ನ್ಯೂಜಿಲೆಂಡ್ 'ಎ' ವಿರುದ್ಧ ಮೊದಲ ಅನಧಿಕೃತ ಟೆಸ್ಟ್; 113ಕ್ಕೆ ಭಾರತ ಆಲೌಟ್
India A and New Zealand A: ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ 'ಎ' ತಂಡದ ನಾಯಕ ರೈಸ್ ಮಾರಿಯು, ಭಾರತ 'ಎ' ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ, ಪ್ರವಾಸಿ ಭಾರತ ತಂಡಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು ಮತ್ತು ಮೊದಲ ಅವಧಿಯ ಅಂತ್ಯಕ್ಕೆ ತಂಡವು 55 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು.
India A and New Zealand A -
ಲಿಂಕನ್, ಅ.24: ಶನಿವಾರ ಇಲ್ಲಿ ಆರಂಭಗೊಂಡ ಭಾರತ 'ಎ' ಮತ್ತು ನ್ಯೂಜಿಲೆಂಡ್ 'ಎ' ತಂಡಗಳ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ, ಭಾರತ 113 ರನ್ಗೆ ಸರ್ವಪತನ ಕಂಡಿದೆ. ಟೆಸ್ಟ್ ಉಪನಾಯಕ ಕೆ.ಎಲ್. ರಾಹುಲ್ ಮತ್ತು ಎಡಗೈ ಬ್ಯಾಟರ್ ಬಿ. ಸಾಯಿ ಸುದರ್ಶನ್ ಖಾತೆ ತೆರೆಯುವಲ್ಲಿ ವಿಫಲರಾದರು. 'ಎ' ತಂಡದ ನಾಯಕ ಧ್ರುವ್ ಜುರೆಲ್ ಕೇವಲ 1 ರನ್ ಗಳಿಸಿದರೆ, ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 17 ರನ್ಗಳಿಗೆ ಪೆವಿಲಿಯನ್ಗೆ ಮರಳಿದರು. ಪಂದ್ಯದ ಮೊದಲ ದಿನದ ಮೊದಲ ಅವಧಿಯಲ್ಲಿ ಈ ವಿಕೆಟ್ಗಳು ಪತನಗೊಂಡವು.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ 'ಎ' ತಂಡದ ನಾಯಕ ರೈಸ್ ಮಾರಿಯು, ಭಾರತ 'ಎ' ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ, ಪ್ರವಾಸಿ ಭಾರತ ತಂಡಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು ಮತ್ತು ಮೊದಲ ಅವಧಿಯ ಅಂತ್ಯಕ್ಕೆ ತಂಡವು 55 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತು.
IND vs NZ: ಎರಡನೇ ಟಿ20ಐನಿಂದ ಇಶಾನ್ ಕಿಶನ್ ಔಟ್, ಕುಮಾರ್ ಕುಶಾಗ್ರಾಗೆ ಸ್ಥಾನ!
ರಾಹುಲ್, ಎದುರಿಸಿದ 8 ಎಸೆತಗಳಲ್ಲಿ ಯಾವುದೇ ರನ್ ಗಳಿಸಲು ವಿಫಲರಾದರು. ಮೂರನೇ ಓವರ್ನ ಮೂರನೇ ಎಸೆತದಲ್ಲಿ ಫ್ರೇಸರ್ ಶೀಟ್ ಬೌಲಿಂಗ್ನಲ್ಲಿ ರಾಹುಲ್ ಪೆವಿಲಿಯನ್ಗೆ ಮರಳಿದರು. ವಿಕೆಟ್ ಕೀಪರ್ ಮಿಚೆಲ್ ಹೇ ಅವರು ರಾಹುಲ್ ಅವರ ಕ್ಯಾಚ್ ಪಡೆದರು.
ಕೆ.ಎಲ್. ಅವರ ವಿಕೆಟ್ ಪತನದ ನಂತರ, ಜೈಸ್ವಾಲ್ ಅವರು ದೇವದತ್ತ ಪಡಿಕ್ಕಲ್ (ಊಟದ ವಿರಾಮದ ವೇಳೆಗೆ 32 ರನ್ಗಳೊಂದಿಗೆ ಅಜೇಯರಾಗಿದ್ದರು) ಅವರೊಂದಿಗೆ ಕೈಜೋಡಿಸಿ, ಎರಡನೇ ವಿಕೆಟ್ಗಾಗಿ 71 ಎಸೆತಗಳಲ್ಲಿ 30 ರನ್ಗಳನ್ನು ಸೇರಿಸಿದರು. ಆದರೆ, 15ನೇ ಓವರ್ನ ಎರಡನೇ ಎಸೆತದಲ್ಲಿ, ಝಾಕ್ ಗಿಬ್ಸನ್ ಅವರ ಬೌಲಿಂಗ್ನಲ್ಲಿ ಮ್ಯಾಥ್ಯೂ ಬಾಯ್ಲ್ ಅವರಿಗೆ ಕ್ಯಾಚ್ ನೀಡಿ ಔಟಾದರು. ಸಾಯಿ ಸುದರ್ಶನ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ಆದರೆ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಜುರೆಲ್ 13 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿದ್ದಾಗ, ರೈಸ್ ಮಾರಿಯುಗೆ ಕ್ಯಾಚ್ ನೀಡಿ ಔಟಾದರು.
ಯಶ್ ರಾಥೋಡ್ ಅಜೇಯ 44 ಮತ್ತು ದೇವದತ್ತ ಪಡಿಕ್ಕಲ್ 32 ರನ್ ಗಳಿಸಿದ್ದೇ ತಂಡದ ಪರ ಅತ್ಯಧಿಕ ಗಳಿಕೆ. ಉಭಯ ಆಟಗಾರರ ಈ ಸಣ್ಣ ಬ್ಯಾಟಿಂಗ್ ಹೋರಾಟದ ನೆರವಿನಿಂದ ತಂಡ 100ರ ಗಡಿ ದಾಟುವಂತಾಯಿತು.