ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Test Series: ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

ಉಪನಾಯಕ ರಿಷಭ್‌ ಪಂತ್‌ ಕೀಪಿಂಗ್‌ ಹೊಣೆ ಹೊರಲಿದ್ದಾರೆ. ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಈ ತಂಡದ ಪ್ರಕಾರ ಆಡುವ ಬಳಗದಲ್ಲಿ ಒಟ್ಟು ಮೂರು ಕನ್ನಡಿಗರು ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತ ಆಡುವ ಬಳಗ ಹೇಗಿದ್ದೀತು?

Profile Abhilash BC Jun 8, 2025 7:03 PM

ಲಂಡನ್‌: 19 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ(IND vs ENG Test Series) ಟೆಸ್ಟ್‌ ಸರಣಿ ಗೆಲ್ಲಲು ಪಣ ತೊಟ್ಟಿರುವ ಶುಭಮನ್‌ ಗಿಲ್‌(shubman gill) ನೇತೃತ್ವದ ಯುವ ಭಾರತ ತಂಡ ಈಗಾಗಲೇ ಲಂಡನ್‌ ತಲುಪಿದ್ದು ಕಠಿಣ ಅಭ್ಯಾಸ ಕೂಡ ಆರಂಭಿಸಿದೆ. ಉಭಯ ತಂಡಗಳ ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯ ಜೂನ್‌ 20 ರಿಂದ ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತದ ಸಂಭಾವ್ಯ ಆಡುವ(India's Likely Playing XI) ಬಳಗ ಹೇಗಿದ್ದೀತು? ಎಂಬ ವರದಿ ಇಲ್ಲಿದೆ.

18ನೇ ಆವೃತ್ತಿಯಲ್ಲಿ ಮಿಂಚಿದ್ದ ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌, ರಾಹುಲ್‌ ಹೀಗೆ ಹಲವು ಆಟಗಾರರು ತಂಡದಲ್ಲಿದ್ದಾರೆ. ರೋಹಿತ್‌ ಶರ್ಮ, ವಿರಾಟ ಕೊಹ್ಲಿ ನೀವೃತ್ತಿಯಿಂದ ತೆರವಾದ ಎರಡು ಸ್ಥಾನಕ್ಕೂ ಸೂಕ್ತ ಆಟಗಾರನ ಆಯ್ಕೆಯಾಗಬೇಕು. ಸಂಭಾವ್ಯ ತಂಡದ ಪ್ರಕಾರ ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಆರಂಭಿಕನಾಗಿ ಆಡಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ ಮತ್ತು ಯಶಸ್ವಿ ಜೈಸ್ವಾಲ್‌ ಇನಿಂಗ್ಸ್‌ ಆರಂಭಿಸುವುದು ಖಚಿತ. ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಆಡಿದರೆ, ವಿರಾಟ್‌ ಕೊಹ್ಲಿ ಸ್ಥಾನದಲ್ಲಿ ಕರುಣ್‌ ನಾಯರ್‌ ಮತ್ತು ಸಾಯಿ ಸುದರ್ಶನ್‌ ಮಧ್ಯೆ ತೀವ್ರ ಪೈಪೋಟಿ ಇದ್ದರೂ ಅನುಭವದ ಆಧಾರದಲ್ಲಿ ಮತ್ತು ಇಂಗ್ಲೆಂಡ್‌ ಲಯನ್ಸ್‌ ವಿರುದ್ಧದ ಮೊದಲ ಅಭ್ಯಾಸ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್‌ಗೆ ಅವಕಾಶ ಸಿಗುವುದು ಖಚಿತ.

ಉಪನಾಯಕ ರಿಷಭ್‌ ಪಂತ್‌ ಕೀಪಿಂಗ್‌ ಹೊಣೆ ಹೊರಲಿದ್ದಾರೆ. ನಿತೀಶ್‌ ಕುಮಾರ್‌ ರೆಡ್ಡಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ. ಈ ತಂಡದ ಪ್ರಕಾರ ಆಡುವ ಬಳಗದಲ್ಲಿ ಒಟ್ಟು ಮೂರು ಕನ್ನಡಿಗರು ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ IND vs ENG Test: ಟೆಸ್ಟ್‌ ಸರಣಿಗೆ ಅಭ್ಯಾಸ ಆರಂಭಿಸಿದ 'ಯಂಗ್‌ ಟೀಮ್‌ ಇಂಡಿಯಾ'

ಭಾರತ ಸಂಭಾವ್ಯ ಆಡುವ ಬಳಗ

ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭ್‌ಮನ್ ಗಿಲ್, ಕರುಣ್ ನಾಯರ್, ನಿತೀಶ್‌ ಕುಮಾರ್‌ ರೆಡ್ಡಿ, ರಿಷಭ್ ಪಂತ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ.