ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: 7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ಅಗ್ರ 4 ತಂಡಗಳು ಪ್ಲೇ ಆಫ್‌ ಪ್ರವೇಶ ಪಡೆಯಲಿದೆ. ಒಂದೊಮ್ಮೆ ರಾಜಸ್ಥಾನ್‌ ಮುಂದಿನ ಎಲ್ಲ ಪಂದ್ಯ ಗೆದ್ದು 14 ಅಂಕ ಗಳಿಸಿದರೂ ತಂಡಕ್ಕೆ ಪ್ಲೇ-ಆಫ್‌ ಸ್ಥಾನ ಖಚಿತವಾಗುವುದಿಲ್ಲ. ಏಕೆಂದರೆ ಇತರ ತಂಡದ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗಿದೆ. ಗುಂಪು ಹಂತದ ಅಂತ್ಯದಲ್ಲಿ ನಾಲ್ಕು ತಂಡಗಳು 16 ಅಂಕಗಳನ್ನು ಗಳಿಸಿಸಬಾರದು. ಆಗ ರಾಜಸ್ಥಾನ್‌ಗೆ ಅವಕಾಶವಿದೆ.

7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

Profile Abhilash BC Apr 25, 2025 9:02 AM

ಬೆಂಗಳೂರು: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ತಂಡವು ಉತ್ತಮ ಪ್ರದರ್ಶನ ನೀಡಿ ಪ್ಲೇ-ಆಫ್‌ ಪ್ರವೇಶಿಸಿತ್ತು. ಆದರೆ 2025 ರ ಋತುವಿನಲ್ಲಿ(IPL 2025) ಅತ್ಯಂತ ಕಳಪೆ ಪ್ರದರ್ಶನದ ಮೂಲಕ ಲೀಗ್‌ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದೆ. ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಮತ್ತು 7 ಸೋಲಿನಿಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಆದರೂ ತಂಡಕ್ಕೆ ಪ್ಲೇ ಆಫ್‌ನ ಕ್ಷೀಣ ಅವಕಾಶವೊಂದಿದೆ. ಈ ಲೆಕ್ಕಾಚಾರವೊಂದು ಹೀಗಿದೆ.

ರಾಜಸ್ಥಾನ್ ರಾಯಲ್ಸ್ ತಂಡವು ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ರನ್‌ರೇಟ್‌ -0.625 ಆಗಿದೆ. ತಂಡಕ್ಕೆ ಇನ್ನು 5 ಪಂದ್ಯಗಳು ಬಾಕಿ ಇದೆ. ಈ ಎಲ್ಲ ಪಂದ್ಯಗಳನ್ನು ಗೆದ್ದರೆ ತಂಡದ ಒಟ್ಟಾರೆ ಅಂಕ 14 ಆಗಲಿದೆ.

ಅಗ್ರ 4 ತಂಡಗಳು ಪ್ಲೇ ಆಫ್‌ ಪ್ರವೇಶ ಪಡೆಯಲಿದೆ. ಒಂದೊಮ್ಮೆ ರಾಜಸ್ಥಾನ್‌ ಮುಂದಿನ ಎಲ್ಲ ಪಂದ್ಯ ಗೆದ್ದು 14 ಅಂಕ ಗಳಿಸಿದರೂ ತಂಡಕ್ಕೆ ಪ್ಲೇ-ಆಫ್‌ ಸ್ಥಾನ ಖಚಿತವಾಗುವುದಿಲ್ಲ. ಏಕೆಂದರೆ ಇತರ ತಂಡದ ಫಲಿತಾಂಶ ಕೂಡ ಇಲ್ಲಿ ಮುಖ್ಯವಾಗಿದೆ. ಗುಂಪು ಹಂತದ ಅಂತ್ಯದಲ್ಲಿ ನಾಲ್ಕು ತಂಡಗಳು 16 ಅಂಕಗಳನ್ನು ಗಳಿಸಿಸಬಾರದು. ಆಗ ರಾಜಸ್ಥಾನ್‌ಗೆ ಅವಕಾಶವಿದೆ.

ಇದನ್ನೂ ಓದಿ IPL 2025: ಆರ್‌ಸಿಬಿ ವಿರುದ್ಧ ದಾಖಲೆ ಬರೆದ ಜೈಸ್ವಾಲ್‌; ಈ ಸಾಧನೆ ಮಾಡಿದ ಮೊದಲಿಗ

ಒಂದೊಮ್ಮೆ ರಾಜಸ್ಥಾನ್‌ ಮುಂದಿನ ಒಂದು ಪಂದ್ಯ ಸೋತರೂ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಗುರುವಾರ ಆರ್‌ಸಿಬಿ ವಿರುದ್ಧದ ಪಂದ್ಯ ಗೆದ್ದಿದ್ದರೆ ರಾಜಸ್ಥಾನ್‌ಗೆ ಪ್ಲೇ ಆಫ್‌ ಅವಕಾಶ ಹೆಚ್ಚು ಇರುತ್ತಿತ್ತು. ಆದರೆ 11 ರನ್‌ ಅಂತರದಿಂದ ಸೋಲು ಕಂಡಿತ್ತು.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್‌ ಅವರ ಅರ್ಧಶತಕದ ನೆರವಿನಿಂದ 5 ವಿಕೆಟ್‌ಗೆ 205 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್‌ 194 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಉತ್ತಮ ಆರಂಭ ಪಡೆದರೂ ರಾಜಸ್ಥಾನ್‌ ತಂಡ ಕೊನೆಯ ಹಂತದಲ್ಲಿ ನಾಟಕೀಯ ಕುಸಿತ ಕಂಡದ್ದು ಸೋಲಿಗೆ ಪ್ರಮುಖ ಕಾರಣವಾಯಿತು.