ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Points Table: ರೋಚಕ ಗೆಲುವಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದ ಪಂಜಾಬ್‌ ಕಿಂಗ್ಸ್‌

PBKS vs KKR: ಲಕ್ನೋ ಸೂಪರ್‌ ಜೈಂಟ್ಸ್‌(5), ಮುಂಬೈ ಇಂಡಿಯನ್ಸ್‌(7), ರಾಜಸ್ಥಾನ್‌ ರಾಯಲ್ಸ್‌(8), ಸನ್‌ರೈಸರ್ಸ್‌ ಹೈದರಾಬಾದ್‌(9), ಚೆನ್ನೈ ಸೂಪರ್‌ ಕಿಂಗ್ಸ್‌(10) ಸ್ಥಾನದಲ್ಲಿದೆ. ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ.

ರೋಚಕ ಗೆಲುವಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಜಿಗಿದ ಪಂಜಾಬ್‌ ಕಿಂಗ್ಸ್‌

Profile Abhilash BC Apr 16, 2025 6:22 AM

ಚಂಡೀಗಢ: ಅತ್ಯಂತ ರೋಮಾಂಚನಕಾರಿಯಾಗಿ ನಡೆದ ಕೋಲ್ಕತ್ತಾ ನೈಟ್‌ ರೈಡರ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌(PBKS vs KKR) ನಡುವಿನ ಮಂಗಳವಾರದ ಐಪಿಎಲ್‌(IPL 2025) ಪಂದ್ಯದಲ್ಲಿ ಆತಿಥೇಯ ಪಂಜಾಬ್‌ ರೋಚಕ ಗೆಲುವು ಸಾಧಿಸಿತು. ಕೇವಲ 111 ರನ್‌ ಉಳಿಸಿಕೊಂಡ ಶ್ರೇಯಸ್‌ ಅಯ್ಯರ್‌ ಪಡೆ 16 ರನ್‌ ಅಂತರದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿಯೂ(IPL 2025 Points Table) ಪ್ರಗತಿ ಸಾಧಿಸಿದೆ. ಎರಡು ಸ್ಥಾನಗಳ ಜಿಗಿತದೊಂದಿಗೆ ನಾಲ್ಕನೇ ಸ್ಥಾನಕ್ಕೆ ಬಂದು ನಿಂತಿದೆ. ಸೋಲು ಕಂಡ ಕೆಕೆಆರ್‌ 6ನೇ ಸ್ಥಾನದಲ್ಲಿದೆ.

ಅಗ್ರ ಮೂರು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಗುಜರಾತ್‌ ಟೈಟಾನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಆರ್‌ಸಿಬಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿದೆ. ಉಳಿದಂತೆ ಲಕ್ನೋ ಸೂಪರ್‌ ಜೈಂಟ್ಸ್‌(5), ಮುಂಬೈ ಇಂಡಿಯನ್ಸ್‌(7), ರಾಜಸ್ಥಾನ್‌ ರಾಯಲ್ಸ್‌(8), ಸನ್‌ರೈಸರ್ಸ್‌ ಹೈದರಾಬಾದ್‌(9), ಚೆನ್ನೈ ಸೂಪರ್‌ ಕಿಂಗ್ಸ್‌(10) ಸ್ಥಾನದಲ್ಲಿದೆ. ಆರೆಂಜ್‌ ಕ್ಯಾಪ್‌ ಮತ್ತು ಪರ್ಪಲ್‌ ಕ್ಯಾಪ್‌ ವಿಭಾಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ನಿಕೋಲಸ್‌ ಪೂರನ್‌ ಆರೆಂಜ್‌ ಕ್ಯಾಪ್‌ ಪಡೆದಿದ್ದರೆ, ನೂರ್‌ ಅಹ್ಮದ್‌ ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

ಬುಧವಾರ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಒಂದೊಮ್ಮೆ ಡೆಲ್ಲಿ ಗೆದ್ದರೆ ಗುಜರಾತ್‌ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನ ವಶಪಡಿಸಿಕೊಳ್ಳಲಿದೆ.

ಅಂಕಪಟ್ಟಿ ಹೀಗಿದೆ



ಪಂಜಾಬ್‌ಗೆ ರೋಚಕ ಗೆಲುವು

ಮಂಗಳವಾರ ನಡೆದ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಪಂಜಾಬ್‌ 15.3 ಓವರ್‌ಗಳಲ್ಲಿ ಕೇವಲ 111 ರನ್‌ಗೆ ಆಲೌಟ್‌ ಆಯಿತು. ಈ ಸಣ್ಣ ಮೊತ್ತವನ್ನು ಕೆಕೆಆರ್‌ 10 ಓವರ್‌ನಲ್ಲಿ ಬಾರಿಸಿ ಭರ್ಜರಿ ಗೆಲುವು ಸಾಧಿಸಬಹುದೆಂದು ನಿರೀಕ್ಷೆ ಮಾಡಲಾಯಿತು. ಆದರೆ ಪಂಜಾಬ್‌ ಕಿಂಗ್ಸ್‌ ಬೌಲರ್‌ಗಳು ಉತ್ಕೃಷ್ಟ ಮಟ್ಟದ ಬೌಲಿಂಗ್‌ ದಾಳಿ ನಡೆಸಿ ಕೆಕೆಆರ್‌ ತಂಡವನ್ನು 95 ರನ್‌ಗೆ ಆಲೌಟ್‌ ಮಾಡುವ ಮೂಲಕ ದಾಖಲೆಯ 16 ರನ್‌ ಅಂತರದ ಗೆಲುವು ಸಾಧಿಸಿ ಮೆರೆದಾಡಿತು.