ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದು ಆರಂಭಗೊಳ್ಳುವ ಐದನೇ ಟೆಸ್ಟ್‌ಗಿಲ್ಲ ವೇಗಿ ಬುಮ್ರಾ

IND vs ENG 5th Test: ಇಂಗ್ಲೆಂಡ್‌ ತಂಡ ಈ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಭುಜದ ಗಾಯಕ್ಕೆ ತುತ್ತಾಗಿರುವ ನಾಯಕ ಬೆನ್‌ ಸ್ಟೋಕ್ಸ್‌ ಪಂದ್ಯಕ್ಕೆ ಗೈರಾಗಲಿದ್ದಾರೆ. ವೇಗಿ ಜೋಫ್ರಾ ಆರ್ಚರ್‌, ಬ್ರೈಡನ್‌ ಕಾರ್ಸ್‌, ಸ್ಪಿನ್ನರ್‌ ಡಾವ್ಸನ್‌ ಪಂದ್ಯದಿಂದ ಹೊರಬಿದ್ದಿದ್ದಾರೆ.

ಇಂದು ಆರಂಭಗೊಳ್ಳುವ  ಐದನೇ ಟೆಸ್ಟ್‌ಗಿಲ್ಲ ವೇಗಿ ಬುಮ್ರಾ

Profile Abhilash BC Jul 31, 2025 9:04 AM

ಲಂಡನ್‌: ಇಂದು ಆರಂಭಗೊಳ್ಳಲಿರುವ ಇಂಗ್ಲೆಂಡ್‌(IND vs ENG) ವಿರುದ್ಧದ 5ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯದಿಂದ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಕಾರ್ಯದೊತ್ತದ ತಗ್ಗಿಸುವ ನಿಟ್ಟಿನಲ್ಲಿ ಸರಣಿಯ 5 ಪಂದ್ಯಗಳ ಪೈಕಿ ಮೂರರಲ್ಲಿ ಮಾತ್ರ ಬುಮ್ರಾ ಆಡಲಿದ್ದಾರೆ ಎಂದು ಈಗಾಗಲೇ ಕೋಚ್‌ ಗೌತಮ್‌ ಗಂಭೀರ್‌ ಸ್ಪಷ್ಟಪಡಿಸಿದ್ದರು. ಅವರು ಈಗಾಗಲೇ 3 ಪಂದ್ಯಗಳನ್ನು ಆಡಿದ್ದಾರೆ.

ಕೊನೆ ಪಂದ್ಯ ಭಾರತದ ಪಾಲಿಗೆ ನಿರ್ಣಾಯಕವಾಗಿದರೂ ಕೂಡ ಇಂಗ್ಲೆಂಡ್‌ ತಂಡದಲ್ಲಿ ಜೋಫ್ರ ಆರ್ಚರ್‌, ಬೆನ್‌ ಸ್ಟೋಕ್ಸ್‌ ಇಲ್ಲದ ಕಾರಣ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ವರದಿ ಪ್ರಕಾರ, ಬುಮ್ರಾಗೆ ವಿಶ್ರಾಂತಿ ನೀಡಬೇಕಿದೆ. ಹೀಗಾಗಿ ಅವರು ಕೊನೆ ಟೆಸ್ಟ್‌ಗೆ ಗೈರಾಗಲಿದ್ದಾರೆ ಎಂದು ವರದಿಯಾಗಿದೆ. ಅವರ ಬದಲು ಆಕಾಶ್‌ದೀಪ್‌ ತಂಡದಲ್ಲಿ ಸ್ಥಾನ ಪಡೆಯಬಹುದು. ಇನ್ನು, ಕೊನೆ ಪಂದ್ಯದಲ್ಲಿ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ರನ್ನು ಆಡಿಸಲಾಗುತ್ತದೆ ಎಂದು ವರದಿಯಾಗಿದೆ. ಅವರಿಗೆ ಶಾರ್ದೂಲ್‌ ಠಾಕೂರ್‌ ಜಾಗ ಬಿಟ್ಟುಕೊಡಬೇಕಾಗಬಹುದು. ಆಕಾಶ್‌ದೀಪ್‌ ಗಾಯದಿಂದ ಚೇತರಿಸಿಕೊಂಡಿದ್ದು, ಪಂದ್ಯಕ್ಕೆ ಲಭ್ಯವಿದ್ದಾರೆ. ಸಿರಾಜ್‌ ಜತೆ ಆಕಾಶ್‌ದೀಪ್‌ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಇಂಗ್ಲೆಂಡ್‌ ತಂಡ ಈ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಭುಜದ ಗಾಯಕ್ಕೆ ತುತ್ತಾಗಿರುವ ನಾಯಕ ಬೆನ್‌ ಸ್ಟೋಕ್ಸ್‌ ಪಂದ್ಯಕ್ಕೆ ಗೈರಾಗಲಿದ್ದಾರೆ. ವೇಗಿ ಜೋಫ್ರಾ ಆರ್ಚರ್‌, ಬ್ರೈಡನ್‌ ಕಾರ್ಸ್‌, ಸ್ಪಿನ್ನರ್‌ ಡಾವ್ಸನ್‌ ಪಂದ್ಯದಿಂದ ಹೊರಬಿದ್ದಿದ್ದಾರೆ.

ಭಾರತ ಸಂಭವನೀಯ ತಂಡ

ಕೆ.ಎಲ್‌ ರಾಹುಲ್‌, ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌(ನಾಯಕ), ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌, ಧ್ರುವ್ ಜುರೆಲ್, ಶಾರ್ದೂಲ್‌ ಠಾಕೂರ್‌ /ಕುಲ್‌ದೀಪ್‌ ಯಾದವ್‌, ಆಕಾಶ್‌ದೀಪ್‌, ಮೊಹಮ್ಮದ್‌ ಸಿರಾಜ್‌, ಅರ್ಶ್‌ದೀಪ್‌ ಸಿಂಗ್.

ಇಂಗ್ಲೆಂಡ್‌ ಆಡುವ ಬಳಗ: ಜ್ಯಾಕ್‌ ಕ್ರಾಲಿ, ಡಕೆಟ್‌, ಓಲಿ ಪೋಪ್‌(ನಾಯಕ), ರೂಟ್‌, ಬ್ರೂಕ್‌, ಬೆಥೆಲ್‌, ಜೆಮೀ ಸ್ಮಿತ್‌, ಕ್ರಿಸ್‌ ವೋಕ್ಸ್‌, ಆಟ್ಕಿನ್ಸನ್‌, ಓವರ್‌ಟನ್‌, ಜೋಶ್‌ ಟಂಗ್‌.

ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ

ಇದನ್ನೂ ಓದಿ IND vs ENG: ಓವಲ್‌ ಪಿಚ್‌ ಕ್ಯುರೇಟರ್‌ ಜತೆ ಗಂಭೀರ್‌ ಜಗಳದ ಬಗ್ಗೆ ಶುಭಮನ್‌ ಗಿಲ್‌ ಪ್ರತಿಕ್ರಿಯೆ!