ಐತಿಹಾಸಿಕ ರಣಜಿ ಟ್ರೋಫಿ ಗೆದ್ದ ಜಮ್ಮು-ಕಾಶ್ಮೀರ; ತವರಿನಲ್ಲೇ ಕರ್ನಾಟಕಕ್ಕೆ ಸೋಲು
Ranji Trophy final: ಚೊಚ್ಚಲ ಟ್ರೋಫಿ ಗೆದ್ದ ಜಮ್ಮು–ಕಾಶ್ಮೀರ ತಂಡ 67 ವರ್ಷಗಳ ಬಳಿಕ ರಣಜಿ ಟ್ರೋಫಿ ಬರ ನೀಗಿಸಿಕೊಂಡಿತು. ಇದರೊಂದಿಗೆ ಕರ್ನಾಟಕದ 11 ವರ್ಷಗಳ ಬಳಿಕ ರಣಜಿ ಗೆಲ್ಲುವ ಕನಸು ಬಹುತೇಕ ಭಗ್ನಗೊಂಡಿತು.
ಜಮ್ಮು ಕಾಶ್ಮೀರ ತಂಡ -
ಹುಬ್ಬಳ್ಳಿ, ಫೆ.28: ಇಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದ ಐದನೇ ದಿನವೂ ಉತ್ತಮ ಬ್ಯಾಟಿಂಗ್ ನಡೆಸಿದ ಜಮ್ಮು–ಕಾಶ್ಮೀರ ತಂಡವು ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಐದನೇ ದಿನ ಉಭಯ ತಂಡಗಳು ಪಂದ್ಯ ಡ್ರಾ ಮಾಡಿಕೊಂಡಿತು. ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ಲೀಡ್ ಆಧಾರದಲ್ಲಿ ಜಮ್ಮು–ಕಾಶ್ಮೀರ ಜಯ ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ 302 ರನ್ ಮುನ್ನಡೆ ಪಡೆದುಕೊಂಡಿತು.
ನಾಲ್ಕನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ, 477 ರನ್‌ಗಳ ಬೃಹತ್ ಮುನ್ನಡೆ ಕಾಯ್ದುಕೊಂಡಿದ್ದ ಜಮ್ಮು–ಕಾಶ್ಮೀರ ತಂಡವು, ಪಂದ್ಯದ ಕೊನೆಯ ದಿನವೂ ಕರ್ನಾಟಕದ ಬೌಲರ್‌ಗಳ ಮೇಲೆ ಸವಾರಿ ಮಾಡಿತು. ಖಮ್ರಾನ್ ಮತ್ತು ಸಾಹಿಲ್ ಲೋತ್ರಾ ಸೇರಿಕೊಂಡು ಶತಕ ಬಾರಿಸಿ ಮಿಂಚಿದರು. ಇವರಿಬ್ಬರ ಬ್ಯಾಟಿಂಗ್ ನೆರವಿನಿಂದ ಜಮ್ಮು–ಕಾಶ್ಮೀರ ತಂಡವು 113 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 342 ರನ್ ಗಳಿಸಿತು.
94 ರನ್ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಆರಂಭಿಕ ಆಟಗಾರ ಖಮ್ರಾನ್ ಇಕ್ಬಾಲ್, ಕೊನೆಯ ದಿನ ಶತಕವನ್ನು ಪೂರೈಸಿದರು. ಅವರು ಅಜೇಯ 160 ರನ್ ಗಳಿಸಿದರು. 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಸಾಹಿಲ್ ಲೋತ್ರಾ, ಅಜೇಯ 101 ರನ್ ಗಳಿಸಿದರು.
ಚೊಚ್ಚಲ ಟ್ರೋಫಿ ಗೆದ್ದ ಜಮ್ಮು–ಕಾಶ್ಮೀರ ತಂಡ 67 ವರ್ಷಗಳ ಬಳಿಕ ರಣಜಿ ಟ್ರೋಫಿ ಬರ ನೀಗಿಸಿಕೊಂಡಿತು. ಇದರೊಂದಿಗೆ ಕರ್ನಾಟಕದ 11 ವರ್ಷಗಳ ಬಳಿಕ ರಣಜಿ ಗೆಲ್ಲುವ ಕನಸು ಬಹುತೇಕ ಭಗ್ನಗೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್ ಕಲೆಹಾಕಿದ್ದ ಜಮ್ಮು-ಕಾಶ್ಮೀರ ತಂಡ ಕರ್ನಾಟಕವನ್ನು 293 ರನ್‌ಗೆ ಆಲೌಟ್ ಮಾಡಿ, 291 ರನ್‌ಗಳ ದೊಡ್ಡ ಲೀಡ್ ಪಡೆದರೂ ಆತಿಥೇಯರ ಮೇಲೆ ಫಾಲೋಆನ್ ಹೇರಲಿಲ್ಲ. ಕರ್ನಾಟಕ ಪರ ಏಕಾಂಗಿ ಹೋರಾಟ ನಡೆಸಿದ ಮಯಾಂಕ್ ಅಗರ್ವಾಲ್ ಅಜೇಯ 130 ರನ್ ಬಾರಿಸಿ ಮಿಂಚಿದರು. ಅವರು160 ರನ್ ಬಾರಿಸಿದರು.