IPL 2025: ಮ್ಯಾಕ್ಸ್‌ವೆಲ್ ಬದಲಿಗೆ ಪಂಜಾಬ್ ಕಿಂಗ್ಸ್ ಸೇರಿದ ಮಿಚೆಲ್ ಓವನ್
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಪಂದ್ಯಕ್ಕೂ ಮುನ್ನ ತರಬೇತಿ ಅವಧಿಯಲ್ಲಿ ಮ್ಯಾಕ್ಸ್‌ವೆಲ್ ಅವರ ಬೆರಳು ಮುರಿತವಾಗಿತ್ತು. ಹಾಲಿ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಆಡಿದ ಏಳು ಪಂದ್ಯಗಳಲ್ಲಿ ಕೇವಲ 48 ರನ್‌ಗಳನ್ನು ಗಳಿಸಿದ್ದರು.


ಮೊಹಾಲಿ: ಅಭ್ಯಾಸದ ವೇಳೆ ಬೆರಳಿಗೆ ಮೂಳೆ ಮುರಿತಕ್ಕೊಳಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್(IPL 2025)ನಿಂದ ಹೊರಬಿದ್ದ ಪಂಜಾಬ್ ಕಿಂಗ್ಸ್(Punjab Kings) ತಂಡದ ಆಸ್ಟ್ರೇಲಿಯನ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಆಸ್ಟ್ರೇಲಿಯಾದವರೇ ಆದ ಮಿಚೆಲ್ ಓವನ್(Mitchell Owen) ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಮಿಚೆಲ್ ಓವನ್ ಪಂಜಾಬ್ ತಂಡ ಸೇರಿದ ವಿಚಾರವನ್ನು ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್ ಎಕ್ಸ್‌ನಲ್ಲಿ ಪ್ರಕಟಿಸಿದೆ. 3 ಕೋಟಿ ರೂ.ಗೆ ಓವನ್ ಪಂಜಾಬ್ ಫ್ರಾಂಚೈಸಿಯನ್ನು ಸೇರಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಆಗಿರುವ ಮಿಚೆಲ್ ಓವನ್, ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) 2025 ರಲ್ಲಿ ಬಾಬರ್ ಅಜಂ ನೇತೃತ್ವದ ಪೇಶಾವರ್ ಝಲ್ಮಿ ಪರ ಆಡುತ್ತಿದ್ದಾರೆ. ಪಿಎಸ್‌ಎಲ್‌ನಲ್ಲಿ ತಮ್ಮ ಬದ್ಧತೆಯನ್ನು ಪೂರೈಸಿದ ನಂತರ ಅವರು ಪಂಜಾಬ್ ತಂಡ ಸೇರುವ ನಿರೀಕ್ಷೆಯಿದೆ.
ಝಲ್ಮಿ ತಂಡವು ಮೇ 9, ಶುಕ್ರವಾರ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಾಹೋರ್ ಖಲಂದರ್ಸ್ ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಸದ್ಯ ತಂಡ 5ನೇ ಸ್ಥಾನದಲ್ಲಿದ್ದು ಪ್ಲೇಆಫ್‌ಗೆ ಅರ್ಹತೆ ಪಡೆುವಲ್ಲಿ ವಿಫಲವಾಗಿದೆ. ಹೀಗಾಗಿ ಮಿಚೆಲ್ ಓವನ್ ಮೇ 9 ರ ಪಂದ್ಯವನ್ನಾಡಿ ಆ ಬಳಿಕ ಐಪಿಎಲ್‌ಗೆ ಮರಳಲಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪಂಜಾಬ್ ಪಂದ್ಯಕ್ಕೂ ಮುನ್ನ ತರಬೇತಿ ಅವಧಿಯಲ್ಲಿ ಮ್ಯಾಕ್ಸ್‌ವೆಲ್ ಅವರ ಬೆರಳು ಮುರಿತವಾಗಿತ್ತು. ಹಾಲಿ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ ಆಡಿದ ಏಳು ಪಂದ್ಯಗಳಲ್ಲಿ ಕೇವಲ 48 ರನ್‌ಗಳನ್ನು ಗಳಿಸಿದ್ದರು.
UPDATE: Mitchell Owen replaces Glenn Maxwell for the rest of #TATAIPL 2025 season. pic.twitter.com/yX7Z8uamMt
— Punjab Kings (@PunjabKingsIPL) May 4, 2025
ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಇತಿಹಾಸದಲ್ಲಿ 39 ಎಸೆತಗಳಲ್ಲಿ ಅತ್ಯಂತ ವೇಗದ ಶತಕ ಬಾರಿಸುವ ಮೂಲಕ ಓವನ್ ಬೆಳಕಿಗೆ ಬಂದರು. ಬೆಲ್ಲೆರಿವ್ ಓವಲ್‌ನಲ್ಲಿ ಡೇವಿಡ್ ವಾರ್ನರ್ ಅವರ ಸಿಡ್ನಿ ಥಂಡರ್ ವಿರುದ್ಧದ ಫೈನಲ್‌ನಲ್ಲಿ ಹೋಬಾರ್ಟ್ ಹರಿಕೇನ್ಸ್ ಪರ ಆಡುತ್ತಿದ್ದ ಓವನ್ 42 ಎಸೆತಗಳಲ್ಲಿ ಆರು ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ 108 ರನ್ ಗಳಿಸಿದ್ದರು.
ಇದನ್ನೂ ಓದಿ IPL 2025 Points Table: ಮುಂಬೈ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ
ಅವರ ಅದ್ಭುತ ಪ್ರದರ್ಶನದ ನೆರವಿನಿಂದ, ಹರಿಕೇನ್ಸ್ ತಂಡವು 35 ಎಸೆತಗಳು ಬಾಕಿ ಇರುವಾಗಲೇ 183 ರನ್‌ಗಳನ್ನು ಬೆನ್ನಟ್ಟಿ ಮೊದಲ ಬಾರಿಗೆ ಬಿಬಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.