‌ ಸೂರ್ಯವಂಶಿಗೆ ಈಗಲೇ ಪ್ಲೇಯಿಂಗ್‌ Xiನಲ್ಲಿ ಅವಕಾಶ ನೀಡಬೇಡಿ ಎಂದ ಅಶ್ವಿನ್!

ಇಂಗ್ಲೆಂಡ್ vs ಡಿಆರ್ ಕಾಂಗೋ: ಜುಲೈ 1, ರಾತ್ರಿ 9:30 IST

ಬೆಲ್ಜಿಯಂ vs ಸೆನೆಗಲ್: ಜುಲೈ 2, ಬೆಳಿಗ್ಗೆ 1:30 IST

ಯುಎಸ್ಎ vs ಬೋಸ್ನಿಯಾ ಮತ್ತು ಹರ್ಜೆಗೋವಿನಾ: ಜುಲೈ 2, ಬೆಳಿಗ್ಗೆ 5:30 IST

ಸ್ಪೇನ್ vs ಆಸ್ಟ್ರಿಯಾ: ಜುಲೈ 3, ಬೆಳಿಗ್ಗೆ 12:30 IST

ಪೋರ್ಚುಗಲ್ vs ಕ್ರೊಯೇಷಿಯಾ: ಜುಲೈ 3, ಬೆಳಿಗ್ಗೆ 4:30 IST

ಸ್ವಿಟ್ಜರ್ಲೆಂಡ್ vs ಅಲ್ಜೀರಿಯಾ: 3 ಜುಲೈ, 8:30 am IST

ಆಸ್ಟ್ರೇಲಿಯಾ vs ಈಜಿಪ್ಟ್: 3 ಜುಲೈ, 11:30 pm IST

ಅರ್ಜೆಂಟೀನಾ vs ಕೇಪ್‌ ವರ್ಡೆ: 4 ಜುಲೈ, 3:30 ಬೆಳಗ್ಗೆ IST

ಕೊಲಂಬಿಯಾ vs ಘಾನಾ: 4 ಜುಲೈ, 7:00 am IST