ಲಂಕಾದಲ್ಲಿ ಸತತ ಶತಕ ಸಿಡಿಸಿ ಸಚಿನ್ ಜತೆ ಎಲೈಟ್ ಪಟ್ಟಿ ಸೇರಿದ ಪಡಿಕ್ಕಲ್
ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಪಡಿಕ್ಕಲ್, ತಮ್ಮ ಎರಡನೇ ಟೆಸ್ಟ್ ಶತಕದ ಹಾದಿಯಲ್ಲಿ 10 ಬೌಂಡರಿಗಳನ್ನು ಬಾರಿಸಿದರು. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಸತತ ಶತಕಗಳನ್ನು ಗಳಿಸುವ ಮೊದಲು, ಭಾರತ ಪರ ಪಡಿಕ್ಕಲ್ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದರು.
Devdutt Padikkal -
ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಪರ ದೇವದತ್ ಪಡಿಕ್ಕಲ್ ಮಿಂಚುತ್ತಿದ್ದಾರೆ. ಕರ್ನಾಟಕದ ಎಡಗೈ ಬ್ಯಾಟ್ಸ್‌ಮನ್ ಗಾಲೆಯಲ್ಲಿ ನಡೆದ ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಪರ ಶತಕ ಗಳಿಸಿದರು. ಭಾನುವಾರ ಆರಂಭಗೊಂಡ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮತ್ತೊಂದು ಶತಕ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
168 ಎಸೆತಗಳಿಂದ ಪಡಿಕ್ಕಲ್ 117ರನ್ ಗಳಿಸಿದರು. ಈ ಶತಕದೊಂದಿಗೆ ಅವರು ದಿಗ್ಗಜ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಮೊಹಮ್ಮದ್ ಅಜರುದ್ದೀನ್, ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ನಂತರ ಶ್ರೀಲಂಕಾದಲ್ಲಿ ಸತತ ಟೆಸ್ಟ್ ಪಂದ್ಯಗಳಲ್ಲಿ ಶತಕ ಗಳಿಸಿದ ಆರನೇ ಭಾರತೀಯ ಕ್ರಿಕೆಟಿಗ ಎನಿಸಿದರು. ಜುಲೈ-ಆಗಸ್ಟ್ 1993 ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಕಾಂಬ್ಳಿ ಸತತ ಟೆಸ್ಟ್ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದರು. ಆ ಬಳಿಕ ಆಗಸ್ಟ್ 1997 ರಲ್ಲಿ ಭಾರತದ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ಸಚಿನ್ ಮತ್ತು ಅಜರುದ್ದೀನ್ ಸತತ ಟೆಸ್ಟ್ ಶತಕಗಳನ್ನು ಗಳಿಸಿದರು.
2015 ರ ಶ್ರೀಲಂಕಾ ಪ್ರವಾಸದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಧವನ್ ಶತಕ ಬಾರಿಸಿದರು ಮತ್ತು ನಂತರ 2017 ರ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಶತಕ ಬಾರಿಸಿದರು. ಪೂಜಾರ ಕೂಡ ಧವನ್ ಅವರಂತೆ 2015 ಮತ್ತು 2017ರಲ್ಲಿ ಶತಕ ಬಾರಿಸಿದರು.
ಕೊಲಂಬೊದಲ್ಲಿ ದೇವದತ್ತ ಶತಕದ ಅಲೆ; ಮೊದಲ ದಿನವೇ ಬೃಹತ್ ಮೊತ್ತ ಕಲೆಹಾಕಿದ ಭಾರತ
ಮಾರ್ಚ್ 2024 ರಲ್ಲಿ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಡಿಕ್ಕಲ್, ಭಾರತ ಪರ ಎರಡು ಟೆಸ್ಟ್ ಶತಕ ಬಾರಿಸಿದ್ದಾರೆ.
ಭಾನುವಾರ ನಾಯಕ ಶುಭಮನ್ ಗಿಲ್ ಅವರೊಂದಿಗೆ ಮೂರನೇ ವಿಕೆಟ್‌ಗೆ 209 ಎಸೆತಗಳಲ್ಲಿ 120 ರನ್‌ಗಳನ್ನು ಸೇರಿಸಿದರು. ನಂತರ ಭಾರತಕ್ಕಾಗಿ ತಮ್ಮ 50 ನೇ ಡಬ್ಲ್ಯೂಟಿಸಿ ಪಂದ್ಯವನ್ನು ಆಡುತ್ತಿರುವ ರವೀಂದ್ರ ಜಡೇಜಾ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 115 ಎಸೆತಗಳಲ್ಲಿ 74 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಭಾರತ-ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಪಡಿಕ್ಕಲ್, ತಮ್ಮ ಎರಡನೇ ಟೆಸ್ಟ್ ಶತಕದ ಹಾದಿಯಲ್ಲಿ 10 ಬೌಂಡರಿಗಳನ್ನು ಬಾರಿಸಿದರು. ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಸತತ ಶತಕಗಳನ್ನು ಗಳಿಸುವ ಮೊದಲು, ಭಾರತ ಪರ ಪಡಿಕ್ಕಲ್ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದರು.