ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Women's Cricket Team: ಫೈನಲ್‌ಗೂ ಮುನ್ನ ಮುಂಬೈನ ಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ಟೀಮ್‌ ಇಂಡಿಯಾ

ಧೋನಿ ಬಳಗ 2011ರಲ್ಲಿ ತವರಿನಲ್ಲೇ ವಿಶ್ವಕಪ್​ ಗೆದ್ದಂತೆ, ಹರ್ಮಾನ್​ಪ್ರೀತ್​ ಕೌರ್​ ಪಡೆ ಕೂಡ ತವರಿನಲ್ಲೇ ವಿಶ್ವಕಪ್​ ಎತ್ತಿಹಿಡಿದು ವಿಜೃಂಭಿಸಲಿ ಎಂದು ಅಭಿಮಾನಿಗಳು, ಮಾಜಿ ಆಟಗಾರರು ಹಾರೈಸಿದ್ದಾರೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಇಗ್ಗಜ ಕಪಿಲ್‌ದೇವ್‌ ಕೂಡ ಮಹಿಳಾ ತಂಡಕ್ಕೆ ಶುಭ ಹಾರೈಸಿದ್ದಾರೆ.

Indian Women's Cricket Team

ನವಿ ಮುಂಬೈ: 13ನೇ ಆವೃತ್ತಿಯ ಮಹಿಳೆಯರ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್(Womens World Cup Final)​ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದೆ. ನವಿಮುಂಬೈನ ಡಾ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆಯುವ ಜಿದ್ದಾಜಿದ್ದಿನ ಫೈನಲ್‌ನಲ್ಲಿ ಹರ್ಮಾನ್​ಪ್ರೀತ್​ ಕೌರ್​ ನೇತೃತ್ವದ ಭಾರತ(Indian Women's Cricket Team) ತಂಡ ದಕ್ಷಿಣ ಆಫ್ರಿಕಾ(IND vs SA) ತಂಡದ ಸವಾಲು ಎದುರಿಸಲಿದೆ. ಭಾರತ ತಂಡದ ಗೆಲುವಿಗಾಗಿ ದೇಶಾದ್ಯಂತ ಕ್ರಿಕೆಟ್‌ ಅಭಿಮಾನಿಗಳು ಸ್ತೋತ್ರ, ಶ್ಲೋಕ ಪಠಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ವಿವಿಧ ಸ್ಟಾರ್ ಆಟಗಾರರ ಭಾವಚಿತ್ರಗಳನ್ನು ಹಿಡಿದು ಜಯ ಘೋಷ ಕೂಗಿದ್ದಾರೆ.

ಫೈನಲ್‌ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾದ ಆಟಗಾರ್ತಿಯರಾದ ರಿಷಾ ಘೋಷ್‌, ಶಫಾಲಿ ವರ್ಮ, ರೇಣುಕಾ ಸಿಂಗ್‌ ಠಾಕೂರ್‌ ಮುಂಬೈನಲ್ಲಿರುವ ಪ್ರಸಿದ್ಧ ಸಿದ್ದಿವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.



ಕರ್ನಾಟಕ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ಹಜರತ್ ಸೈಯದ್ ಯಾಕೂಬ್ ಸಾಹಿನ್ ಮಂದಿರದಲ್ಲಿ, ಗುಜರಾತ್​ನ ಬೋಟಾಡ್‌ನಲ್ಲಿ ಕಷ್ಟಭಂಜನ್ ದೇವ್ ಹನುಮಂಜಿ ಮಹಾರಾಜರ ವಿಶಿಷ್ಟ ದರ್ಶನ ಪಡೆದ ಕ್ರಿಕೆಟ್​ ಅಭಿಮಾನಿಗಳು ಭಾರತ ಗೆಲುವಿಗಾಗಿ ಪ್ರಾರ್ಥಿಸಿದರು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿಯೂ ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳು ಶ್ರೀ ಹನುಮಾನ್ ಗರ್ಹಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ ind vs sa: ಭಾರತ ಗೆದ್ದರೆ ಬಿಸಿಸಿಐನಿಂದ ₹125 ಕೋಟಿ ಬಹುಮಾನ!

ಧೋನಿ ಬಳಗ 2011ರಲ್ಲಿ ತವರಿನಲ್ಲೇ ವಿಶ್ವಕಪ್​ ಗೆದ್ದಂತೆ, ಹರ್ಮಾನ್​ಪ್ರೀತ್​ ಕೌರ್​ ಪಡೆ ಕೂಡ ತವರಿನಲ್ಲೇ ವಿಶ್ವಕಪ್​ ಎತ್ತಿಹಿಡಿದು ವಿಜೃಂಭಿಸಲಿ ಎಂದು ಅಭಿಮಾನಿಗಳು, ಮಾಜಿ ಆಟಗಾರರು ಹಾರೈಸಿದ್ದಾರೆ. ಭಾರತಕ್ಕೆ ಚೊಚ್ಚಲ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಇಗ್ಗಜ ಕಪಿಲ್‌ದೇವ್‌ ಕೂಡ ಮಹಿಳಾ ತಂಡಕ್ಕೆ ಶುಭ ಹಾರೈಸಿದ್ದಾರೆ.

ಫೈನಲ್​ನಲ್ಲಿ ಯಾವುದೇ ತಂಡ ಗೆದ್ದರೂ, ಮಹಿಳಾ ವಿಶ್ವಕಪ್​ ಗೆದ್ದ 4ನೇ ತಂಡವೆನಿಸಲಿದೆ. ಆಸ್ಟ್ರೆಲಿಯಾ-ಇಂಗ್ಲೆಂಡ್​ ಎರಡೂ ತಂಡಗಳಿರದ ಮೊದಲ ಮಹಿಳಾ ಏಕದಿನ ವಿಶ್ವಕಪ್​ ಫೈನಲ್​ ಇದಾಗಿದೆ.