ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೊಚ್ಚಲ ಟೆಸ್ಟ್‌ ಶತಕ ಬಾರಿಸಿ ಮೆರೆದಾಡಿದ ದೇವದತ್ತ ಪಡಿಕ್ಕಲ್‌

Sri Lanka vs India 1st Test: ಎಡನೇ ವಿಕೆಟ್‌ಗೆ ಜತೆಯಾದ ಕನ್ನಡಿಗರಾದ ರಾಹುಲ್‌ ಮತ್ತು ಪಡಿಕ್ಕಲ್‌ 150ರನ್‌ ಜತೆಯಾಟ ನಡೆಸಿದರು. ಪಂದ್ಯದಲ್ಲಿ ಕೈ ನೋವಿಗೆ ತುತ್ತಾದ ಕಾರಣ ರಾಹುಲ್‌ ಚಹಾ ವಿರಾಮದ ಬಳಿಕ ಬ್ಯಾಟಿಂಗ್‌ಗೆ ಮರಳಲಿಲ್ಲ. ರಿಟರ್ಡ್‌ ಹರ್ಟ್‌ ಆದರು. 162 ಎಸೆತ ಎದುರಿಸಿದ ರಾಹುಲ್‌ ಅರ್ಧಶತಕ ಪೂರ್ತಿಗೊಳಿಸಿ 77 ರನ್‌ ಗಳಿಸಿದರು. ಭಾನುವಾರ ದ್ವಿತೀಯ ದಿನದಾಟದಲ್ಲಿ ಮತ್ತೆ ಬ್ಯಾಟಿಂಗ್‌ ಮುಂದುವರಿಸುವ ಸಾಧ್ಯತೆ ಇದೆ.

ಚೊಚ್ಚಲ ಟೆಸ್ಟ್‌ ಶತಕ ಬಾರಿಸಿ ಮೆರೆದಾಡಿದ ದೇವದತ್ತ ಪಡಿಕ್ಕಲ್‌

Devdutt Padikkal -

Abhilash BC
Abhilash BC Aug 15, 2026 4:43 PM

ಗಾಲೆ, ಆ.15: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್‌ ನಡೆಸಿದ ಕರ್ನಾಟಕದ ದೇವದತ್ತ ಪಡಿಕ್ಕಲ್‌ ಶತಕ ಬಾರಿಸಿ ಸಂಭ್ರಮಿಸಿದ್ದಾರೆ. ಇದು ಅವರ ಚೊಚ್ಚಲ ಶತಕವಾಗಿದೆ. ಭಾರತದ 600ನೇ ಟೆಸ್ಟ್‌ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದೇ ಈ ಸಾಧನೆ ಮಾಡಿದ್ದು ಅವರ ಪಾಲಿಗೆ ಈ ಶತಕ ಇನ್ನಷ್ಟು ಸ್ಮರಣೀಯವಾಗಲಿದೆ.

2002 ರಲ್ಲಿ ದೆಹಲಿಯಲ್ಲಿ ಜಿಂಬಾಬ್ವೆ ವಿರುದ್ಧ 136 ರನ್ ಗಳಿಸಿದ್ದ ಸೌರವ್ ಗಂಗೂಲಿ ನಂತರ, 21 ನೇ ಶತಮಾನದಲ್ಲಿ ಭಾರತ ಪರ 3 ನೇ ಸ್ಥಾನದಲ್ಲಿ ಟೆಸ್ಟ್ ಶತಕ ಗಳಿಸಿದ ಎರಡನೇ ಎಡಗೈ ಬ್ಯಾಟರ್‌ ಎಂಬ ಹಿರಿಮೆಗೆ ಪಡಿಕ್ಕಲ್ ಪಾತ್ರರಾದರು.

ಸಾಯಿ ಸುದರ್ಶನ್‌ ಅವರು ಗಾಯಗೊಂಡು ಸರಣಿಯಿಂದ ಹೊರಬಿದ್ದ ಕಾರಣ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದ ಪಡಿಕ್ಕಲ್‌ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಅಮೋಘ ಶತಕ ಬಾರಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳವ ಜತೆಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. ಕಳೆದ ಅಭ್ಯಾಸ ಪಂದ್ಯದಲ್ಲಿಯೂ ಅವರು ಶತಕ ಬಾರಿಸಿ ಮಿಂಚಿದ್ದರು.



ರಾಹುಲ್‌-ಪಡಿಕ್ಕಲ್‌ ಉತ್ತಮ ಜತೆಯಾಟ

ಎಡನೇ ವಿಕೆಟ್‌ಗೆ ಜತೆಯಾದ ಕನ್ನಡಿಗರಾದ ರಾಹುಲ್‌ ಮತ್ತು ಪಡಿಕ್ಕಲ್‌ 150ರನ್‌ ಜತೆಯಾಟ ನಡೆಸಿದರು. ಪಂದ್ಯದಲ್ಲಿ ಕೈ ನೋವಿಗೆ ತುತ್ತಾದ ಕಾರಣ ರಾಹುಲ್‌ ಚಹಾ ವಿರಾಮದ ಬಳಿಕ ಬ್ಯಾಟಿಂಗ್‌ಗೆ ಮರಳಲಿಲ್ಲ. ರಿಟರ್ಡ್‌ ಹರ್ಟ್‌ ಆದರು. 162 ಎಸೆತ ಎದುರಿಸಿದ ರಾಹುಲ್‌ ಅರ್ಧಶತಕ ಪೂರ್ತಿಗೊಳಿಸಿ 77 ರನ್‌ ಗಳಿಸಿದರು. ಭಾನುವಾರ ದ್ವಿತೀಯ ದಿನದಾಟದಲ್ಲಿ ಮತ್ತೆ ಬ್ಯಾಟಿಂಗ್‌ ಮುಂದುವರಿಸುವ ಸಾಧ್ಯತೆ ಇದೆ.

ಜೋ ರೂಟ್‌ ವಿಶ್ವದಾಖಲೆ ಸರಿಗಟ್ಟಿದ ಸ್ಟೀವನ್‌ ಸ್ಮಿತ್‌

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ದುಕೊಂಡಿತು. ಇನಿಂಗ್ಸ್‌ ಆರಂಭಿಸಿದ ರಾಹುಲ್‌ ಮತ್ತು ಜೈಸ್ವಾಲ್‌ ಉತ್ತಮ ಆರಂಭ ಒದಗಿಸಿದರು. ಆದರೆ ಜೈಸ್ವಾಲ್‌ 32 ರನ್‌ ಗಳಿಸಿದ ವೇಳೆ ರಾಹುಲ್‌ ಅವರ ಗಡಿಬಿಡಿಯಿಂದ ರನೌಟ್‌ ಬಲೆಗೆ ಬಿದ್ದರು. ನಾನ್‌ಸ್ಟ್ರೈಕರ್‌ನಲ್ಲಿದ್ದ ಜೈಸ್ವಾಲ್‌ ಬೌಲರ್‌ ಕಾಲು ತಾಗಿ ಬಿದ್ದರೂ ರಾಹುಲ್‌ ರನ್‌ಗಾಗಿ ಓಡಿದರು. ಈ ವೇಳೆ ಗಲಿಬಿಲಿಗೊಂಡ ಜೈಸ್ವಾಲ್‌ ಕ್ರೀಸ್‌ ತೊರೆದರು. ಕೊನೆಗೆ ರನೌಟ್‌ ಸಂಕಟ ಎದುರಿದರು. ಈ ಜೋಡಿ ಮೊದಲ ವಿಕೆಟ್‌ಗೆ 47 ರನ್‌ ಜತೆಯಾಟ ನಡೆಸಿತು. ಭೋಜನ ವಿರಾಮದ ಬಳಿಕ ಸುಮಾರು ಒಂದು ಗಂಟೆಗಳ ಆಟ ಮಳೆಯಿಂದ ಅಡಚಣೆಯಾಯಿತು.