Glenn Maxwell ODI retirement: ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್ವೆಲ್
36 ವರ್ಷದ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡದ ಪರ 149 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 4 ಶತಕ, 23 ಅರ್ಧಶತಕ ಸಹಿತ 3,990 ರನ್ ಮತ್ತು 77 ವಿಕೆಟ್ ಗಳಿಸಿದ್ದಾರೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾಯದ ಮಧ್ಯೆಯೂ ಮ್ಯಾಕ್ಸ್ವೆಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕ ಸಿಡಿಸಿ ತಾನೊಬ್ಬ ದೈತ್ಯ ಪ್ರತಿಭೆ ಎನ್ನುವುದನ್ನು ನಿರೂಪಿಸಿ ಆಸ್ಟ್ರೇಲಿಯ ತಂಡದ ವೈಭವಯುತ ಜಯಕ್ಕೆ ಸಾಕ್ಷಿಯಾಗಿದ್ದರು.


ಸಿಡ್ನಿ: ಆಸ್ಟ್ರೇಲಿಯಾದ ಸ್ಪೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಅವರು ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ(Glenn Maxwell ODI retirement) ಘೋಷಿಸಿದ್ದಾರೆ. ಜೂ.2, ಸೋಮವಾರ ನಿವೃತ್ತಿ ಪ್ರಕಟಿಸಿದ ಮ್ಯಾಕ್ಸ್ವೆಲ್, ಮುಂದಿನ ವರ್ಷ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗಮನದಲ್ಲಿರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. 'ಸ್ವಾರ್ಥಕ್ಕಾಗಿ ಆಡಲು ಬಯಸುವುದಿಲ್ಲ' ಎಂದಿದ್ದಾರೆ.
'ನಾನು ಆಡಲು ಸಮರ್ಥನಿದ್ದರೆ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಯಾವಾಗಲೂ ಹೇಳುತ್ತಿದ್ದೆ. 2027ರ ವಿಶ್ವಕಪ್ ಬಹಳ ದೂರವಿದೆ. ಹೀಗಾಗಿ ಸ್ವಾರ್ಥಕ್ಕಾಗಿ ಆಡಲು ಬಯಸುವುದಿಲ್ಲ. ಯುವ ಆಟಗಾರರಿಗೆ ಅವಕಾಶ ಸಿಗಲಿ' ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ. ಮ್ಯಾಕ್ಸ್ವೆಲ್ ಆಸೀಸ್ ತಂಡದ ಎರಡು ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗಿದ್ದಾರೆ.
36 ವರ್ಷದ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ತಂಡದ ಪರ 149 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 4 ಶತಕ, 23 ಅರ್ಧಶತಕ ಸಹಿತ 3,990 ರನ್ ಮತ್ತು 77 ವಿಕೆಟ್ ಗಳಿಸಿದ್ದಾರೆ. 2023ರ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಗಾಯದ ಮಧ್ಯೆಯೂ ಮ್ಯಾಕ್ಸ್ವೆಲ್ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕ ಸಿಡಿಸಿ ತಾನೊಬ್ಬ ದೈತ್ಯ ಪ್ರತಿಭೆ ಎನ್ನುವುದನ್ನು ನಿರೂಪಿಸಿ ಆಸ್ಟ್ರೇಲಿಯ ತಂಡದ ವೈಭವಯುತ ಜಯಕ್ಕೆ ಸಾಕ್ಷಿಯಾಗಿದ್ದರು. ವಿಶ್ವಕಪ್ ಹೀರೋ ಎನಿಸಿಕೊಂಡಿದ್ದರು.
91 ರನ್ ಆಗುವಷ್ಟರಲ್ಲಿ 7 ಪ್ರಮುಖ ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದ್ದ ಆಸೀಸ್ಗೆ ಮ್ಯಾಕ್ಸ್ವೆಲ್ ಏಕಾಂಗಿ ಬ್ಯಾಟಿಂಗ್ ಮೂಲಕ ಮ್ಯಾಕ್ಸ್ವೆಲ್ 128 ಎಸೆತಗಳಿಂದ 201 ರನ್ ಬಾರಿಸಿ ವಿಶ್ವಕಪ್ ದ್ವಿಶತಕದ ಸಂಭ್ರಮ ಆಚರಿಸಿದ್ದರು. ಬರೋಬ್ಬರಿ 21 ಬೌಂಡರಿ ಮತ್ತು 10 ಆಕರ್ಷಕ ಸಿಕ್ಸರ್ ಬಾರಿಸಿದ್ದರು. ತೀವ್ರವಾದ ಕಾಲುನೋವಿನ ನಡುವೆ ಕುಂಟುತ್ತಾ ಕುಂಟುತ್ತಾ ಒಂದೊಂದು ರನ್ಗೂ ನೋವಿನಲ್ಲೇ ಓಡಿ ಆ ಬಳಿಕ ದೊಡ್ಡ ಹೊಡೆತಗಳ ಮೂಲಕವೇ ಗೆಲುವಿನ ಸಂಭ್ರಮಕ್ಕೆ ಸಾಖಿಯಾಗಿದ್ದರು. ವಿಶ್ವ ಕ್ರಿಕೆಟ್ನಲ್ಲಿ ಮ್ಯಾಕ್ಸ್ವೆಲ್ ಅವರ ಈ ಆಟ ಎಂದಿಗೂ ಸ್ಮರಣೀಯವಾಗಿರಲಿದೆ.
ಇದನ್ನೂ ಓದಿ IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?