ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ind vs sa: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಪಿಚ್ ರಿಪೋರ್ಟ್‌, ಹವಾಮಾನ ವರದಿ

ಭಾರತ ಮಹಿಳಾ ತಂಡವು ಮಹಿಳಾ ಏಕದಿನಗಳಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 20-13 ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಮಹಿಳಾ ವಿಶ್ವಕಪ್‌ನಲ್ಲಿ, ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದಿದ್ದು, ದಾಖಲೆ ಸಮತೋಲಿತವಾಗಿದೆ.

ಕೋಚ್‌ ಜತೆ ನಾಯಕಿ ಕೌರ್‌ ಮಾತುಕತೆ

ನವಿ ಮುಂಬೈ: ನವೆಂಬರ್ 2, ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್(Women's World Cup Final) 2025ರ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ(ind vs sa) ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದೆ. ಯಾರೇ ಗೆದ್ದರೂ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲಿದ್ದಾರೆ. ಈ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಚ್‌ ರಿಪೋರ್ಟ್‌

ನವಿ ಮುಂಬೈನ ಕೆಂಪು ಮಣ್ಣಿನ ಮೇಲ್ಮೈ ಪಿಚ್‌ ಭಾರತದ ಸಾಮರ್ಥ್ಯಕ್ಕೆ ಪೂರಕವಾಗಿದೆ. ಫೈನಲ್‌ಗೆ ಸಿದ್ಧಪಡಿಸಲಾದ ಪಿಚ್ ಭಾರತ vs ನ್ಯೂಜಿಲೆಂಡ್ ಮುಖಾಮುಖಿಗೆ ಬಳಸಲಾದ ಅದೇ ಪಿಚ್‌ ಎಂದು ವರದಿಯಾಗಿದೆ. ಆ ಪಂದ್ಯದಲ್ಲಿ ಭಾರತೀಯರು 340 ರನ್‌ಗಳನ್ನು ಬಾರಿಸಿದ್ದರು. ಈ ಪಿಚ್‌ನಲ್ಲಿ ಉತ್ತಮ ಬೌನ್ಸ್ ನಿರೀಕ್ಷಿಸಲಾಗಿದೆ. ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ಪಿಚ್‌ ನೆರವಾಗಲಿದೆ.

ಹವಾಮಾನ ವರದಿ

ಭಾರತ ಹವಾಮಾನ ಇಲಾಖೆ (ಐಎಂಡಿ) ಮಹಾರಾಷ್ಟ್ರಕ್ಕೆ ಎಲ್ಲೋ ಅಲರ್ಟ್‌ ಎಚ್ಚರಿಕೆ ನೀಡಿದೆ. ಮುಂಬೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಮಧ್ಯಮ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ, ಪಂದ್ಯ ನಡೆಯುವ ಭಾನುವಾರ ಮಳೆಯಾಗುವ ಸಾಧ್ಯತೆ ಶೇ. 63 ರಷ್ಟಿದ್ದು, ಸಂಜೆ 4 ರಿಂದ 7 ಗಂಟೆಯ ನಡುವೆ ಮಳೆಯಾಗುವ ಸಾಧ್ಯತೆ ಶೇ. 50 ಕ್ಕಿಂತ ಹೆಚ್ಚಾಗಲಿದ್ದು, ಸುಮಾರು ಶೇ. 62 ರಷ್ಟು ಮೋಡ ಕವಿದ ವಾತಾವರಣವಿರಲಿದೆ ಎನ್ನಲಾಗಿದೆ.

ಮೀಸಲು ದಿನ

ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿಯಾದರೆ, ಅದೆ ದಿನ ಪಂದ್ಯ ಪೂರ್ಣಗೊಳಿಸಲು ಪ್ರಯತ್ನಿಸಲಾಗಿತ್ತದೆ. ಇದರ ಹೊರತಾಗಿಯೂ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಆಗ ಮೀಸಲು ದಿನಕ್ಕೆ(ನ.3) ಪಂದ್ಯವನ್ನು ಮುಂದೂಡಲಾಗುತ್ತದೆ. ಮೀಸಲು ದಿನದಂದೂ ಕೂಡ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ, ಆಗ ಜಂಟಿ ವಿಜೇತರನ್ನಾಗಿ ಘೋಷಿಸಲಾಗುತ್ತದೆ.

ಮುಖಾಮುಖಿ

ಭಾರತ ಮಹಿಳಾ ತಂಡವು ಮಹಿಳಾ ಏಕದಿನಗಳಲ್ಲಿ ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 20-13 ಹೆಡ್-ಟು-ಹೆಡ್ ದಾಖಲೆಯನ್ನು ಹೊಂದಿದೆ. ಒಂದು ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ. ಮಹಿಳಾ ವಿಶ್ವಕಪ್‌ನಲ್ಲಿ, ಎರಡೂ ತಂಡಗಳು ತಲಾ ಮೂರು ಪಂದ್ಯಗಳನ್ನು ಗೆದ್ದಿದ್ದು, ದಾಖಲೆ ಸಮತೋಲಿತವಾಗಿದೆ.

ಇದನ್ನೂ ಓದಿ Women's World Cup Prize Money: ನಾಳೆ ಮಹಿಳಾ ವಿಶ್ವಕಪ್‌ ಫೈನಲ್‌; ಚಾಂಪಿಯನ್‌ ತಂಡಕ್ಕೆ ಸಿಗುವ ಬಹುಮಾನ ಮೊತ್ತವೆಷ್ಟು?

ಸಂಭಾವ್ಯ ತಂಡಗಳು

ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ರಿಚಾ ಘೋಷ್ (ವಿ.ಕೀ.), ಅಮನ್‌ಜೋತ್ ಕೌರ್, ರಾಧಾ ಯಾದವ್, ಕ್ರಾಂತಿ ಗೌಡ್, ಶ್ರೀ ಚರಣಿ, ರೇಣುಕಾ ಠಾಕೂರ್.

ದಕ್ಷಿಣ ಆಫ್ರಿಕಾ: ಲಾರಾ ವೊಲ್ವಾರ್ಡ್ಟ್(ನಾಯಕಿ), ತಜ್ಮಿನ್ ಬ್ರಿಟ್ಸ್, ಸುನೆ ಲೂಸ್, ಅನ್ನೇರಿ ಡೆರ್ಕ್ಸೆನ್, ಅನ್ನೆಕೆ ಬಾಷ್, ಮಾರಿಝನ್ನೆ ಕಪ್, ಸಿನಾಲೊ ಜಾಫ್ತಾ(ವಿ.ಕೀ.), ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ನಾನ್ಕುಲುಲೆಕೊ ಮ್ಲಾಬಾ.

ಪಂದ್ಯ ಆರಂಭ: ಮಧ್ಯಾಹ್ನ 3.00

ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌.

ಲೈವ್‌ ಸ್ಟ್ರೀಮಿಂಗ್‌: ಜಿಯೋಹಾಟ್‌ಸ್ಟಾರ್.