ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತ-ಐರ್ಲೆಂಡ್‌ ಟಿ20 ಪಂದ್ಯದ ಸಮಯ ಬದಲು

India vs Ireland T20Is: ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಟಿ20 ಪಂದ್ಯಗಳು ಶುಕ್ರವಾರ (ಜೂನ್ 26) ಮತ್ತು ಭಾನುವಾರ (ಜೂನ್ 28) ನಡೆಯಲಿವೆ. ಕ್ರಿಕೆಟ್ ಐರ್ಲೆಂಡ್ (ಸಿಐ) ಅನ್ನು ಉಲ್ಲೇಖಿಸಿ, ಕ್ರಿಕೆಟ್‌ಬಜ್ ವರದಿ ಮಾಡಿರುವ ಪ್ರಕಾರ, ಮಂಡಳಿಯು ಭಾರತದಲ್ಲಿನ ತನ್ನ ಮಾಧ್ಯಮ ಪಾಲುದಾರರೊಂದಿಗೆ ಚರ್ಚೆ ನಡೆಸಿ ಸಮಯ ಬದಲಾವಣೆಯ ಒಪ್ಪಂದಕ್ಕೆ ಬಂದಿವೆ ಎಂದು ತಿಳಿಸಿದೆ.

ಭಾರತ-ಐರ್ಲೆಂಡ್‌ ಟಿ20 ಪಂದ್ಯದ ಸಮಯ ಬದಲು

India-Ireland T20Is -

Abhilash BC
Abhilash BC Jun 25, 2026 3:35 PM

ನವದೆಹಲಿ, ಜೂ.25: ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಟಿ20(India vs Ireland T20Is) ಪಂದ್ಯಗಳ ಆರಂಭದ ಸಮಯವನ್ನು ಒಂದು ಗಂಟೆ ಮುಂದಕ್ಕೆ ಹಾಕಲಾಗಿದೆ. ಎರಡೂ ಪಂದ್ಯಗಳು ಸ್ಥಳೀಯ ಕಾಲಮಾನ ಮಧ್ಯಾಹ್ನ1:30ಕ್ಕೆ (ಭಾರತೀಯ ಕಾಲಮಾನ ಸಂಜೆ 6) ಬೆಲ್‌ಫಾಸ್ಟ್‌ನಲ್ಲಿ ಪ್ರಾರಂಭವಾಗಲಿವೆ.

ಐರ್ಲೆಂಡ್‌ನಲ್ಲಿ ಭಾರತವನ್ನು ಒಳಗೊಂಡ ಟಿ20ಐಗಳು ಸಾಮಾನ್ಯವಾಗಿ ಸ್ಥಳೀಯ ಸಮಯ ಮಧ್ಯಾಹ್ನ 2:30 ಕ್ಕೆ (ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ) ಪ್ರಾರಂಭವಾಗುತ್ತವೆ. ಆದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ವಿಶ್ವಕಪ್‌ ಪಂದ್ಯ ಭಾನುವಾರ(ಜೂ.28) ಸಂಜೆ 7 ಗಂಟೆಗೆ ಪ್ರಾರಂಭವಾಗುವ ಕಾರಣ ಪಂದ್ಯದೊಂದಿಗೆ ನೇರ ಘರ್ಷಣೆಯನ್ನು ತಪ್ಪಿಸಲು ಕೊನೆಯ ಕ್ಷಣದಲ್ಲಿ ಪುರುಷರ ಟಿ20 ಸರಣಿಯ ಸಮಯವನ್ನು ಬದಲಾಯಿಸಲಾಗಿದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಟಿ20 ಪಂದ್ಯಗಳು ಶುಕ್ರವಾರ (ಜೂನ್ 26) ಮತ್ತು ಭಾನುವಾರ (ಜೂನ್ 28) ನಡೆಯಲಿವೆ. ಕ್ರಿಕೆಟ್ ಐರ್ಲೆಂಡ್ (ಸಿಐ) ಅನ್ನು ಉಲ್ಲೇಖಿಸಿ, ಕ್ರಿಕೆಟ್‌ಬಜ್ ವರದಿ ಮಾಡಿರುವ ಪ್ರಕಾರ, ಮಂಡಳಿಯು ಭಾರತದಲ್ಲಿನ ತನ್ನ ಮಾಧ್ಯಮ ಪಾಲುದಾರರೊಂದಿಗೆ ಚರ್ಚೆ ನಡೆಸಿ ಸಮಯ ಬದಲಾವಣೆಯ ಒಪ್ಪಂದಕ್ಕೆ ಬಂದಿವೆ ಎಂದು ತಿಳಿಸಿದೆ.

ಈ ಪ್ರವಾಸವು ಭಾರತದ T20I ನಾಯಕನಾಗಿ ಶ್ರೇಯಸ್ ಅಯ್ಯರ್ ಅವರ ಮೊದಲ ಅಗ್ನಿಪರೀಕ್ಷೆಯಾಗಿದೆ. ಸೂರ್ಯಕುಮಾರ್ ಯಾದವ್ ಅವರನ್ನು ಕಳಪೆ ಪ್ರದರ್ಶನದ ನಂತರ ಕೈಬಿಡಲಾಗಿದೆ.

ಭಾರತ vs ಐರ್ಲೆಂಡ್ ಟಿ20; ಮುಖಾಮುಖಿ, ರನ್‌, ವಿಕೆಟ್‌ ದಾಖಲೆ ಹೇಗಿದೆ?

ಭಾರತದ ತಂಡದಲ್ಲಿ ಪ್ರಿನ್ಸ್ ಯಾದವ್, ಸೂರ್ಯಾಂಶ್ ಶೆಡ್ಜ್ ಮತ್ತು 15 ವರ್ಷದ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಸೇರಿದಂತೆ ಮೂವರು ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಭಾರತದಂತೆಯೇ, ಐರ್ಲೆಂಡ್ ತಂಡವನ್ನು ನೂತನ ನಾಯಕ ಲೋರ್ಕನ್ ಟಕರ್ ಮುನ್ನಡೆಸಲಿದ್ದಾರೆ. 29 ವರ್ಷದ ಅವರು ಹಿಂದೆ ತಮ್ಮ ಹಂಗಾಮಿಯಾಗಿ ತಂಡವನ್ನು ಮುನ್ನಡೆಸಿದ್ದರು.

"ಟಿ20 ಕ್ರಿಕೆಟ್‌ಗೆ ಬಂದಾಗ ಭಾರತವು ಸಂಪೂರ್ಣ ಶಕ್ತಿಶಾಲಿಯಾಗಿದೆ. ನಮ್ಮ ಹೊಸ ಕ್ರಿಕೆಟ್‌ ಋತುವಿನ ಆರಂಭದಲ್ಲಿಯೇ ಅವರ ವಿರುದ್ಧ ನಾವು ಆಡುತ್ತಿರುವುದು ನಮ್ಮ ಅದೃಷ್ಟ ಮತ್ತು ಅವರು ನೀಡುವುದಕ್ಕಿಂತ ನಮ್ಮ ಗುಂಪಿಗೆ ಕಠಿಣ ಸವಾಲು ಇನ್ನೊಂದಿಲ್ಲ" ಎಂದು ಟಕರ್ ಹೇಳಿದರು.

ಭಾರತ ಮತ್ತು ಐರ್ಲೆಂಡ್ ತಂಡಗಳು ಟಿ20ಐಗಳಲ್ಲಿ ಎಂಟು ಬಾರಿ ಮುಖಾಮುಖಿಯಾಗಿದ್ದು ಭಾರತ ಅಜೇಯವಾಗಿದೆ. ಉಭಯ ತಂಡಗಳು ಕೊನೆಯ ಬಾರಿ ಮುಖಾಮುಖಿಯಾದದ್ದು 2024 ರ ನ್ಯೂಯಾರ್ಕ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸಮಯದಲ್ಲಿ, ಆ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಜಯ ಸಾಧಿಸಿತ್ತು.