IPL 2025: 14ರ ಪೋರ ವೈಭವ್ ಸೂರ್ಯವಂಶಿ ಭಯಮುಕ್ತ ಬ್ಯಾಟಿಂಗ್‌ಗೆ ಸುರೇಶ್ ರೈನಾ ಫಿದಾ!
ಸಂಜು ಸ್ಯಾಮ್ಸನ್ ಗಾಯಗೊಂಡು ಹೊರಗುಳಿದ ನಂತರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು. ಆರ್‌ಸಿಬಿ ಎದುರು ಯಶಸ್ವಿ ಜೈಸ್ವಾಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ 14 ವರ್ಷದ ಬಾಲಕ ತನ್ನ ಭಯಮುಕ್ತ ಬ್ಯಾಟಿಂಗ್‌ನಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಅದರಂತೆ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಮನೋಭಾವವನ್ನು ಸುರೇಶ್ ರೈನಾ ಶ್ಲಾಘಿಸಿದ್ದಾರೆ.

ವೈಭವ್ ಸೂರ್ಯವಂಶಿಗೆ ಸುರೇಶ್ ರೈನಾ ಶ್ಲಾಘನೆ.

ನವದೆಹಲಿ: ನಾಯಕ ಸಂಜು ಸ್ಯಾಮ್ಸನ್ (Sanju Samson) ಗಾಯದ ನಂತರ ರಾಜಸ್ಥಾನ್ ರಾಯಲ್ಸ್ (Rajasthan Royals) ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ (Vaibhav Suryavanshi), ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೇ ಸಿಕ್ಸರ್ ಸಿಡಿಸುವ ಮೂಲಕ ಐಪಿಎಲ್ ವೃತ್ತಿ ಜೀವನವನ್ನು ಭರ್ಜರಿಯಾಗಿ ಆರಿಸಿದ್ದರು. ಇದಾದ ನಂತರ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ತಮ್ಮ ಸಣ್ಣ ಇನಿಂಗ್ಸ್‌ನಲ್ಲಿಯೂ ಎಲ್ಲರನ್ನೂ ಅಚ್ಚರಿಗೊಳಿಸಿದರು. ಹಿರಿಯ ವೇಗಿ ಭುವನೇಶ್ವರ್ ಕುಮಾರ್‌ಗೆ ವೈಭವ್ ಭರ್ಜರಿ ಸಿಕ್ಸರ್ ಬಾರಿಸಿದ್ದರು. ಆ ಮೂಲಕ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಅವರ ಗಮನವನ್ನು ಸೆಳೆದಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೈಭವ್ ಸೂರ್ಯವಂಶಿ ಅವರ ಆಟವನ್ನು ನೀಡಿದ ಸುರೇಶ್ ರೈನಾ, ಕಾಮೆಂಟರಿ ವೇಳೆ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಅವರಿಗೂ ಇನ್ನು 14 ವರ್ಷ ವಯಸ್ಸು. ಅವರ ಮನೋಧರ್ಮ, ನಿರ್ಭೀತ ವಿಧಾನ, ಆಟದ ಅರಿವು ಮತ್ತು ಅವರ ಬಾಡಿ ಲಾಂಗ್ವೇಜ್‌ನಲ್ಲಿರುವ ಶಾಂತತೆಯು ಅವರು ಒಬ್ಬ ಪ್ರಬುದ್ಧ ಆಟಗಾರ ಎಂದು ತೋರಿಸುತ್ತದೆ. ಅವರು ಸಿದ್ದರಾಗಿದ್ದಾರೆ. ಅವರು ಎಂದಿಗೂ ಹೆದುರುವುದಿಲ್ಲ," ಎಂದು ರೈನಾ ಗುಣಗಾನ ಮಾಡಿದ್ದಾರೆ.
Vaibhav Suryavanshi: ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ದಾಖಲೆ ಬರೆದ ಸೂರ್ಯವಂಶಿ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ 12 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಈ ಇನಿಂಗ್ಸ್‌ನಲ್ಲಿ ಅವರು 2 ಸಿಕ್ಸರ್‌ಗಳನ್ನು ಸಹ ಹೊಡೆದರು. ರಾಜಸ್ಥಾನ್ ರಾಯಲ್ಸ್ ತಂಡವು ವೈಭವ್ ಸೂರ್ಯವಂಶಿ ಅವರನ್ನು 1.1 ಕೋಟಿ ರೂ. ಗಳ ದೊಡ್ಡ ಬೆಲೆಗೆ ಖರೀದಿಸಿತ್ತು. ಆ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
IPL 2025: ರಾಜಸ್ಥಾನ್ ಎದುರು ರೂಪಿಸಿದ್ದ ಬ್ಯಾಟಿಂಗ್ ರಣತಂತ್ರ ರಿವೀಲ್ ಮಾಡಿದ ವಿರಾಟ್ ಕೊಹ್ಲಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 11 ರನ್ ಜಯ
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭವನ್ನು ಪಡೆದಿತ್ತು. ಆದರೆ ಡೆತ್ ಓವರ್‌ಗಳಲ್ಲಿ ವಿಫಲವಾಯಿತು. ಕೊನೆಯ ಮೂರು ಓವರ್‌ಗಳಲ್ಲಿ ರಾಜಸ್ಥಾನ್‌ಗೆ 40 ರನ್ ಬೇಕಿತ್ತು. 18ನೇ ಓವರ್‌ನಲ್ಲಿ ಭುವನೇಶ್ವರ್ ಕುಮಾರ್ 22 ರನ್ ಕೊಟ್ಟು ಅತ್ಯಂತ ದುಬಾರಿಯಾಗಿದ್ದರು. ಆದರೆ, ಕೊನೆಯ ಎರಡು ಓವರ್‌ಗಳಲ್ಲಿ 18 ರನ್ ಅಗತ್ಯವಿದ್ದಾಗ, 19ನೇ ಓವರ್‌ನಲ್ಲಿ ಜಾಶ್ ಹೇಝಲ್‌ವುಡ್ ಕೇವಲ ಒಂದು ರನ್ ಕೊಟ್ಟು ಎರಡು ವಿಕೆಟ್ ಪಂದ್ಯವನ್ನು ತಿರುಗಿಸಿದರು. ಕೊನೆಯ ಓವರ್‌ನಲ್ಲಿ 17 ರನ್ ಅಗತ್ಯವಿದ್ದಾಗ 20ನೇ ಓವರ್‌ನಲ್ಲಿ ಯಶ್ ದಯಾಳ್ ಕೇವಲ 5 ರನ್ ನೀಡಿ ಆರ್‌ಸಿಬಿಗೆ ಗೆಲುವನ್ನು ಖಾತ್ರಿ ಗೊಳಿಸಿದ್ದರು.