ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟು ವಿಶ್ವ ದಾಖಲೆ ಬರೆದ ಇಂಗ್ಲೆಂಡ್

T20 World Cup 2026: ಚೇಸಿಂಗ್‌ ವೇಳೆ ಬ್ರೂಕ್ ಆಕರ್ಷಕ ಶತಕ ಬಾರಿಸಿ ಮಿಂಚಿದರು. ಅವರ ಆಟದಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳಿದ್ದವು. ಟಿ20 ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಯಾವುದೇ ತಂಡದ ಮೊದಲ ನಾಯಕ ಎಂಬ ಹಿರಿಮೆಗೂ ಅವರು ಪಾತ್ರವಾದರು.

England create all-time record

ಪಲ್ಲೆಕೆಲೆ, ಫೆ. 25: ಮಂಗಳವಾರ ಇಲ್ಲಿ ನಡೆದಿದ್ದ ಟಿ20 ವಿಶ್ವಕಪ್‌(T20 World Cup 2026)ನ ಸೂಪರ್-8 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ತಂಡ ಹಾಲಿ ಆವೃತ್ತಿಯ ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ತನ್ನ ಸ್ಥಾನವನ್ನು ಕಾಯ್ದಿರಿಸಿತು. ಈ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಯಿತು. ಇದೇ ವೇಳೆ ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿತು.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಐದು ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಯಿತು. ಈ ಓಟವು 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್‌ನಲ್ಲಿ ಸೋತ ನಂತರ ಪ್ರಾರಂಭವಾಯಿತು. ನಂತರ 2021, 2022 (ಚಾಂಪಿಯನ್ಸ್), 2024 ಮತ್ತು ಈಗ 2026 ರಲ್ಲಿ ಸೆಮಿಫೈನಲ್‌ಗೆ ತಲುಪಿತು. ಈ ಸಮಯದಲ್ಲಿ, ಅವರು 2022 ರಲ್ಲಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ವಿಶ್ವಕಪ್ ಗೆದ್ದರು. 2021 ರ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು 2024 ರ ಸೆಮಿಫೈನಲ್‌ನಲ್ಲಿ ಭಾರತ ವಿರುದ್ಧ ಸೋಲು ಕಂಡಿದ್ದರು. ಒಟ್ಟಾರೆಯಾಗಿ ಆರು ಸಲ ಇಂಗ್ಲೆಂಡ್‌ ಸೆಮಿ ಪ್ರವೇಶಿಸಿದೆ.

ಇಂಗ್ಲೆಂಡ್ ಬಳಿಕ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಸತತ ನಾಲ್ಕು ಬಾರಿ ಸೆಮಿಫೈನಲ್ ತಲುಪಿದೆ. ಪಾಕಿಸ್ತಾನ 2007 ರಿಂದ ಈ ಸಾಧನೆಯನ್ನು ಸಾಧಿಸಿತು, 2009 (ಚಾಂಪಿಯನ್), 2010 ಮತ್ತು 2012 ರಲ್ಲಿ ಕೊನೆಯ ನಾಲ್ಕರಲ್ಲಿ ಸ್ಥಾನ ಗಳಿಸಿತು. ಶ್ರೀಲಂಕಾ 2009 ರಿಂದ 2014 ರವರೆಗೆ ಮೈಲಿಗಲ್ಲು ಸಾಧಿಸಿತು, 2010 ಮತ್ತು 2012 ರಲ್ಲಿ ಸೆಮಿಫೈನಲ್ ತಲುಪಿತ್ತು.

ಟಿ20 ವಿಶ್ವಕಪ್‌ನಲ್ಲಿ ಸತತ ಹೆಚ್ಚು ಸೆಮಿಫೈನಲ್‌ ಪ್ರವೇಶಿಸಿದ ತಂಡಗಳು

ಇಂಗ್ಲೆಂಡ್- 5 (2016, 2021, 2022, 2024, 2026)

ಪಾಕಿಸ್ತಾನ- 4 (2007, 2009, 2010, 2012)

ಶ್ರೀಲಂಕಾ- 4 (2009, 2010, 2012, 2014)

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಾಹಿಬ್‌ಝಾದ ಫರ್ಹಾನ್ ಅವರ 63 ರನ್‌ಗಳ (45 ಎಸೆತ) ನೆರವಿನಿಂದ 9 ವಿಕೆಟ್‌ಗೆ 164 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು. 165 ರನ್‌ಗಳ ಗುರಿ ಎದುರಿಸಿದ ಇಂಗ್ಲೆಂಡ್ ಒಂದು ಹಂತದಲ್ಲಿ 58 ರನ್‌ಗಳಾಗುಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಬ್ರೂಕ್, ಸ್ಯಾಮ್ ಕರನ್ (16) ಜೊತೆಗೂಡಿ ಐದನೇ ವಿಕೆಟ್‌ಗೆ ಕ್ಷಿಪ್ರಗತಿಯಲ್ಲಿ 45 ರನ್ ಸೇರಿಸಿದ್ದರಿಂದ ತಂಡ ಗಮನಾರ್ಹವಾಗಿ ಚೇತರಿಸಿತು. ಅಂತಿಮವಾಗಿ ತಂಡ ಐದು ಎಸೆತಗಳಿರುವಂತೆ 8 ವಿಕೆಟ್‌ಗೆ 166 ರನ್ ಗಳಿಸಿ ಗೆಲುವಿನ ದಡ ಸೇರಿತು. ಪಾಕಿಸ್ತಾನದ ಸೆಮಿಫೈನಲ್ ಕನಸು ಬಹುತೇಕ ಕಮರಿತು.

ENG vs PAK: ಹ್ಯಾರಿ ಬ್ರೂಕ್‌ ಶತಕ, ಪಾಕ್‌ಗೆ ಆಘಾತ ನೀಡಿ ಸೆಮೀಸ್‌ಗೆ ಲಗ್ಗೆಯಿಟ್ಟ ಇಂಗ್ಲೆಂಡ್‌!

ಚೇಸಿಂಗ್‌ ವೇಳೆ ಬ್ರೂಕ್ ಆಕರ್ಷಕ ಶತಕ ಬಾರಿಸಿ ಮಿಂಚಿದರು. ಅವರ ಆಟದಲ್ಲಿ 10 ಬೌಂಡರಿ, 4 ಸಿಕ್ಸರ್‌ಗಳಿದ್ದವು. ಟಿ20 ವಿಶ್ವಕಪ್‌ನಲ್ಲಿ ಶತಕ ದಾಖಲಿಸಿದ ಯಾವುದೇ ತಂಡದ ಮೊದಲ ನಾಯಕ ಎಂಬ ಹಿರಿಮೆಗೂ ಅವರು ಪಾತ್ರವಾದರು.