ನ್ಯೂಜಿಲೆಂಡ್ ನೆಲದಲ್ಲಿ ಸಚಿನ್ ದಾಖಲೆ ಮುರಿಯುವ ಸನಿಹ ವಿರಾಟ್ ಕೊಹ್ಲಿ
IND vs NZ: ನ್ಯೂಜಿಲೆಂಡ್ನಲ್ಲಿ ಆಡಿದ 18 ಏಕದಿನ ಪಂದ್ಯಗಳಲ್ಲಿ 652 ರನ್ಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಮೊತ್ತ ಅಜೇಯ 163 ರನ್.
Virat Kohli -
ನವದೆಹಲಿ, ನ.3: ಬುಧವಾರ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದ್ದು, ಈ ವೇಳೆ ವಿರಾಟ್ ಕೊಹ್ಲಿ ಪ್ರಮುಖ ಮೈಲಿಗಲ್ಲನ್ನು ತಲುಪುವ ಗುರಿ ಹೊಂದಿದ್ದಾರೆ. ಭಾರತ ತಂಡದ ಮಾಜಿ ನಾಯಕ, ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ದಾಖಲೆಯೊಂದನ್ನು ಮುರಿಯುವ ಸನಿಹದಲ್ಲಿದ್ದಾರೆ.
ನ್ಯೂಜಿಲೆಂಡ್ನಲ್ಲಿ ಆಡಿದ ಏಕದಿನ ಪಂದ್ಯಗಳಲ್ಲಿ, ಭಾರತೀಯ ಬ್ಯಾಟರ್ಗಳ ಪೈಕಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ಆಡಿದ 11 ಪಂದ್ಯಗಳಲ್ಲಿ ಅವರು 514 ರನ್ ಗಳಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಅವರಿಗೆ ಇನ್ನೂ 139 ರನ್ಗಳ ಅಗತ್ಯವಿದೆ.
ನ್ಯೂಜಿಲೆಂಡ್ನಲ್ಲಿ ಆಡಿದ 18 ಏಕದಿನ ಪಂದ್ಯಗಳಲ್ಲಿ 652 ರನ್ಗಳನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಮೊತ್ತ ಅಜೇಯ 163 ರನ್.
ಮಹಿಳಾ ಟಿ20 ಕ್ರಿಕೆಟ್ನಲ್ಲಿ ಅತಿ ವೇಗದ ಅರ್ಧಶತಕ; ಪ್ರೇಮಾ ರಾವತ್ ವಿಶ್ವ ದಾಖಲೆ
ವೀರೇಂದ್ರ ಸೆಹ್ವಾಗ್ 12 ಪಂದ್ಯಗಳಲ್ಲಿ 598 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಗಳಿಸಿದ್ದು, ಅವರ ಗರಿಷ್ಠ ಮೊತ್ತ 125 (ಔಟಾಗದೆ) ಆಗಿದೆ.
11 ಪಂದ್ಯಗಳಲ್ಲಿ 514 ರನ್ಗಳೊಂದಿಗೆ ಮೂರನೇ ಸ್ಥಾನದಲ್ಲಿರುವ ಕೊಹ್ಲಿ, ನ್ಯೂಜಿಲೆಂಡ್ನಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 123 ರನ್. ಈ ಬಾರಿ 5 ಪಂದ್ಯಗಳ ಸರಣಿಯಾದ ಕಾರಣ ಕೊಹ್ಲಿಗೆ ಸಚಿನ್ ಮತ್ತು ಸೆಹ್ವಾಗ್ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಬಹುದು. ಎಂಎಸ್ ಧೋನಿ 13 ಪಂದ್ಯಗಳಲ್ಲಿ 505 ರನ್ ಗಳಿಸಿ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ರಾಹುಲ್ ದ್ರಾವಿಡ್ 12 ಪಂದ್ಯಗಳಲ್ಲಿ 425 ರನ್ ಗಳಿಸುವ ಮೂಲಕ ಅಗ್ರ ಐವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಒಂದು ಶತಕ ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದು, ಅವರ ಗರಿಷ್ಠ ಮೊತ್ತ ಅಜೇಯ 123 ರನ್ ಆಗಿದೆ.