ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heinrich Klaasen: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ಲಾಸೆನ್‌ ದಿಢೀರ್‌ ನಿವೃತ್ತಿ

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಕ್ಲಾಸೆನ್‌, ಏಕದಿನದಲ್ಲಿ 2,141, ಟಿ20 ಕ್ರಿಕೆಟ್‌ನಲ್ಲಿ 1,000, ಮತ್ತು ಟೆಸ್ಟ್‌ನಲ್ಲಿ 104 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟು ನಾಲ್ಕು ಅಂತರರಾಷ್ಟ್ರೀಯ ಶತಕಗಳು ಸೇರಿವೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಿದ್ದರು. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಒಂದು ಶತಕ ಕೂಡ ಬಾರಿಸಿ ಮಿಂಚಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕ್ಲಾಸೆನ್‌ ದಿಢೀರ್‌ ನಿವೃತ್ತಿ

Profile Abhilash BC Jun 2, 2025 4:39 PM

ಜೊಹಾನ್ಸ್‌ಬರ್ಗ್‌: ಕ್ರಿಕೆಟ್‌ ಅಭಿಮಾನಿಗಳಿಗೆ ಸೋಮವಾರ ಒಂದಲ್ಲ ಎರಡು ಆಘಾತ ಉಂಟಾಗಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌(Glenn Maxwell) ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕೆಲವೇ ಕ್ಷಣದಲ್ಲಿ ದಕ್ಷಿಣ ಆಫ್ರಿಕಾ ಸ್ಟಾರ್‌ ಆಟಗಾರ ಹೆನ್ರಿಕ್‌ ಕ್ಲಾಸೆನ್‌(Heinrich Klaasen) ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದರು. ಉಭಯ ಆಟಗಾರರ ಈ ನೀವೃತ್ತಿ ಕ್ರಿಕೆಟ್ ಜಗತ್ತನ್ನೇ ಅಚ್ಚರಿಗೊಳಿಸುವಂತೆ ಮಾಡಿದೆ.

33 ವರ್ಷದ ಕ್ಲಾಸೆನ್‌ ಜೂನ್ 2 ರಂದು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ನಿವೃತ್ತಿ ಪ್ರಕಟಿಸಿದರು. ಕುಟುಂಬದೊಂದಿಗೆ ಸಮಯ ಕಳೆಯಲು ಆದ್ಯತೆ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಕ್ಲಾಸೆನ್‌ ತಿಳಿಸಿದ್ದಾರೆ. ಇದೇ ಜೂನ್‌ 12 ರಿಂದ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಕೆಲವೇ ದಿನಗಳು ಬಾಕಿ ಇರುವಾಗಲೇ ಕ್ಲಾಸೆನ್ ಈ ನಿರ್ಧಾರ ತೆಗೆದುಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದ ಕ್ಲಾಸೆನ್‌, ಏಕದಿನದಲ್ಲಿ 2,141, ಟಿ20 ಕ್ರಿಕೆಟ್‌ನಲ್ಲಿ 1,000, ಮತ್ತು ಟೆಸ್ಟ್‌ನಲ್ಲಿ 104 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟು ನಾಲ್ಕು ಅಂತರರಾಷ್ಟ್ರೀಯ ಶತಕಗಳು ಸೇರಿವೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಆಡಿದ್ದರು. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಒಂದು ಶತಕ ಕೂಡ ಬಾರಿಸಿ ಮಿಂಚಿದ್ದರು.

"ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ಘೋಷಿಸುತ್ತಿರುವ ಈ ದಿನ ನನಗೆ ದುಃಖದ ದಿನ. ನನಗೆ ಮತ್ತು ನನ್ನ ಕುಟುಂಬದ ಭವಿಷ್ಯಕ್ಕಾಗಿ ಯಾವುದು ಉತ್ತಮ ಎಂದು ನಿರ್ಧರಿಸಲು ನನಗೆ ಬಹಳ ಸಮಯ ಹಿಡಿಯಿತು. ಇದು ನಿಜವಾಗಿಯೂ ತುಂಬಾ ಕಷ್ಟಕರವಾದ ನಿರ್ಧಾರವಾಗಿತ್ತು ಆದರೆ ಕುಟುಂಬಕ್ಕೆ ಆದ್ಯತೆ ನೀಡುವ ಸಲುವಾಗಿ ಗಟ್ಟಿ ಮನಸ್ಸು ಮಾಡಿ ಈ ನಿರ್ಧಾರ ಕೈಗೊಂಡೆ" ಎಂದು ಕ್ಲಾಸೆನ್ ಹೇಳಿದರು.

ಕ್ಲಾಸೆನ್ 2024 ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದೀಗ ಏಕದಿನ ಮತ್ತು ಟಿ20ಗೂ ಗುಡ್‌ಬೈ ಹೇಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದಾರೆ.

ಇದನ್ನೂ ಓದಿ Glenn Maxwell ODI retirement: ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್