ಸೂರ್ಯಕುಮಾರ್ ಔಟ್, ಸಂಜು ಸ್ಯಾಮ್ಸನ್ ಇನ್! ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ ಐಸಿಸಿ!
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರಿದ ಆಟಗಾರರನ್ನು ಒಳಗೊಂಡ ಪ್ಲೇಯಿಂಗ್ XI ಅನ್ನು ಪ್ರಕಟಿಸಿದೆ. ಇದರಲ್ಲಿ ನಾಲ್ಕು ಭಾರತೀಯ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐಸಿಸಿ ಕೈ ಬಿಟ್ಟಿದೆ.
ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ. -
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಆಟಗಾರರನ್ನು ಒಳಗೊಂಡ ಶ್ರೇಷ್ಠ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ಈ ಟಿ20 ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ (Sanju Samson) ಒಳಗೊಂಡಂತೆ ನಾಲ್ವರು ಭಾರತೀಯ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ. ಆದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಾಗಿದೆ. ದಕ್ಷಿಣ ಆಫ್ರಿಕಾ ತಂಡದ ಏಡೆನ್ ಮಾರ್ಕ್ರಮ್ ಅವರನ್ನು ಈ ತಂಡದ ನಾಯಕನ್ನಾಗಿ ನೇಮಕ ಮಾಡಲಾಗಿದೆ. ಸಂಜು ಸ್ಯಾಮ್ಸನ್‌ಗೆ ವಿಕೆಟ್ ಕೀಪರ್ ಸ್ಥಾನ ಹಾಗೂ ಆರಂಭಿಕ ಸ್ಥಾನವನ್ನು ನೀಡಲಾಗಿದೆ.
ಈ ತಂಡವನ್ನು ಪ್ರಸಿದ್ಧ ಕಾಮೆಂಟೇಟರ್‌ಗಳಾದ ಇಯಾನ್ ಬಿಷಪ್, ನ್ಯಾಟಲಿ ಜರ್ಮಾನೋಸ್, ಐಯಾನ್ ಮಾರ್ಗನ್ ಹಾಗೂ ಐಸಿಸಿ ಪ್ರತಿನಿಧಿ ಗೌರವ್ ಸಕ್ಸೇನಾ ಮತ್ತು ಕ್ರೀಡಾ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಒಳಗೊಂಡ ಸಮಿತಿಯು ಈ ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದೆ.
ಭಾರತ ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ಉತ್ತಮ ನಾಯಕತ್ವ ಪ್ರದರ್ಶಿಸಿದರು. ಬ್ಯಾಟಿಂಗ್ ಕ್ರಮದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಒತ್ತಡದ ಸಂದರ್ಭಗಳಲ್ಲಿ ಬೌಲರ್‌ಗಳನ್ನು ಸೂಕ್ತವಾಗಿ ಬಳಸುವುದು ಅವರ ನಾಯಕತ್ವದ ಪ್ರಮುಖ ಅಂಶಗಳಾಗಿದ್ದವು. ಆದರೆ ಬ್ಯಾಟಿಂಗ್‌ನಲ್ಲಿ ಭಾರತದ ಆರಂಭಿಕ ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಆಡಿದ ನಂತರ ಅವರು ಅದೇ ರೀತಿಯ ಪ್ರದರ್ಶನವನ್ನು ಮುಂದಿನ ಪಂದ್ಯಗಳಲ್ಲಿ ನೀಡಲು ಸಾಧ್ಯವಾಗಲಿಲ್ಲ.
T20 World Cup: 24 ಸಿಕ್ಸರ್‌ಗಳ ಮೂಲಕ ನೂತನ ಮೈಲುಗಲ್ಲು ತಲುಪಿದ ಸಂಜು ಸ್ಯಾಮ್ಸನ್!
ಅಮೆರಿಕ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ ಕುಸಿತದ ಅಂಚಿನಲ್ಲಿ ಇದ್ದಾಗ ಸೂರ್ಯಕುಮಾರ್ ಯಾದವ್ ಅಜೇಯ 84 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಹೊರತಂದಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಅವರು ಅದೇ ಮಟ್ಟದ ಆಟವನ್ನು ತೋರಿಸಲು ವಿಫಲರಾದರು. ಈ ಟೂರ್ನಿಯಲ್ಲಿ ಕ್ರಮವಾಗಿ 84, 12, 32, 34, 18, 33, 18, 11 ಮತ್ತು 0 ರನ್‌ಗಳನ್ನು ಗಳಿಸಿದ್ದಾರೆ.
ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ್ದ ಸಂಜು
ಟಿ20 ವಿಶ್ವಕಪ್‌ಯ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್, ಫೈನಲ್, ಸೆಮಿಫೈನಲ್ ಹಾಗೂ ಸೂಪರ್-8ರ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ನೀಡಿದ ಅದ್ಭುತ ಇನಿಂಗ್ಸ್‌ಗಳ ಮೂಲಕ ಟಿ20 ವಿಶ್ವಕಪ್ ತಂಡದಲ್ಲಿಉ ಓಪನರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೂರ್ನಿಯ ಆರಂಭದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯದಿದ್ದರೂ, ತಂಡಕ್ಕೆ ಅಗತ್ಯವಾದ ಸಮಯದಲ್ಲಿ ಸ್ಯಾಮ್ಸನ್ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದರು. ಇವರ ಜೊತೆ ಸಹ ಆಟಗಾರರಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ಮತ್ತು ಜಸ್‌ಪ್ರೀತ್ ಬುಮ್ರಾ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಕೂಡ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.
T20 World Cup: ಸತತ ವೈಫಲ್ಯದ ಹೊರತಾಗಿಯೂ ಅಭಿಷೇಕ್ ಶರ್ಮಾಗೆ ಅವಕಾಶ ನೀಡಿದ್ದೇಕೆ? ಗಂಭೀರ್ ಸ್ಪಷ್ಟನೆ!
317 ರನ್ ಗಳಿಸಿದ್ದ ಇಶಾನ್ ಕಿಶನ್
ಇಶಾನ್ ಕಿಶನ್ ಟೂರ್ನಿಯಲ್ಲಿ ಒಟ್ಟು 317 ರನ್ ಗಳಿಸಿದರು. ಟಾಪ್ ಆರ್ಡರ್‌ನಲ್ಲಿ ಅವರ ಬ್ಯಾಟಿಂಗ್ ಭಾರತ ತಂಡಕ್ಕೆ ಸ್ಥಿರತೆ ನೀಡಿದ್ದು, 193.29 ಸ್ಟ್ರೈಕ್ ರೇಟ್‌ನೊಂದಿಗೆ ಗಮನಾರ್ಹ ಪ್ರದರ್ಶನ ನೀಡಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಓಪನರ್ ಆಗಿ 77 ರನ್‌ಗಳ ಅದ್ಭುತ ಇನಿಂಗ್ಸ್ ಆಡಿದ ಕಿಶನ್, ನಂತರ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧ ಮಹತ್ವದ ರನ್ ಗಳಿಸಿದರು. ಫೈನಲ್ ಪಂದ್ಯದಲ್ಲೂ ಅವರು ಅರ್ಧಶತಕ ದಾಖಲಿಸಿದ್ದರು.
ಆಲ್‌ರೌಂಡರ್ ಆಗಿ ಮಿಂಚಿದ ಹಾರ್ದಿಕ್
ಈ ಪಟ್ಟಿಯಲ್ಲಿ ಸೇರಿರುವ ಮೂರನೇ ಭಾರತೀಯ ಆಟಗಾರ ಹಾರ್ದಿಕ್ ಪಾಂಡ್ಯ. ಆಲ್‌ರೌಂಡರ್ ಆಗಿರುವ ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಮಹತ್ವದ ಕೊಡುಗೆ ನೀಡಿದರು. ಅವರು ಬ್ಯಾಟಿಂಗ್‌ನಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿದ್ದು, ಅಗತ್ಯ ಸಮಯದಲ್ಲಿ ಪರಿಣಾಮಕಾರಿ ಬೌಲ್ ಮಾಡಿದರು. ನಮೀಬಿಯಾ ವಿರುದ್ಧ ಕೇವಲ 28 ಚೆಂಡುಗಳಲ್ಲಿ 52 ರನ್ ಗಳಿಸಿದ್ದು ಗಮನಾರ್ಹ. ಜೊತೆಗೆ ಅವರು ಟೂರ್ನಿಯಲ್ಲಿ ಒಟ್ಟು 9 ವಿಕೆಟ್‌ಗಳು ಪಡೆದರು.
ಐಸಿಸಿ ಪ್ರಕಟಿಸಿದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ತಂಡ
- ಸಾಹಿಬ್ದಾಜಾ ಫರ್ಹಾನ್
- ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
- ಇಶಾನ್ ಕಿಶನ್
- ಏಡೆನ್ ಮಾರ್ಕ್ರಮ್ (ನಾಯಕ)
- ಹಾರ್ದಿಕ್ ಪಾಂಡ್ಯ
- ವಿಲ್ ಜ್ಯಾಕ್ಸ್
- ಜೇಸನ್ ಹೋಲ್ಡರ್
- ಜಸ್‌ಪ್ರೀತ್ ಬುಮ್ರಾ
- ಲುಂಗಿ ಎನ್ಗಿಡಿ
- ಆದಿಲ್ ರಶೀದ್
- ಬ್ಲೆಸಿಂಗ್ ಮುಝರಬಾನಿ
12ನೇ ಆಟಗಾರ: ಶ್ಯಾಡಲೆ ವಾನ್ ಸ್ಚಾಲ್ಕ್‌ವಿಕ್
Presenting the #T20WorldCup 2026 Team of the Tournament 🤩👌
— ICC (@ICC) March 9, 2026
More 📲 https://t.co/b4x8qMPUL1 pic.twitter.com/NGInFcYa7S
ಈ ತಂಡದಲ್ಲಿ ಸ್ಥಾನ ಪಡೆದ ನಾಲ್ಕನೇ ಭಾರತೀಯ ಆಟಗಾರ ಜಸ್‌ಪ್ರೀತ್ ಬುಮ್ರಾ. ಫೈನಲ್ ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪಡೆದಿದ್ದ ಬುಮ್ರಾ, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಅವರು ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಒಟ್ಟು 14 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ.