IPL 2025: ಶತಕದ ಬಳಿಕ ಅಭಿಷೇಕ್ ಶರ್ಮಾ ಪ್ರದರ್ಶಿಸಿದ ಚೀಟಿಯಲ್ಲಿ ಬರೆದಿದ್ದೇನು?
Abhishek Sharma: ಈ ಋತುವಿನಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ ಪಂಜಾಬ್ ವಿರುದ್ಧ ಸಿಕ್ಸರ್, ಬೌಂಡರಿಗಳ ಮಳೆಗರೆದು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 40 ಎಸೆತಗಳಿಂದ ಶತಕ ಪೂರೈಸಿದರು. ಓಟ್ಟು 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್ ಬಾರಿಸಿದರು.


ಹೈದರಾಬಾದ್: ಪಂಜಾಬ್ ಕಿಂಗ್ಸ್ ವಿರುದ್ಧದ ಶನಿವಾರದ ಐಪಿಎಲ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದ ಅಭಿಷೇಕ್ ಶರ್ಮಾ ಈ ಶತಕವನ್ನು ವಿಶೇಷವಾಗಿ ಸಂಭ್ರಮಿಸಿದ್ದರು. ತಮ್ಮ ಜೇಬಿನಿಂದ ಚೀಟಿಯೊಂದನ್ನು ತೆಗೆದು ಪ್ರದರ್ಶಿಸಿದ್ದರು. ಈ ಚೀಟಿಯಲ್ಲಿ ಏನು ಬರೆದಿರಬಹುದೆಂದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅಭಿಷೇಕ್ ಶರ್ಮಾ ಪ್ರದರ್ಶಿಸಿದ ಈ ಚೀಟಿಯಲ್ಲಿ 'ದಿಸ್ ಒನ್ ಇಸ್ ಫಾರ್ ಆರೆಂಜ್ ಆರ್ಮಿ' (ಇದು ಸನ್‌ರೈಸರ್ಸ್ ಹೈದರಾಬಾದ್ ಅಭಿಮಾನಿಗಳಿಗಾಗಿ ) ಎಂದು ಬರೆದಿದ್ದರು. ಈ ಮೂಲಕ ತಮ್ಮ ಶತಕವನ್ನು ತಂಡದ ಅಭಿಮಾನಿಗಳಿಗೆ ಅರ್ಪಿಸಿದರು.
ಈ ಋತುವಿನಲ್ಲಿ ಮಂಕಾಗಿದ್ದ ಅಭಿಷೇಕ್ ಶರ್ಮಾ ಪಂಜಾಬ್ ವಿರುದ್ಧ ಸಿಕ್ಸರ್, ಬೌಂಡರಿಗಳ ಮಳೆಗರೆದು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. 40 ಎಸೆತಗಳಿಂದ ಶತಕ ಪೂರೈಸಿದರು. ಓಟ್ಟು 55 ಎಸೆತಗಳಲ್ಲಿ 14 ಬೌಂಡರಿ ಹಾಗೂ 10 ಸಿಕ್ಸರ್ ಸಹಿತ 141 ರನ್ ಬಾರಿಸಿದರು.
ಶತಕ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮೂರನೇ ಹಾಗೂ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಗೆ ಅಭಿಷೇಕ್ ಪಾತ್ರರಾದರು. ಈ ವೇಳೆ ಅವರು ಕ್ವಿಂಡನ್ ಡಿ ಕಾಕ್(140*) ಮತ್ತು ಎಬಿಡಿ ವಿಲಿಯರ್ಸ್(133*) ಅವರನ್ನು ಹಿಂದಿಕ್ಕಿದರು. ದಾಖಲೆ ಕ್ರಿಸ್ ಗೇಲ್(175*) ಹೆಸರಿನಲ್ಲಿದೆ. ಬ್ರೆಂಡನ್ ಮೆಕಲಮ್ (158*) ದ್ವಿತೀಯ ಸ್ಥಾನದಲ್ಲಿದ್ದಾರೆ.
🧡
— SunRisers Hyderabad (@SunRisers) April 12, 2025
Abhishek Sharma | #PlayWithFire | #SRHvPBKS | #TATAIPL2025 pic.twitter.com/OaD4YQEmTT
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ದೊಡ್ಡ ಮೊತ್ತದ ಮೇಲಾಟದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಹೈದರಾಬಾದ್ ತಂಡ 8 ವಿಕೆಟ್ ಅಂತರದ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಬ್ಯಾಟಿಂಗ್ ಪ್ರದರ್ಶಿಸಿ 6 ವಿಕೆಟಿಗೆ 245 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಹೈದರಾಬಾದ್ ಸುಂಟರಗಾಳಿಯಂಥ ಬ್ಯಾಟಿಂಗ್ ನಡೆಸಿ 18.3 ಒವರ್ ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ IPL 2025 Points Table: ಅಗ್ರಸ್ಥಾನ ಕಳೆದುಕೊಂಡ ಗುಜರಾತ್