ದುಬೈ, ಡಿ.15: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮಿನಿ ಹರಾಜು(IPL Auction 2026) ಮಂಗಳವಾರ(ಡಿ.16) ರಂದು(IPL Auction 2026 Date) ಅಬುಧಾಬಿಯ ಎತಿಹಾದ್ ಅರೆನಾದಲ್ಲಿ ನಡೆಯಲಿಯಲಿದೆ. ಈಗಾಗಲೇ ಬಿಸಿಸಿಐ 350 ಜನ ಆಟಗಾರರ ಪಟ್ಟಿಯನ್ನು ಫೈನಲ್ ಮಾಡಿದೆ. ಎಲ್ಲಾ ಫ್ರಾಂಚೈಸಿಗಳು ಉತ್ತಮ ಆಟಗಾರರನ್ನು ಆಯ್ಕೆ ಮಾಡುವ ಮೂಲಕ ಬಲಿಷ್ಠ ತಂಡವನ್ನು ಕಟ್ಟಲು ಎದುರು ನೋಡುತ್ತಿವೆ. 77 ಆಟಗಾರರು ಮಾತ್ರ ಖರೀದಿಗೆ ಅರ್ಹರಾಗಿರುತ್ತಾರೆ.
ಟಾಪ್-5 ಸೆಟ್‌ನಲ್ಲಿ ಕಾಣಿಸಿಕೊಳ್ಳಲಿರುವ ಆಟಗಾರರು
ಸೆಟ್ ಬಿ1: ಡೆವೊನ್ ಕಾನ್ವೆ, ಜೇಕ್ ಫ್ರೆಸರ್ ಮೆಕ್‌ಗುರ್ಕ್, ಕ್ಯಾಮರೋನ್ ಗ್ರೀನ್, ಸರ್ಫರಾಜ್‌ಖಾನ್, ಡೇವಿಡ್ ಮಿಲ್ಲರ್, ಪೃಥ್ವಿ ಶಾ.
ಸೆಟ್ ಎ1: ಗಸ್ ಅಟ್ಕಿನ್ಸನ್, ವನಿಂದು ಹಸರಂಗ, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಲಿಯಾಮ್ ಲಿವಿಂಗ್‌ಸ್ಟೋನ್, ವಿಯಾನ್ ಮುಲ್ಡರ್, ರಚಿನ್ ರವೀಂದ್ರ.
ವಿಕೆಟ್ ಕೀಪರ್ಸ್ ಸೆಟ್1: ಫಿನ್ ಅಲೆನ್, ಜಾನಿ ಬೈರ್‌ಸ್ಟೋವ್, ಕೆಎಸ್ ಭರತ್, ಕ್ವಿಂಟನ್ ಡಿ ಕಾಕ್, ಬೆನ್ ಡಕೆಟ್, ರಾಮಾನುಲ್ಲಾ ಗುರ್ಬಾಝ್, ಜೇಮಿ ಸ್ಮಿತ್.
ಫಾಸ್ಟ್ ಬೌಲರ್ ಸೆಟ್1: ಜೆರಾಲ್ಡ್ ಕೋಟ್ಝಿ , ಆಕಾಶ್ ದೀಪ್, ಜೇಕಬ್ ಡಫಿ, ಫಝಲ್ಹಕ್ ಫಾರೂಕಿ, ಮ್ಯಾಟ್ ಹೆನ್ರಿ, ಸ್ಪೆನ್ಸರ್ ಜಾನ್ಸನ್, ಶಿವಂ ಮಾವಿ, ಅನ್ರಿಕ್ ನೋಕಿಯಾ, ಮಹೀಶ್ ಪತಿರಾಣ.
ಇದನ್ನೂ ಓದಿ IPL 2026 Mini Auction: ಪಂಜಾಬ್ ಕಿಂಗ್ಸ್ ಟಾರ್ಗೆಟ್ ಮಾಡಬಲ್ಲ ಐವರು ಆಟಗಾರರು!
ಸ್ಪಿನ್ ಬೌಲರ್ಗಳ ಸೆಟ್1: ರವಿ ಬಿಷ್ಣೋಯ್, ರಾಹುಲ್ ಚಹರ್, ಅಕೀಲ್ ಹೊಸೈನ್, ಮುಜೀಬ್ ಉರ್ ರೆಹಮಾನ್, ಮಹೀಶ್ ತೀಕ್ಷಣ.
ಹರಾಜು ಎಷ್ಟು ಗಂಟೆಗೆ ಆರಂಭ?
ಮಂಗಳವಾರ ನಡೆಯಲಿರುವ ಮಿನಿ ಹರಾಜು ಮಧ್ಯಾಹ್ನ 2:30ಕ್ಕೆ ಸರಿಯಾಗಿ ಆರಂಭವಾಗಲಿದೆ.
ನೇರ ಪ್ರಸಾರ
ಐಪಿಎಲ್ 2026 ರ ಮಿನಿ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿಯೂ ಸಹ ಇದನ್ನು ವೀಕ್ಷಿಸಬಹುದು.
ಕೆಕೆಆರ್ ಬಳಿ ಅತಿ ಹೆಚ್ಚು ಹಣ
ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈಗ 20 ಆಟಗಾರರನ್ನು ಹೊಂದಿದ್ದು, ಕಡಿಮೆ ಹಣದೊಂದಿಗೆ (INR 2.75 ಕೋಟಿ) ಹರಾಜಿಗೆ ಪ್ರವೇಶಿಸಲಿದೆ.
ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ
ಕೋಲ್ಕತ್ತಾ ನೈಟ್ ರೈಡರ್ಸ್: 64.3 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್: 43.4 ಕೋಟಿ
ಸನ್‌ರೈಸರ್ಸ್ ಹೈದರಾಬಾದ್: 25.5 ಕೋಟಿ
ಲಖನೌ ಸೂಪರ್ ಜಯಂಟ್ಸ್: 22.95 ಕೋಟಿ
ಡಲ್ಲಿ ಕ್ಯಾಪಿಟಲ್ಸ್: 21.8 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.4 ಕೋಟಿ
ರಾಜಸ್ಥಾನ್ ರಾಯಲ್ಸ್: 16.05 ಕೋಟಿ
ಗುಜರಾತ್ ಟೈಟನ್ಸ್: 12.9 ಕೋಟಿ
ಪಂಜಾಬ್ ಕಿಂಗ್ಸ್: 11.5 ಕೋಟಿ
ಮುಂಬೈ ಇಂಡಿಯನ್ಸ್: 2.75 ಕೋಟಿ