ದುಬೈ: ಏಷ್ಯಾ ಕಪ್(Asia Cup 2025) ಕ್ರಿಕೆಟ್‌ನಲ್ಲಿ ಸಾಂಪ್ರಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ(IND vs PAK) ನಡುವಿನ ಮೂರನೇ ಸುತ್ತಿನ ಕಾದಾಟಕ್ಕೆ ಅಖಾಡ ಸಜ್ಜಾಗಿದೆ. ಭಾನುವಾರ(ಸೆ.28) ದುಬೈಯಲ್ಲಿ ಈ ಮುಖಾಮುಖಿ ನಡೆಯಲಿದ್ದು, ಕ್ರಿಕೆಟ್ ಪ್ರೇಮಗಳ ಚುಟುಕು ಕ್ರಿಕೆಟ್‌ನ ಭಾರೀ ರೋಮಾಂಚನವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಪಂದ್ಯಕ್ಕೂ ಮುನ್ನ ಉಭಯ ತಂಡಗಳ ದಾಖಲೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
21 ಬಾರಿ ಮುಖಾಮುಖಿ
ಏಷ್ಯಾ ಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿವಿಧ ಮಾದರಿಗಳಲ್ಲಿ ಇದುವರೆಗೆ 21 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಭಾರತ 12 ಬಾರಿ ಗೆದ್ದರೆ, ಪಾಕಿಸ್ತಾನ 6 ಪಂದ್ಯಗಳಲ್ಲಿ ಜಯ ಗಳಿಸಿವೆ. ಮೂರು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಪಾಕಿಸ್ತಾನ ಮೊದಲ ಬಾರಿಗೆ ಭಾರತ ವಿರುದ್ದ ಗೆಲುವಿನ ಖಾತೆ ತೆರೆದದ್ದು 1995ರಲ್ಲಿ. ಇದಕ್ಕೂ ಮುನ್ನ ಆಡಿದ ಎರಡು ಆವೃತ್ತಿಯಲ್ಲಿ ಸೋಲು ಕಂಡಿತ್ತು.
ಮೊದಲ ಮುಖಾಮುಖಿ
ಏಷ್ಯಾ ಕಪ್ ಇತಿಹಾಸದ ಪ್ರಶಸ್ತಿ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ. ಟೂರ್ನಿಯಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 11 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 8 ಸಲ ಪ್ರಶಸ್ತಿಯನ್ನೆತ್ತಿದೆ. ಆದರೆ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಪಾಕಿಸ್ತಾನಕ್ಕೆ ಒಲಿದದ್ದು ಕೇವಲ 2 ಕಪ್ ಮಾತ್ರ. ಅದು ಒಟ್ಟು 5 ಸಲ ಫೈನಲ್ ಆಡಿದೆ.
ಪಾಕಿಸ್ತಾನಕ್ಕೆ ಹೋಲಿಸಿದರೆ, ಭಾರತವೇ ಬಲಿಷ್ಠ. ಇದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಭಾರತವೇ ಸಮರ್ಥವಾಗಿದೆ. ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಬ್ಯಾಟಿಂಗ್ ಬಲವಾದರೆ, ಬೌಲಿಂಗ್‌ನಲ್ಲಿ ಕುಲ್‌ದೀಪ್ ಬುಮ್ರಾ, ಅಕ್ಷರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.
ಇದನ್ನೂ ಓದಿ Asia Cup 2025 Final: ಫೈನಲ್‌ಗೂ ಮುನ್ನ ಭಾರತಕ್ಕೆ ಅದೃಷ್ಟ ತಂದ ಟೈ!