IND vs WI 2nd Test: ದಿಲ್ಲಿಯಲ್ಲಿ ಬ್ಯಾಟಿಂಗ್ ಪಿಚ್ ನಿರೀಕ್ಷೆ
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ದೆಹಲಿಯ ಪಿಚ್ ಅನ್ನು ಕಪ್ಪು ಮಣ್ಣನ್ನು ಬಳಸಿ ಮಾಡಲಾಗುವುದು ಮತ್ತು ಪಂದ್ಯದ ಬಹುಪಾಲು ಸಮಯ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಒಂದೆಡರು ದಿನ ಕಳೆದ ಬಳಿಕ ಪಿಚ್‌ನ ಮೇಲ್ಮೈ ಸವೆಯಲು ಪ್ರಾರಂಭಿಸಿದಾಗ, ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವಾಗುವ ಸಾಧ್ಯತೆಯಿದೆ.

-

ನವದೆಹಲಿ: ಶುಕ್ರವಾರ ಆರಂಭವಾಗುವ ಭಾರತ ಮತ್ತು ವೆಸ್ಟ್ ಇಂಡೀಸ್(IND vs WI 2nd Test) ನಡುವಣ ಎರಡನೇ ಮತ್ತು ಅಂತಿಮ ಟೆಸ್ಟ್‌ಗೆ ಬ್ಯಾಟಿಂಗ್ ಸ್ನೇಹಿ ಪಿಚ್ ಸಿದ್ಧಪಡಿಸುವ ನಿರೀಕ್ಷೆಯಿದೆ. ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಕೇವಲ ಎರಡೂವರೆ ದಿನಗಳಲ್ಲಿ ಅಂತ್ಯ ಕಂಡಿತ್ತು. ರೋಸ್ಟನ್ ಚೇಸ್ ಪಡೆ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಎದುರಿಸಿತ್ತು. ಹೀಗಾಗಿ ದೆಹಲಿ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಪಿಚ್(Batting pitch) ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಮೊದಲ ಟೆಸ್ಟ್‌ನ ಪ್ರತಿಯೊಂದು ಸೆಷನ್‌ನಲ್ಲಿಯೂ ಪ್ರಾಬಲ್ಯ ಸಾಧಿಸಿದ ಶುಭಮನ್ ಗಿಲ್ ನೇತೃತ್ವದ ಭಾರತೀಯ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಸಂಪೂರ್ಣವಾಗಿ ಮೀರಿಸಿತು. ಆತಿಥೇಯರು ಪ್ರವಾಸಿ ತಂಡವನ್ನು ಇನ್ನಿಂಗ್ಸ್ ಮತ್ತು 140 ರನ್‌ಗಳಿಂದ ಸೋಲಿಸಿ, ಕೇವಲ ಎರಡೂವರೆ ದಿನಗಳಲ್ಲಿ ಪಂದ್ಯವನ್ನು ಮುಗಿಸಿದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡಕ್ಕೆ ಅನುಕೂಲಕರವಾದ, ಅವರಿಗೆ ಹೆಚ್ಚು ಬ್ಯಾಟಿಂಗ್ ಸ್ನೇಹಿ ಪಿಚ್ ಅನ್ನು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ IND vs WI: ವಿಂಡೀಸ್ ಬ್ಯಾಟಿಂಗ್ ವೈಫಲ್ಯ, ಇನಿಂಗ್ಸ್ ಅಂತರದಲ್ಲಿ ಮೊದಲನೇ ಟೆಸ್ಟ್ ಗೆದ್ದ ಭಾರತ!