ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 148 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅನಗತ್ಯ ದಾಖಲೆ ಬರೆದ ಭಾರತ

ಹೆಡಿಂಗ್ಲೆಯಲ್ಲಿ ನಡೆದ ಈ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ 371 ರನ್‌ಗಳ ಗುರಿಯನ್ನು ಸಲೀಸಾಗಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ 5 ವಿಕೆಟ್‌ಗೆ 373 ರನ್‌ ಬಾರಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಲೀಡ್‌ ಪಡೆದುಕೊಂಡರೂ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಪೂರ್ಣ ಬೌಲಿಂಗ್‌ ವೈಫಲ್ಯ ಕಂಡು ಸೋಲಿಗೆ ತುತ್ತಾಯಿತು.

148 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅನಗತ್ಯ ದಾಖಲೆ ಬರೆದ ಭಾರತ

Profile Abhilash BC Jun 25, 2025 8:34 AM

ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌(IND vs ENG) ಪಂದ್ಯದಲ್ಲಿ ಭಾರತ 5 ವಿಕೆಟ್‌ ಅಂತರದ ಸೋಲು ಕಾಣುವ ಮೂಲಕ ಅನಗತ್ಯ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. 148 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ತಂಡದ ಐದು ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿಯೂ ಸೋಲು ಕಂಡ ಮೊದಲ ತಂಡ ಎನ್ನುವ ಕುಖ್ಯಾತಿಗೆ ಭಾರತ ಪಾತ್ರವಾಯಿತು. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌, ಶುಭ್‌ಮನ್‌ ಗಿಲ್‌, ಕೆಎಲ್‌ ರಾಹುಲ್‌ ಹಾಗೂ ರಿಷಬ್‌ ಪಂತ್‌ (2 ಬಾರಿ) ಶತಕ ಬಾರಿಸಿದರೂ ಭಾರತ ಸೋಲು ಕಂಡಿತು.

ಹೆಡಿಂಗ್ಲೆಯಲ್ಲಿ ನಡೆದ ಈ ಟೆಸ್ಟ್‌ ಪಂದ್ಯದಲ್ಲಿ ಭಾರತ ನೀಡಿದ 371 ರನ್‌ಗಳ ಗುರಿಯನ್ನು ಸಲೀಸಾಗಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ 5 ವಿಕೆಟ್‌ಗೆ 373 ರನ್‌ ಬಾರಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಲೀಡ್‌ ಪಡೆದುಕೊಂಡರೂ ದ್ವಿತೀಯ ಇನಿಂಗ್ಸ್‌ನಲ್ಲಿ ಸಂಪೂರ್ಣ ಬೌಲಿಂಗ್‌ ವೈಫಲ್ಯ ಕಂಡು ಸೋಲಿಗೆ ತುತ್ತಾಯಿತು.

ಅಂತಿಮ ದಿನವಾದ ಮಂಗಳವಾರ 21 ರನ್‌ಗಳಿಂದ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡಕ್ಕೆ ಬೆನ್‌ ಡಕೆಟ್‌ ಅದ್ಭುತ ಶತಕ ಬಾರಿಸುವ ಮೂಲಕ ನೆರವಾದರು. 170 ಎಸೆತ ಎದುರಿಸಿದ ಡಕೆಟ್‌ 21 ಬೌಂಡರಿ, 1 ಸಿಕ್ಸರ್‌ನೊಂದಿಗೆ 149 ರನ್‌ ಬಾರಿಸಿದರು. ಮೊದಲ ವಿಕೆಟ್‌ಗೆ ಡಕೆಟ್‌ ಜಾಗೂ ಜಾಕ್‌ ಕ್ರಾಲಿ 188 ರನ್‌ ಜೊತೆಯಾಟ ನಡೆಸಿತು. ಕ್ರಾಲಿ 7 ಬೌಂಡರಿಯೊಂದಿಗೆ 65 ರನ್‌ ಬಾರಿಸಿ ಪ್ರಸಿದ್ಧ ಕೃಷ್ಣಗೆ ವಿಕೆಟ್‌ ಒಪ್ಪಿಸಿದರು. ಅಂತಿಮ ಹಂತದಲ್ಲಿ ಜೋ ರೂಟ್‌ ಅಜೇಯ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪರ ಶಾರ್ದೂಲ್‌ ಠಾಕೂರ್‌ ಮತ್ತು ಪ್ರಸಿದ್ಧ್‌ ಕೃಷ್ಣ ತಲಾ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ IND vs ENG: ಇಂಗ್ಲೆಂಡ್‌ ಎದುರು ಮೊದಲನೇ ಟಸ್ಟ್‌ ಪಂದ್ಯದಲ್ಲಿಯೇ ಎಡವಿದ ಭಾರತ!

ಟೆಸ್ಟ್‌ ಪಂದ್ಯವೊಂದರ ಅಂತಿಮ ದಿನ (5ನೇ ದಿನ) ಗರಿಷ್ಠ ರನ್‌ ಬಾರಿಸಿದ 2ನೇ ದೃಷ್ಟಾಂತ ಇದಾಗಿದೆ. ಇದಕ್ಕೂ ಮುನ್ನ 1948ರಲ್ಲಿ ಇದೇ ಮೈದಾನದಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ 404 ರನ್‌ ಬಾರಿಸಿದ್ದು ದಾಖಲೆ ಎನಿಸಿದೆ.