ಭುಜದ ಗಾಯ; ಕೊನೆ ಕ್ಷಣದಲ್ಲಿ ಡಬ್ಲ್ಯುಪಿಎಲ್ ಹರಾಜಿನಿಂದ ಹಿಂದೆ ಸರಿದ ಜೆಸ್ ಜೊನಾಸ್ಸೆನ್
WPL 2026 auction: ಹರಾಜಿನ ಪೂಲ್‌ನಲ್ಲಿರುವ 194 ಭಾರತೀಯ ಆಟಗಾರ್ತಿಯರಲ್ಲಿ, 10 ಮಂದಿ 2025 ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಐದು ತಂಡಗಳ ಪೈಕಿ ಗುಜರಾತ್ ಮತ್ತು ಯುಪಿ ವಾರಿಯರ್ಸ್ ತಂಡಕ್ಕೆ ಮಾತ್ರ ಆರ್‌ಟಿಎಂ ಬಳಕೆಗೆ ಅವಕಾಶವಿದೆ.
ಜೆಸ್ ಜೊನಾಸ್ಸೆನ್ -
ಮುಂಬಯಿ. ನ.27: ಮಹಿಳಾ ಪ್ರೀಮಿಯರ್ ಲೀಗ್ 2026 ರ ಹರಾಜಿಗೆ(WPL 2026 auction) ಕಲವೇ ಗಂಟೆಗಳು ಬಾಕಿ ಇರುವಾಗಲೇ ಆಸ್ಟ್ರೇಲಿಯಾದ ಖ್ಯಾತ ಆಲ್‌ರೌಂಡರ್ ಜೆಸ್ ಜೊನಾಸ್ಸೆನ್(Jess Jonassen) ಗಾಯದ ಕಾರಣದಿಂದಾಗಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಇದರಿಂದಾಗಿ ಆಯೋಜಕರು ಅಂತಿಮ ಹರಾಜು ಪಟ್ಟಿಯನ್ನು 276 ಆಟಗಾರರಿಗೆ ಸೀಮಿತಗೊಳಿಸಿದರು. ಅವರು ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು.
ದೆಹಲಿ ಕ್ಯಾಪಿಟಲ್ಸ್‌ಗಾಗಿ ಮೂರು ಋತುಗಳಲ್ಲಿ ಕಾಣಿಸಿಕೊಂಡಿದ್ದ ಜೊನಾಸ್ಸೆನ್, ಲೀಗ್‌ನ ಅತ್ಯಂತ ಸ್ಥಿರವಾದ ವಿದೇಶಿ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದರು. 24 ಪಂದ್ಯಗಳಲ್ಲಿ, ಅವರು 138.50 ಸ್ಟ್ರೈಕ್ ರೇಟ್‌ನಲ್ಲಿ 295 ರನ್ ಗಳಿಸಿದ್ದಾರೆ ಮತ್ತು 7.74 ರ ಎಕಾನಮಿಯಲ್ಲಿ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಐದು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಭುಜದ ಗಾಯದಿಂದಾಗಿ ಅವರು ಸ್ಪರ್ಧೆಯ ನಾಲ್ಕನೇ ಆವೃತ್ತಿಯ ಹರಾಜಿನಿಂದ ಹೊರಗುಳಿಯಬೇಕಾಯಿತು.
ಪ್ರತೀಕಾ ರಾವಲ್, ಯಸ್ತಿಕಾ ಭಾಟಿಯಾ ಮತ್ತು ಸೀಮರ್ ವಿಜೆ ಜೋಶಿತಾ ಅವರಂತಹ ಆಟಗಾರರು ಪ್ರಸ್ತುತ ಗಾಯಗೊಂಡಿದ್ದಾರೆ, ಆದರೆ ಅವರ ಹೆಸರುಗಳು ಇನ್ನೂ ಹರಾಜಿನ ಪಟ್ಟಿಯಲ್ಲಿವೆ ಎಂಬುದು ಕುತೂಹಲಕಾರಿಯಾಗಿದೆ. ಈ ಮೂವರು ಆಟಗಾರ್ತಿಯರು ಕಡ್ಡಾಯ 15 ಜನರ ತಂಡದ ಭಾಗವಾಗಲು ಸಾಧ್ಯವಿಲ್ಲ, ಮತ್ತು ಒಂದು ತಂಡವು ಅವರನ್ನು ಹರಾಜಿನಲ್ಲಿ ಆಯ್ಕೆ ಮಾಡಿದರೆ, ನಂತರ ಅವರಿಗೆ ಬದಲಿ ಆಟಗಾರ್ತಿಯರನ್ನು ಅನುಮತಿಸಲಾಗುವುದಿಲ್ಲ.
ಹರಾಜಿನ ಪೂಲ್‌ನಲ್ಲಿರುವ 194 ಭಾರತೀಯ ಆಟಗಾರ್ತಿಯರಲ್ಲಿ, 10 ಮಂದಿ 2025 ರ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಐದು ತಂಡಗಳ ಪೈಕಿ ಗುಜರಾತ್ ಮತ್ತು ಯುಪಿ ವಾರಿಯರ್ಸ್ ತಂಡಕ್ಕೆ ಮಾತ್ರ ಆರ್‌ಟಿಎಂ ಬಳಕೆಗೆ ಅವಕಾಶವಿದೆ.
ವಿಶ್ವಕಪ್ ಆಡಿದ ಭಾರತೀಯ ಆಟಗಾರ್ತಿಯರು
ದೀಪ್ತಿ ಶರ್ಮಾ - ರೂ. 50 ಲಕ್ಷ
ರೇಣುಕಾ ಸಿಂಗ್ ಠಾಕೂರ್ - ರೂ. 40 ಲಕ್ಷ
ಹರ್ಲೀನ್ ಡಿಯೋಲ್ - ರೂ. 50 ಲಕ್ಷ
ಸ್ನೇಹ ರಾಣಾ - ರೂ. 30 ಲಕ್ಷ
ಎನ್.ಶ್ರೀ ಚರಣಿ - ರೂ. 30 ಲಕ್ಷ
ರಾಧಾ ಯಾದವ್ - ರೂ. 30 ಲಕ್ಷ
ಉಮಾ ಚೆಟ್ರಿ - ರೂ. 50 ಲಕ್ಷ
ಕ್ರಾಂತಿ ಗೌಡ್ - ರೂ. 50 ಲಕ್ಷ
ಪ್ರತೀಕಾ ರಾವಲ್ - ರೂ. 50 ಲಕ್ಷ
ಅರುಂಧತಿ ರೆಡ್ಡಿ - ರೂ. 30 ಲಕ್ಷ
ಇದನ್ನೂ ಓದಿ WPL Retentions: ಲಾರಾ ವೊಲ್ವಾರ್ಡ್ಟ್, ದೀಪ್ತಿ ಶರ್ಮಾ ಬಿಡುಗಡೆ
ಹರಾಜಿನಲ್ಲಿರುವ ಪ್ರಮುಖ ಆಟಗಾರ್ತಿಯರು
ಸೋಫಿ ಡಿವೈನ್ (NZ) - ಮೂಲ ಬೆಲೆ: ರೂ. 50 ಲಕ್ಷ
ಸೋಫಿ ಎಕ್ಸೆಲ್‌ಸ್ಟೋನ್ (ENG) - ಮೂಲ ಬೆಲೆ: ರೂ. 50 ಲಕ್ಷ
ಅಲಿಸಾ ಹೀಲಿ (AUS) - ಮೂಲ ಬೆಲೆ: ರೂ. 50 ಲಕ್ಷ
ಅಮೆಲಿಯಾ ಕೆರ್ (AUS) - ಮೂಲ ಬೆಲೆ: ರೂ. 50 ಲಕ್ಷ
ಮೆಗ್ ಲ್ಯಾನಿಂಗ್ (AUS) - ಮೂಲ ಬೆಲೆ: ರೂ. 50 ಲಕ್ಷ
ದೀಪ್ತಿ ಶರ್ಮಾ (IND) - ಮೂಲ ಬೆಲೆ: ರೂ. 50 ಲಕ್ಷ
ರೇಣುಕಾ ಠಾಕೂರ್ (IND) - ಮೂಲ ಬೆಲೆ: ರೂ. 40 ಲಕ್ಷ
ಲಾರಾ ವೋಲ್ವಾರ್ಡ್ (RSA) - ಮೂಲ ಬೆಲೆ: ರೂ. 30 ಲಕ್ಷ