ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sanath Jayasuriya: ಶ್ರೀಲಂಕಾ ಕ್ರಿಕೆಟ್‌ ತಂಡದ ಹೆಡ್‌ ಕೋಚ್‌ ಆಗಿ ಗ್ಯಾರಿ ಕಿರ್ಸ್ಟನ್ ನೇಮಕ!

2024ರಲ್ಲಿ ಪಾಕಿಸ್ತಾನ ತಂಡದೊಂದಿಗೆ ಆರು ತಿಂಗಳ ಅವಧಿಯ ನಂತರ ದಕ್ಷಿಣ ಆಫ್ರಿಕಾ ಮಾಜಿ ಓಪನರ್ ಗ್ಯಾರಿ ಕಿರ್ಸ್ಟನ್ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಎರಡು ವರ್ಷದ ಒಪ್ಪಂದದ ಮೇಲೆ ನೇಮಿಸಲಾಗಿದೆ. 2026ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಆರಂಭಿಕ ಹಂತದಲ್ಲೇ ಹೊರಬಿದ್ದ ಬಳಿಕ ಹುದ್ದೆಯಿಂದ ರಾಜೀನಾಮೆ ನೀಡಿದ ಸನತ್ ಜಯಸೂರ್ಯ ಅವರ ಸ್ಥಾನವನ್ನು ಕಿರ್ಸ್ಟನ್ ಇದೀಗ ತುಂಬಿದ್ದಾರೆ.

ಶ್ರೀಲಂಕಾ ತಂಡದ ಹೆಡ್‌ ಕೋಚ್‌ ಆಗಿ ಗ್ಯಾರಿ ಕಿರ್ಸ್ಟನ್ ನೇಮಕ!

ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಗ್ಯಾರಿ ಕಿರ್ಸ್ಟನ್ ಹೆಡ್‌ ಕೋಚ್‌. -

Profile
Ramesh Kote Mar 9, 2026 9:42 PM

ನವದೆಹಲಿ: ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ (Sri lanka) ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್‌ ಹಾಗೂ ಭಾರತದ ಮಾಜಿ ಹೆಡ್‌ ಕೋಚ್‌ ಗ್ಯಾರಿ ಕಿರ್ಸ್ಟನ್ ( Gary Kirsten) ಅವರನ್ನು ಎರಡು ವರ್ಷದ ಒಪ್ಪಂದದ ಮೇಲೆ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ. ದೇಶದಲ್ಲೇ ನಡೆದ ಟಿ20 ವಿಶ್ವಕಪ್‌ನಲ್ಲಿ ನಿರಾಶಾಜನಕ ಪ್ರದರ್ಶನ ನೀಡಿದ ಬಳಿಕ ಸನತ್ ಜಯಸೂರ್ಯ (Sanath Jayasuriya) ಹುದ್ದೆಯಿಂದ ರಾಜೀನಾಮೆ ನೀಡಿದ್ದರಿಂದ, ಅವರ ಸ್ಥಾನಕ್ಕೆ ಕಿರ್ಸ್ಟನ್ ಬಂದಿದ್ದಾರೆ. 58ರ ವಯಸ್ಸಿನ ದಕ್ಷಿಣ ಆಫ್ರಿಕಾ ಮಾಜಿ ಓಪನರ್ 2025ರಿಂದ ಹಿರಿಯ ಪುರುಷರ ತಂಡದ ಎಲ್ಲಾ ಫಾರ್ಮ್ಯಾಟ್‌ಗಳ ಕೋಚ್ ಆಗಿ ಕಾ. 2027ರ ಏಕದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ಉತ್ತಮ ಪ್ರದರ್ಶನ ನೀಡುವಂತೆ ಮಾಡುವುದೇ ಅವರ ಮುಖ್ಯ ಗುರಿಯಾಗಿರುತ್ತದೆ.

“ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಜಿಂಬಾಬ್ವೆಯಲ್ಲಿ ನಡೆಯಲಿರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಲುವಾಗಿ ಶ್ರೀಲಂಕಾ ರಾಷ್ಟ್ರೀಯ ಪುರುಷರ ತಂಡದ ಸಿದ್ಧತೆ ಮತ್ತು ಅಭಿಯಾನವನ್ನು ಮುನ್ನಡೆಸುವುದು ಗ್ಯಾರಿ ಕಿರ್ಸ್ಟನ್ ಅವರ ಪ್ರಮುಖ ಜವಾಬ್ದಾರಿಗಳಲ್ಲೊಂದು ಆಗಿರುತ್ತದೆ,” ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸೋಮವಾರ (ಮಾರ್ಚ್ 9) ಪ್ರಕಟಣೆಯಲ್ಲಿ ತಿಳಿಸಿದೆ.

ಟಿ20 ವಿಶ್ವಕಪ್‌ನಲ್ಲಿ ವೈಫಲ್ಯ; ಶ್ರೀಲಂಕಾ ಕೋಚ್ ಸ್ಥಾನಕ್ಕೆ ಸನತ್ ಜಯಸೂರ್ಯ ರಾಜೀನಾಮೆ?

"ನೂತನ ಹೆಡ್‌ ಕೋಚ್ ನೇಮಕವು ರಾಷ್ಟ್ರೀಯ ಹೈ ಪರ್ಫಾರ್ಮೆನ್ಸ್ ಸೆಂಟರ್‌ನ ರಚನೆಯನ್ನು ಪುನರ್‌ವ್ಯವಸ್ಥೆಗೊಳಿಸುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಪ್ರಯತ್ನಗಳ ಭಾಗವಾಗಿದೆ. ಶ್ರೀಲಂಕಾ ಕ್ರಿಕೆಟ್‌ನೊಂದಿಗೆ ಅವರ ನೇಮಕವು ಎರಡು ವರ್ಷದ ಅವಧಿಯಾಗಿದ್ದು, ಅದು 2028ರ ಏಪ್ರಿಲ್‌ 14ರಂದು ಅಂತ್ಯವಾಗಲಿದೆ,” ಎಂದು ಮಂಡಳಿ ಹೇಳಿದೆ.

ಇತ್ತೀಚೆಗೆ ಟಿ20 ವಿಶ್ವಕಪ್ ಟೂರ್ನಿಯ ವೇಳೆ ನಮಿಬಿಯಾ ರಾಷ್ಟ್ರೀಯ ತಂಡದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಕಿರ್ಸ್ಟನ್, ಈ ಹಿಂದೆ ಪಾಕಿಸ್ತಾನ ತಂಡದಲ್ಲಿ ಹೆಡ್‌ ಕೋಚ್‌ ಹುದ್ದೆಯನ್ನು ನಿರ್ವಹಿಸಿದ್ದರು. ಆದರೆ, ಅಲ್ಲಿ ಅವರು ಯಶಸ್ಸು ಕಾಣದ ಹಾಗೂ ಗೊಂದಲಭರಿತ ಅವಧಿಯನ್ನು ಎದುರಿಸಿದ್ದರು.

T20 World Cup: 24 ಸಿಕ್ಸರ್‌ಗಳ ಮೂಲಕ ನೂತನ ಮೈಲುಗಲ್ಲು ತಲುಪಿದ ಸಂಜು ಸ್ಯಾಮ್ಸನ್!

2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವೈಫಲ್ಯ

ಪಾಕಿಸ್ತಾನದ ವೈಟ್-ಬಾಲ್ ಮುಖ್ಯ ಕೋಚ್ ಆಗಿದ್ದ ಅವರ ಅವಧಿ ಕೇವಲ ಆರು ತಿಂಗಳು ಮಾತ್ರ ಸೀಮಿತವಾಗಿತ್ತು. ಅದು 2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಅಂತ್ಯವಾಗಿತ್ತು. ಕಿರ್ಸ್ಟನ್‌ ಅವರೇ ಸ್ವತಃ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದರು. ಇವರು ಹೆಡ್‌ ಕೋಚ್‌ ಆರಂಭದಲ್ಲಿ ಪಾಕಿಸ್ತಾನ ತಂಡ 2024ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ನೀರಸ ಪ್ರದರ್ಶನವನ್ನು ತೋರಿತ್ತು. ಈ ಟೂರ್ನಿಯಲ್ಲಿ ಪಾಕಿಸ್ತಾನ ತಂಡ, ಅಮೆರಿಕಾ ಮತ್ತು ಭಾರತ ವಿರುದ್ಧ ಅಚ್ಚರಿಯ ಸೋಲುಗಳನ್ನು ಅನುಭವಿಸಿತ್ತು.

T20 World Cup: ಟಿ20 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಶೋಯೆಬ್‌ ಅಖ್ತರ್‌ ವಿಶೇಷ ಸಂದೇಶ!

ಪಾಕಿಸ್ತಾನ ಆಟಗಾರರ ಬಗ್ಗೆ ದೂರು ನೀಡಿದ್ದ ಕಿರ್ಸ್ಟನ್‌

2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಗ್ಯಾರಿ ಕಿರ್ಸ್ಟನ್‌ ಅವರು, ಪಾಕಿಸ್ತಾನ ತಂಡದ ವಿರುದ್ಧ ಹಲವು ಅಂಶಗಳ ಗಂಭೀರ ಆರೋಪ ಮಾಡಿದ್ದರು. ತಂಡದ ಆಟಗಾರರಲ್ಲಿ ಏಕತೆ ಹಾಗೂ ವೃತ್ತಿಪರ ಫಿಟ್‌ನೆಸ್‌ ಸಮಸ್ಯೆಗಳಿವೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ದೂರು ನೀಡಿದ್ದರು. ತಮ್ಮ ಕೋಚಿಂಗ್‌ ವೃತ್ತಿ ಜೀವನದಲ್ಲಿ ಎಂದಿಗೂ ತಂಡ ಪ್ರತ್ಯೇಕವಾಗುವುದನ್ನು ನೋಡಿರಲಿಲ್ಲ ಹಾಗೂ ಡ್ರೆಸ್ಸಿಂಗ್‌ ರೂಂ ಸಂಸ್ಕೃತಿಯಲ್ಲಿನ ಸಮಸ್ಯೆಗಳನ್ನು ಅವರು ಒತ್ತಿ ಹೇಳಿದ್ದರು.