IPL 2025: ಕೇವಲ ಲೀಗ್ ಪಂದ್ಯಕ್ಕಾಗಿ ಆರ್‌ಸಿಬಿ ಪ್ರಯಾಣಿಸಲಿದೆ 17 ಸಾವಿರ ಕಿ. ಮೀ.
ಆರ್‌ಸಿಬಿ ಕೇವಲ ಲೀಗ್ ಪಂದ್ಯವನ್ನಾಡಲು ಬರೋಬ್ಬರಿ 17,084 ಸಾವಿರ ಕಿ. ಮೀ. ಪ್ರಯಾಣ ಮಾಡಲಿದೆ. ಇನ್ನು ಎಲಿಮಿನೇಟರ್, ಪ್ಲೇ ಆಫ್ ಮತ್ತು ಫೈನಲ್ ಪ್ರವೇಶಿಸಿದರೆ 18 ಸಾವಿರಕ್ಕೂ ಅಧಿಕ ದೂರ ಪ್ರಯಾಣಿಸಬೇಕಿದೆ. ಆಟದಿಂದ ದೈಹಿಕವಾಗಿ ದಣಿಯೋ ಆಟಗಾರರಿಗೆ ಈ ಪ್ರಯಾಣ ಮತ್ತಷ್ಟು ಹೊರೆಯಾಗಲಿದೆ.


ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ(IPL 2025) ಪಂದ್ಯಾವಳಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ಬಾರಿ ಆಟಗಾರರಿಗೆ ಪಂದ್ಯಕ್ಕಿಂತ ಪ್ರಯಾಣದ್ದೇ ಸವಾಲಾಗಿದೆ. 10 ತಂಡಗಳು ತಲಾ 14 ಪಂದ್ಯಗಳನ್ನು ಆಡಲಿದ್ದು, ಏಳು ತವರಿನಲ್ಲಿ(ipl 2025 venues) ಮತ್ತು ಉಳಿದ ಏಳು ಪಂದ್ಯಗಳನ್ನು ಬೇರೆ ತಾಣಗಳಲ್ಲಿ ಆಡಲಿವೆ. ಅಂದರೆ ತಂಡವೊಂದು ಎಂಟು ವಿಭಿನ್ನ ಸ್ಥಳಗಳಲ್ಲಿ ಆಡಲಿದೆ. ಆದರೆ ಮೂರು ತಂಡಗಳು ಒಂಬತ್ತು ಸ್ಥಳಗಳಲ್ಲಿ ಆಡಲಿವೆ. ಈ ತಂಡಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್. ಈ ಮೂರು ತಂಡಗಳು ಕ್ರಮವಾಗಿ ದೆಹಲಿ, ಜೈಪುರ ಮತ್ತು ಚಂಡೀಗಢ (ಮುಲ್ಲನ್‌ಪುರ)ದಲ್ಲಿ ಆಡುವ ಜತೆಗೆ ವಿಶಾಖಪಟ್ಟಣಂ, ಗುವಾಹಟಿ ಮತ್ತು ಧರ್ಮಶಾಲಾಗಳ ಎರಡನೇ ತವರು ಸ್ಥಳಗಳಲ್ಲಿಯೂ ಆಡಲಿದೆ.
ಆರ್‌ಸಿಬಿಗೆ ಪ್ರಯಾಣದ್ದೇ ಚಿಂತೆ
ಹೌದು, ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಹಂಬಲದಲ್ಲಿರುವ ಆರ್‌ಸಿಬಿ(Royal Challengers Bengaluru) ತಂಡಕ್ಕೆ ಈ ಬಾರಿ ಪ್ರಯಾಣದ ಸವಾಲು ಎದುರಾಗಿದೆ. ತಂಡ ಅರ್ಧ ಸೀಸನ್ನ ಟ್ರಾವೆಲಿಂಗ್ನಲ್ಲೇ ಕಳೆಯಲಿದೆ. ಆರ್‌ಸಿಬಿ ಕೇವಲ ಲೀಗ್ ಪಂದ್ಯವನ್ನಾಡಲು ಬರೋಬ್ಬರಿ 17,084 ಸಾವಿರ ಕಿ. ಮೀ. ಪ್ರಯಾಣ ಮಾಡಲಿದೆ. ಇನ್ನು ಎಲಿಮಿನೇಟರ್, ಪ್ಲೇ ಆಫ್ ಮತ್ತು ಫೈನಲ್ ಪ್ರವೇಶಿಸಿದರೆ 18 ಸಾವಿರಕ್ಕೂ ಅಧಿಕ ದೂರ ಪ್ರಯಾಣಿಸಬೇಕಿದೆ. ಆಟದಿಂದ ದೈಹಿಕವಾಗಿ ದಣಿಯೋ ಆಟಗಾರರಿಗೆ ಈ ಪ್ರಯಾಣ ಮತ್ತಷ್ಟು ಹೊರೆಯಾಗಲಿದೆ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿ ಆಟಗಾರರು ಟ್ರಾವೆಲಿಂಗ್ನಿಂದ ಸುಸ್ತಾಗಲಿದ್ದಾರೆ. ಆರ್‌ಸಿಬಿ ಹೊರತುಪಡಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 16,184 ಕಿ.ಮೀ ದೂರ ಪ್ರಯಾಣಿಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಅತಿ ಕಡಿಮೆ ಪ್ರಯಾಣ ಬೆಳೆಸುವ ತಂಡವಾಗಿದೆ. 9270 ಕಿ.ಮೀ ಪ್ರಯಾಣಿಸಲಿದೆ.
ಇದನ್ನೂ ಓದಿ IPL 2025: ಪಾಂಡ್ಯಗೆ ನಿಷೇಧ ಶಿಕ್ಷೆ; ಮೊದಲ ಪಂದ್ಯದಲ್ಲಿ ಮುಂಬೈಗೆ ನಾಯಕ ಯಾರು?
ಐಪಿಎಲ್ ತಂಡಗಳ ಪ್ರಯಾಣ ಪಟ್ಟಿ
ಆರ್‌ಸಿಬಿ-17084 km
ಚೆನ್ನೈ- 16,184 km
ಪಂಜಾಬ್- 14,341 km
ಕೊಲ್ಕತ್ತಾ- 13,537 km
ರಾಜಸ್ಥಾನ- 12,730 km
ಮುಂಬೈ- 12,702 km
ಗುಜರಾತ್- 10,405 km
ಲಕ್ನೋ- 9747 km
ಡೆಲ್ಲಿ- 9270 km