ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಭಾರತ ಮಹಿಳಾ ತಂಡ; ಹರಿಣ ಪಡೆ ಎದುರಾಳಿ
IND W vs SA W: ಓಲ್ಡ್ ಟ್ರಾಫರ್ಡ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇರದ ಕಾರಣ ಸಂಪೂರ್ಣವಾಗಿ ಪಂದ್ಯ ಸಾಗಲಿದೆ. ಪಂದ್ಯವು ಸ್ಥಳೀಯ ಸಮಯ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನ ಸಂಜೆ 7:00 ಆಗಿರುತ್ತದೆ.
Jemimah Rodrigues -
ಲಂಡನ್, ಜೂ.20: ಹಾಲಿ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್(T20 World Cup 2026) ಟೂರ್ನಿಯಲ್ಲಿ ಅಜೇಯವಾಗಿರುವ ಭಾರತ(IND W vs SA W) ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯೊಂದಿಗೆ ಭಾನುವಾರ ನಡೆಯುವ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಹರ್ಮನ್‌ಪ್ರೀತ್ ಕೌರ್ ಬಳಗ ಈ ಪಂದ್ಯವನ್ನು ಗೆದ್ದರೆ ಸೆಮಿಫೈನಲ್‌ನಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಲಿದೆ. ಸದ್ಯ ಭಾರತ 'ಎ' ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ.
ಭಾರತ ಆಡಿದ ಎರಡು ಪಂದ್ಯಗಳನ್ನು ದುರ್ಬಲ ತಂಡವಾದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ ವಿರುದ್ಧ ಆಡಿತ್ತು. ನಿಜವಾದ ಸವಾಲು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡದ ಮೇಲೆ ಪ್ರಶಸ್ತಿ ಗೆಲುವೊಂದನ್ನು ಇಡಬಹುದು. ಸದ್ಯ ಭಾರತದ ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಷ್ಠ ಮಟ್ಟದಿಂದ ಕೂಡಿದೆ. ಮಂಧಾನ ಸತತ ಎರಡು ಅರ್ಧಶತಕ ಸಿಡಿಸಿದರೆ, ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ ಮತ್ತು ಶ್ರೀ ಚರಣಿ ಉತ್ತಮ ಲಯದಲ್ಲಿದ್ದಾರೆ. ಇವರ ಜತೆ ಅರೆಕಾಲಿಕ ಸ್ಪಿನ್ನರ್ ಶಫಾಲಿ ವರ್ಮಾ ಕೂಡ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಆಲ್‌ರೌಂಡರ್ ಪ್ರದರ್ಶನ ತೋರುತ್ತಿದ್ದಾರೆ.
ಇಂಗ್ಲೆಂಡ್ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್?
2025ರ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಭಾರತ ಸೋಲಿಸಿತ್ತು. ಇದೇ ವಿಶ್ವಾಸದಲ್ಲಿ ಭಾರತ ಆಡುವ ಗುರಿ ಹೊಂದಿದೆ. ದಕ್ಷಿಣ ಆಫ್ರಿಕಾ ಆಡಿದ ಎರಡು ಪಂದ್ಯಗಳ ಪೈಕಿ ತಲಾ ಒಂದು ಸೋಲು ಮತ್ತು ಗೆಲುವು ಸಾಧಿಸಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಸೆಮಿ ರೇಸ್‌ನಲ್ಲಿ ಉಳಿಯಬೇಕಿದ್ದರೆ ಹರಿಣ ಪಡೆಗೆ ಗೆಲುವು ಅತ್ಯಗತ್ಯ.
ಓಲ್ಡ್ ಟ್ರಾಫರ್ಡ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು ದೊಡ್ಡ ಮೊತ್ತದ ನಿರೀಕ್ಷೆ ಮಾಡಬಹುದು. ಪಂದ್ಯಕ್ಕೆ ಯಾವುದೇ ಮಳೆ ಭೀತಿ ಇರದ ಕಾರಣ ಸಂಪೂರ್ಣವಾಗಿ ಪಂದ್ಯ ಸಾಗಲಿದೆ. ಪಂದ್ಯವು ಸ್ಥಳೀಯ ಸಮಯ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನ ಸಂಜೆ 7:00 ಆಗಿರುತ್ತದೆ.
An evening of celebration in Manchester! ✨
— BCCI Women (@BCCIWomen) June 20, 2026
The Consulate General of India, Manchester, hosted #TeamIndia at the beautiful Manchester Museum.
Captain Harmanpreet Kaur presented a special signed jersey to Mrs. Vishakha Yaduvanshi, Consul General of India in Manchester.… pic.twitter.com/VVWMm37txp
ಮುಖಾಮುಖಿ
ಉಭಯ ತಂಡಗಳು ಟಿ20ಯಲ್ಲಿ 25 ಪಂದ್ಯಗಳಲ್ಲಿ ಮುಖಾಮುಖಯಾಗಿದ್ದು, ಭಾರತ 12 ಪಂದ್ಯಗಳನ್ನು ಗೆದ್ದರೆ, ದಕ್ಷಿಣ ಆಫ್ರಿಕಾ 10 ಪಂದ್ಯಗಳನ್ನು ಜಯಿಸಿದೆ. ಮೂರು ಪಂದ್ಯ ಫಲಿತಾಂಶ ಕಂಡಿಲ್ಲ.
ಸಂಭಾವ್ಯ ಆಡುವ ಬಳಗ
ಭಾರತ: ಸ್ಮೃತಿ ಮಂಧಾನ, ಶಫಾಲಿ ವರ್ಮಾ,ಯಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್, ರಾಧಾ ಯಾದವ್, ನಂದಿನಿ ಶರ್ಮ.
ದಕ್ಷಿಣ ಆಫ್ರಿಕಾ: ಸುನೆ ಲೂಸ್, ಲಾರಾ ವೊಲ್ವಾರ್ಡ್ಟ್ (ನಾಯಕಿ), ಅನ್ನೇರಿ ಡೆರ್ಕ್ಸೆನ್, ನಾಡಿನ್ ಡಿ ಕ್ಲರ್ಕ್, ಮರಿಝನ್ನೆ ಕಪ್, ಕ್ಲೋಯ್ ಟ್ರಯಾನ್, ಕೈಲಾ ರೇನೆಕೆ, ಸಿನಾಲೊ ಜಫ್ತಾ (ವಿ.ಕೀ.),ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಕಾ, ನಾನ್ಕುಲುಲೇಕೋ ಮ್ಲಾಬಾ.