ಹಾಂಗ್‌ಕಾಂಗ್: ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಾದ ಹಾಂಗ್ ಕಾಂಗ್(Satwiksairaj Rankireddy , Chirag Shetty ) ಓಪನ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ(Satwiksairaj Rankireddy , Chirag Shetty ) ಮತ್ತು ಚಿರಾಗ್ ಶೆಟ್ಟಿ ಜೋಡಿ ಸೋತು ರನ್ನರ್ ಅಪ್ ಸ್ಥಾನ ಪಡೆದರು. ಭಾನುವಾರ ನಡೆದ ಫೈನಲ್‌ನಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಮೂರು ಗೇಮ್‌ಗಳ ತೀವ್ರ ಹೋರಟ ನಡೆಸಿದರೂ 19-21, 21-14, 21-17 ಅಂತರದಿಂದ ಪರಾಭವಗೊಂಡರು.
ಎಂಟನೇ ಶ್ರೇಯಾಂಕದ ಭಾರತೀಯ ಜೋಡಿ ಮೊದಲ ಗೇಮ್ ಅನ್ನು ತಮ್ಮದಾಗಿಸಿಕೊಂಡಿತು ಆದರೆ ಲಿಯಾಂಗ್ ಮತ್ತು ವಾಂಗ್ ಎರಡನೇ ಹಾಗೂ ಅಂತಿಮ ಗೇಮ್ ಗೇಮ್ ಅನ್ನು ಗೆದ್ದುಕೊಂಡರು. ಪಂದ್ಯ 61 ನಿಮಿಷಗಳಲ್ಲಿ ಮುಕ್ತಾಯಕಂಡಿತು. ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತರಾದ ಸಾತ್ವಿಕ್ ಮತ್ತು ಚಿರಾಗ್ ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಥೈಲ್ಯಾಂಡ್ ಓಪನ್ ನಂತರ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸದಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.
ಸೆಮಿಫೈನಲ್‌ನಲ್ಲಿ ಸಾತ್ವಿಕ್–ಚಿರಾಗ್ ಜೋಡಿಯು ಚೀನಾ ತೈಪೆಯ ಶೆನ್ ಶೆಂಗ್ ಕುವಾನ್– ಲಿನ್ ಬಿಂಗ್ ವೈ ಅವರ ವಿರುದ್ಧ 21-17, 21-15ರ ನೇರ ಗೇಮ್‌ಗಳಿಂದ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಎಂಟರ ಘಟ್ಟದ ಪಂದ್ಯದಲ್ಲಿ 21–14, 20–22, 21–16ರಿಂದ ಮಲೇಷ್ಯಾದ ಜುನೈದಿ ಅರಿಫ್– ರಾಯ್ ಕಿಂಗ್ ಯಾಪ್ ಅವರನ್ನು ಮಣಿಸಿತ್ತು.
ಇದನ್ನೂ ಓದಿ Asia Cup 2025: ತಮ್ಮ ನೆಚ್ಚಿನ ಇಬ್ಬರು ಕ್ರಿಕೆಟಿಗರನ್ನು ಬಹಿರಂಗಪಡಿಸಿದ ಶುಭಮನ್ ಗಿಲ್!