ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಕೆಕೆಆರ್‌ ವಿರುದ್ಧ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ

Virat Kohli: ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಎರಡು ಅಥವಾ ಅದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ಈಗ ನಾಲ್ಕನೇ ತಂಡದ ವಿರುದ್ಧ ಈ ಸಾಧನೆ ಮಾಡುವ ಸನಿಹದಲ್ಲಿದ್ದಾರೆ.

ಕೆಕೆಆರ್‌ ವಿರುದ್ಧ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ

Profile Abhilash BC Mar 21, 2025 4:22 PM

ಕೋಲ್ಕತಾ: ವಿಶ್ವದ ಶ್ರೀಮಂತ ಕ್ರಿಕೆಟ್‌ ಟೂರ್ನಿ ಐಪಿಎಲ್‌ನ 18ನೇ(IPL 2025) ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ(ಶನಿವಾರ) ನಡೆಯುವ ಉದ್ಘಾಟನ ಪಂದ್ಯದಲ್ಲಿ ಆರ್‌ಸಿಬಿ(KKR vs RCB) ತಂಡ ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ(RCB)ಯ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(Virat Kohli) ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಇದುವರೆಗೂ ಕಪ್‌ ಗೆಲ್ಲದ ಆರ್‌ಸಿಬಿ ಈ ಬಾರಿ ಕಪ್‌ ಗೆಲ್ಲುವುದು ನಿಶ್ಚಿತ ಎನ್ನಲಾರಂಭಿಸಿದ್ದಾರೆ. ಇದಕ್ಕೆ ಕಾರಣ ಕೂಡ ಇದೆ. ಹೌದು, ವಿರಾಟ್‌ ಕೊಹ್ಲಿಯ ಜೆರ್ಸಿ ನಂ.18. ಈ ಬಾರಿ ನಡೆಯುತ್ತಿರುವ ಐಪಿಎಲ್‌ ಆವೃತ್ತಿಯೂ 18. ಹೀಗಾಗಿ ಆರ್‌ಸಿಬಿಗೆ ಈ ಬಾರಿ ಕಪ್‌ ಗೆಲ್ಲುವ ಲಕ್‌ ಇದೆ ಎನ್ನುವ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿದೆ.

ಕೊಹ್ಲಿ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ 38 ರನ್‌ ಬಾರಿಸಿದರೆ ಕೆಕೆಆರ್‌ ವಿರುದ್ಧ ಒಂದು ಸಾವಿರ ರನ್‌ ಪೂರೈಸಿದ ಮೂರನೇ ಹಾಗೂ ಎರಡನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅತ್ಯಧಿಕ ರನ್‌ ದಾಖಲೆ ಆಸ್ಟ್ರೇಲಿಯಾದ ಮಾಜಿ ಎಡಗೈ ಬ್ಯಾಟರ್‌ ಡೇವಿಡ್‌ ವಾರ್ನರ್‌ ಹೆಸರಿನಲ್ಲಿದೆ. ವಾರ್ನ್‌ 28 ಪಂದ್ಯಗಳಿಂದ 1093 ರನ್‌ ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಸದ್ಯ 35 ಪಂದ್ಯಗಳಿಂದ 962* ರನ್‌ ಗಳಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ ಹೊರತುಪಡಿಸಿ ಬೇರೆ ಯಾವ ಆಟಗಾರನೂ ಎರಡು ಅಥವಾ ಅದಕ್ಕಿಂತ ಹೆಚ್ಚು ಎದುರಾಳಿಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿಲ್ಲ. ಕೊಹ್ಲಿ ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ 1000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ಈಗ ನಾಲ್ಕನೇ ತಂಡದ ವಿರುದ್ಧ ಈ ಸಾಧನೆ ಮಾಡುವ ಸನಿಹದಲ್ಲಿದ್ದಾರೆ.



ಇದನ್ನೂ ಓದಿ IPL 2025: ನಾಳೆಯಿಂದ ಐಪಿಎಲ್‌ ಸಮರ ಆರಂಭ; ಈ ಸಲವಾದರೂ ಕಪ್ ನಮ್ಮದಾಗುತ್ತಾ?

ಕೊಹ್ಲಿ ಹೊರತುಪಡಿಸಿದರೆ, ಡೇವಿಡ್ ವಾರ್ನರ್ ಮತ್ತು ರೋಹಿತ್‌ ಶರ್ಮ ಪಂಜಾಬ್‌ ಕಿಂಗ್ಸ್‌ ಮತ್ತು ಕೆಕೆಆರ್‌ ವಿರುದ್ಧ 1000 ಕ್ಕೂ ಹೆಚ್ಚು ಐಪಿಎಲ್ ರನ್ ಗಳಿಸಿದ್ದಾರೆ. ಕೊಹ್ಲಿ ಪ್ರಸ್ತುತ ಐಪಿಎಲ್ ಇತಿಹಾಸದಲ್ಲಿ 252 ಪಂದ್ಯಗಳಿಂದ 8004 ರನ್ ಗಳಿಸುವ ಮೂಲಕ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.