Women's World Cup final: ಚಾರಿತ್ರಿಕ ವಿಶ್ವಕಪ್ ಟ್ರೋಫಿಗೆ ಭಾರತ-ದಕ್ಷಿಣ ಆಫ್ರಿಕಾ ಆಟಗಾರ್ತಿಯರ ಸೆಣಸು
INDW vs SAW: ನಾಯಕಿ ಲಾರಾ ವೊಲ್ವಾರ್ಟ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಆಲ್‌ರೌಂಡರ್ ಮರಿಜಾನೆ ಕಾಪ್ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಉತ್ತಮ ಫಾರ್ಮ್‌ನಲ್ಲಿದ್ದು ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ ಅವರಲ್ಲಿದೆ. ನದಿನ್ ಡಿ ಕ್ಲರ್ಕ್, ತಾಜ್ಮೀನ್ ಬ್ರಿಟ್ಸ್ ಅವರನ್ನು ನಿಯಂತ್ರಿಸುವುದೇ ಭಾರತದ ಬೌಲರ್‌ಗಳ ಮುಂದಿರುವ ಕಠಿಣ ಸವಾಲು.
-
Abhilash BC
Nov 1, 2025 7:31 PM
ನವಿ ಮುಂಬೈ: ಭಾರತ ಮಹಿಳಾ ತಂಡ 52 ವರ್ಷಗಳ ಏಕದಿನ ವಿಶ್ವಕಪ್(Women's World Cup final) ಕ್ರಿಕೆಟ್‌ನಲ್ಲಿ ಇತಿಹಾಸ ಬರೆಯಲು ಸಜ್ಜಾಗಿ ನಿಂತಿದೆ. ಭಾನುವಾರ ನವಿ ಮುಂಬೈ ಮೈದಾನದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ(INDW vs SAW) ಸವಾಲು ಎದುರಿಸಲಿದೆ. ಸೆಮಿಫೈನಲ್‌ನಲ್ಲಿ 7 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ದಾಖಲೆ ಮೊತ್ತದ ಚೇಸಿಂಗ್ ನಡೆಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ಪಡೆ ಫೈನಲ್‌ನಲ್ಲಿಯೂ ಇದೇ ಜೋಶ್‌ನಲ್ಲಿ ಆಡಲಿ ಎನ್ನುವುದು ಭಾರತೀಯ ಅಭಿಮಾನಗಳ ಹಾರೈಕೆ.
ಮೂರನೇ ಫೈನಲ್
ಭಾರತಕ್ಕೆ ಇದು ಮೂರನೇ ಫೈನಲ್. ಈ ಹಿಂದೆ 2005 ಮತ್ತು 2017ರಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಟ್ರೋಫಿ ಗೆಲ್ಲಲು ವಿಫಲವಾಗಿತ್ತು. 2017ರಲ್ಲಿ ಹರ್ಮನ್‌ಪ್ರೀತ್ ಕೌರ್ ತಂಡದಲ್ಲಿದ್ದರು. ಮೂರನೇ ಬಾರಿಯ ಫೈನಲ್‌ನಲ್ಲಿ ಅವರು ನಾಯಕಿಯಾಗಿದ್ದಾರೆ. ನಿವೃತ್ತಿ ಅಂಚಿನಲ್ಲಿರುವ ಅವರಿಗೆ ಕೊನೆಯ ಪ್ರಯತ್ನದಲ್ಲಿ ಕಪ್ ಗೆದ್ದು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ನೊಂದಾಯಿಸಲು ಉತ್ತಮ ಅವಕಾಶವಿದೆ.
ಜೆಮಿಮಾ ಮೇಲೆ ನಂಬಿಕೆ
ಸೆಮಿಫೈನಲ್ ಪಂದ್ಯದಲ್ಲಿ ದಿಟ್ಟ ಬ್ಯಾಟಿಂಗ್ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಜೆಮಿಮಾ ರೋಡ್ರಿಗಸ್ ಮೇಲೆ ತಂಡ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಶಫಾಲಿ ವರ್ಮ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯ ಬ್ಯಾಟಿಂಗ್ ನಡೆಸಬೇಕಿದೆ. ಸ್ಮೃತಿ ಮಂಧಾನ ಜತೆ ದೊಡ್ಡ ಜತೆಯಾಟ ನಡೆಸುವ ಮೂಲಕ ತಂಡಕ್ಕೆ ನೆರವಾಗಬೇಕಾದ ಜವಾಬ್ದಾರಿಯಿದೆ. ಕೌರ್, ರಿಚಾ ಘೋಷ್, ದೀಪ್ತಿ ಹಾಗೂ ಅಮನ್ಜೋತ್ ಕೌರ್ ಅವರು ಮಧ್ಯಮಕ್ರಮಾಂಕ ಶಕ್ತಿಯಾಗಿದ್ದಾರೆ.
Two nations. One dream 🇮🇳🇿🇦
— ICC (@ICC) November 1, 2025
Harmanpreet Kaur and Laura Wolvaardt stand on the precipice of #CWC25 history 🏆 pic.twitter.com/Kyq4WBSjqe
ಹರಿಣ ಪಡೆಯೂ ಬಲಿಷ್ಠ
ಇದೇ ಮೊದಲ ಬಾರಿಗೆ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ಎಲ್ಲ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್‌ನಲ್ಲಿ ತಂಡವನ್ನು ಸುಲಭವಾಗಿ ಸೋಲಿಸಿತ್ತು. ಮತ್ತು ಲೀಗ್ ಪಂದ್ಯದಲ್ಲಿ ಭಾರತಕ್ಕೂ ಸೋಲಿನ ರುಚಿ ತೋರಸಿತ್ತು. ಹೀಗಾಗಿ ಭಾರತ ತಂಡ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಗಳಲ್ಲಿ ಒಂದುಸಣ್ಣ ಲೋಪವೂ ದುಬಾರಿಯಾಗಬಹುದು.
ಇದನ್ನೂ ಓದಿ ind vs sa: ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ
ನಾಯಕಿ ಲಾರಾ ವೊಲ್ವಾರ್ಟ್ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಆಲ್‌ರೌಂಡರ್ ಮರಿಜಾನೆ ಕಾಪ್ ಬ್ಯಾಟಿಂಗ್ ಜತೆಗೆ ಬೌಲಿಂಗ್‌ನಲ್ಲಿಯೂ ಉತ್ತಮ ಫಾರ್ಮ್‌ನಲ್ಲಿದ್ದು ಏಕಾಂಗಿಯಾಗಿ ತಂಡವನ್ನು ಗೆಲ್ಲಿಸುವ ಸಾಮರ್ಥ ಅವರಲ್ಲಿದೆ. ನದಿನ್ ಡಿ ಕ್ಲರ್ಕ್, ತಾಜ್ಮೀನ್ ಬ್ರಿಟ್ಸ್ ಅವರನ್ನು ನಿಯಂತ್ರಿಸುವುದೇ ಭಾರತದ ಬೌಲರ್‌ಗಳ ಮುಂದಿರುವ ಕಠಿಣ ಸವಾಲು.