ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Final: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

ಒಂದೊಮ್ಮೆ ಮೀಸಲು ದಿನದಂದೂ ಫ‌ಲಿತಾಂಶ ಬರದೇ ಹೋದರೆ, ತಲಾ ಒಂದು ಓವರ್‌ ಗಳ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಮಳೆಯ ತೀವ್ರತೆಯಿಂದ ಅದೂ ಸಾಧ್ಯವಾಗದಿದ್ದರೆ ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆಗ ಪಂಜಾಬ್‌ ಚಾಂಪಿಯನ್‌ ಆಗಲಿದೆ. ಅದು ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿತ್ತು.

ಫೈನಲ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ? ನಿಯಮ ಏನು ಹೇಳುತ್ತದೆ?

Profile Abhilash BC Jun 2, 2025 3:13 PM

ಅಹಮದಾಬಾದ್‌: ಐಪಿಎಲ್‌ 2025(IPL 2025) ಅಂತಿಮ ಹಂತಕ್ಕೆ ಬಂದಿದೆ. ನಾಳೆ(ಜೂ. 3, ಮಂಗಳವಾರ) ನಡೆಯಲಿರುವ ಫೈನಲ್(IPL 2025 Final) ಪಂದ್ಯದಲ್ಲಿ ಇದುವರೆಗೂ ಟ್ರೋಫಿ ಗೆಲ್ಲದ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌(rcb vs pbks final) ತಂಡಗಳು ಚೊಚ್ಚಲ ಟ್ರೋಫಿಯ ಇರಾದೆಯೊಂದಿಗೆ ಆಡಲಿದೆ. ಪ್ರಶಸ್ತಿ ಕಾಳಗಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂ ಅಣಿಯಾಗಿದೆ. ಆದರೆ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಭಾನುವಾರ ನಡೆದಿದ್ದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯಕ್ಕೂ ಮಳೆ ಅಡ್ಡಿ ಪಡಿಸಿತ್ತು. ಹೀಗಾಗಿ ಪಂದ್ಯ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡಿತ್ತು. ಇದೀಗ ಫೈನಲ್‌ ಪಂದ್ಯಕ್ಕೂ ಮಳೆಯ ಭೀತಿ ಇದೆ. ಇದರ ನಡುವೆ ಪಂದ್ಯದ ಫ‌ಲಿತಾಂಶ ನಿರ್ಧರಿಸಲು ಹಲವು ಲೆಕ್ಕಾಚಾರಗಳಿವೆ. ಆ ಕುತೂಹಲಕರ ಸಂಗತಿಗಳು ಹೀಗಿವೆ.

ಮಂಗಳವಾರ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಹೆಚ್ಚುವರಿ 2 ಗಂಟೆ ನೀಡಲಾಗುತ್ತೆ. ಆ ಅವಧಿಯಲ್ಲಿ ಪಂದ್ಯ ಮುಗಿಯಲೇಬೇಕು. ಒಂದು ವೇಳೆ ನಿಗದಿತ ದಿನವಾದ ಮಂಗಳವಾರ ಏನೂ ಆಟ ನಡೆಯದೇ ಹೋದರೆ ಮೀಸಲು ದಿನಕ್ಕೆ ಪಂದ್ಯ ಮುಂದೂಡಲ್ಪಡುತ್ತದೆ. ಮೀಸಲು ದಿನದಂದು ಹಿಂದಿನ ದಿನದಂದು ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ.

ಮೀಸಲು ದಿನವೂ ಮಳೆ ಬಂದರೆ?

ಒಂದೊಮ್ಮೆ ಮೀಸಲು ದಿನದಂದೂ ಫ‌ಲಿತಾಂಶ ಬರದೇ ಹೋದರೆ, ತಲಾ ಒಂದು ಓವರ್‌ ಗಳ ಸೂಪರ್‌ ಓವರ್‌ ಆಡಿಸಲಾಗುತ್ತದೆ. ಮಳೆಯ ತೀವ್ರತೆಯಿಂದ ಅದೂ ಸಾಧ್ಯವಾಗದಿದ್ದರೆ ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆಗ ಪಂಜಾಬ್‌ ಚಾಂಪಿಯನ್‌ ಆಗಲಿದೆ. ಅದು ಲೀಗ್‌ ಹಂತದಲ್ಲಿ ಅಗ್ರಸ್ಥಾನಿಯಾಗಿತ್ತು.

ಇದನ್ನೂ ಓದಿ IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!

ಮಳೆಯ ತೀವ್ರತೆಯಿಂದಾಗಿಯೇ ಕೋಲ್ಕತಾದಲ್ಲಿ ನಡೆಯಬೇಕಿದ್ದ ಫೈನಲ್‌ ಪಂದ್ಯವನ್ನು ಬಿಸಿಸಿಐ ಅಹಮದಾಬಾದ್‌ಗೆ ಸ್ಥಳಾಂತರಿಸಿತ್ತು. ಆದರೆ ಇದೀಗ ಇಲ್ಲಿಯೂ ಮಳೆ ಭೀತಿ ಎದುರಾಗಿದೆ.