ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

Lionel Messi: ಪಂದ್ಯಾವಳಿಯಲ್ಲಿ ಎಂಟು ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಮೆಸ್ಸಿ ಫೈನಲ್‌ಗೆ ಪ್ರವೇಶಿಸಿದರು ಆದರೆ ಫೈನಲ್‌ನಲ್ಲಿ ಸ್ಪೇನ್ ತಂಡದ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅವರ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ. ಲೂಯಿಸ್ ಡೆ ಲಾ ಫ್ಯುಯೆಂಟೆ ತಂಡವು ಆರಂಭದಿಂದಲೂ ಪಂದ್ಯವನ್ನು ನಿಯಂತ್ರಿಸಿತು.

ಫೈನಲ್‌ ಸೋಲಿನ ಆಘಾತದಿಂದ ಮೈದಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಮೆಸ್ಸಿ

Lionel Messi -

Abhilash BC
Abhilash BC Jul 20, 2026 6:30 AM

ನ್ಯೂಜರ್ಸಿ, ಜು.20: ನ್ಯೂಜರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಅರ್ಜೆಂಟೀನಾ ತಂಡ ಹೆಚ್ಚುವರಿ ಸಮಯದಲ್ಲಿ 1-0 ಅಂತರದ ಸೋಲಿನೊಂದಿಗೆ ವಿಶ್ವಕಪ್ ಪ್ರಶಸ್ತಿ ರಕ್ಷಣೆ ಕೊನೆಗೊಂಡ ನಂತರ ಲಿಯೋನೆಲ್ ಮೆಸ್ಸಿ ಕಣ್ಣೀರು ಹಾಕಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಐತಿಹಾಸಿಕ ವಿಶ್ವಕಪ್ ಅಭಿಯಾನದ ನಂತರ ಅರ್ಜೆಂಟೀನಾದ ದಂತಕಥೆಗೆ ಗೌರವ ಸಲ್ಲಿಸಲು ಕ್ರೀಡಾಂಗಣದ ಸುತ್ತಲಿನ ಅಭಿಮಾನಿಗಳು ಅವರ ಹೆಸರನ್ನು ಜಪಿಸುತ್ತಿದ್ದಾಗ 39 ವರ್ಷದ ಮೆಸ್ಸಿ ಭಾವುಕರಾಗಿ ಕಣ್ಣೀರು ಸುರಿಸಿದರು. ಸ್ಪೇನ್ ತಂಡವು ಲಿಯೋನೆಲ್ ಮೆಸ್ಸಿಯ ತಂಡವನ್ನು ಯಶಸ್ವಿಯಾಗಿ ಸೋಲಿಸಿ ಎರಡನೇ ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತು.

ಪಂದ್ಯಾವಳಿಯಲ್ಲಿ ಎಂಟು ಗೋಲುಗಳು ಮತ್ತು ನಾಲ್ಕು ಅಸಿಸ್ಟ್‌ಗಳೊಂದಿಗೆ ಮೆಸ್ಸಿ ಫೈನಲ್‌ಗೆ ಪ್ರವೇಶಿಸಿದರು ಆದರೆ ಫೈನಲ್‌ನಲ್ಲಿ ಸ್ಪೇನ್ ತಂಡದ ಬಲಿಷ್ಠ ರಕ್ಷಣಾತ್ಮಕ ಆಟದ ಮುಂದೆ ಅವರ ಯಾವುದೇ ಮ್ಯಾಜಿಕ್‌ ನಡೆಯಲಿಲ್ಲ. ಲೂಯಿಸ್ ಡೆ ಲಾ ಫ್ಯುಯೆಂಟೆ ತಂಡವು ಆರಂಭದಿಂದಲೂ ಪಂದ್ಯವನ್ನು ನಿಯಂತ್ರಿಸಿತು. ಎಕ್ಸ್‌ಟ್ರಾ ಟೈಮ್‌ನಲ್ಲಿ ಅರ್ಜೆಂಟೀನಾ ಕನಸು ನುಚ್ಚು ನೂರಾಯಿತು. ಸ್ಪೇನ್‌ನ ಫೆರಾನ್ ಟೊರೆಸ್ ಸಿಡಿಸಿದ ಏಕೈಕ ಗೋಲಿನಿಂದ ಸ್ಪೇನ್ ಗೆಲುವಿನ ಸಂಭ್ರಮ ಆಚರಿಸಿತು. ಬರೋಬ್ಬರಿ 16 ವರ್ಷಗಳ ಬಳಿಕ ಸ್ಪೇನ್ ಫಿಫಾ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತು.\



ಅರ್ಜೆಂಟೀನಾ ಫೈನಲ್ ಪಂದ್ಯದಲ್ಲಿ ಹಳದಿ ಕಾರ್ಡ್ ಸಂಕಷ್ಟ ಎದುರಿಸಿತು. ಎಂಜೋ ಫರ್ನಾಂಡಿಸ್ 2ನೇ ಹಳದಿ ಕಾರ್ಡ್ ಪಡೆದ ಕಾರಣ ಮೈದಾನದಿಂದ ಹೊರನಡೆದರು. ಪರಿಣಾಮ ಅರ್ಜೆಂಟೀನಾ 10 ಆಟಗಾರರ ತಂಡ ಆಕ್ರಮಣಕಾರಿ ಆಟಕ್ಕಿಂತ ಹೆಚ್ಚು ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಹೀಗಾಗಿ ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಫೈನಲ್‌ನಲ್ಲಿ ಅರ್ಜೆಂಟೀನಾ ಆಟದಲ್ಲಿ ಆಕ್ರಮಣಕಾರಿ ಆಟ ಇರಲಿಲ್ಲ.

ಮೆಸ್ಸಿಗೆ ತಪ್ಪಿದ ಗೋಲ್ಡನ್‌ ಶೂ; 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಶಸ್ತಿ ವಿಜೇತರ ವಿವರ!

ಸ್ಪೇನ್ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ನಾಯಕ ರೊಡ್ರಿ ಅವರಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ (ಪ್ಲೇಯರ್ ಆಫ್ ದಿ ಟೂರ್ನಮೆಂಟ್) ನೀಡಲಾಯಿತು. 2024ರ ಯುರೋ ಕಪ್‌ನಲ್ಲೂ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದ ರೊಡ್ರಿ, ತಮ್ಮ ವೃತ್ತಿಜೀವನದ ಮತ್ತೊಂದು ದೊಡ್ಡ ಗೌರವವನ್ನು ತಮ್ಮದಾಗಿಸಿಕೊಂಡರು. ಎರಡು ವರ್ಷಗಳ ಹಿಂದೆ ಬ್ಯಾಲನ್ ಡಿ ಓರ್ ಗೆದ್ದ ಅಪರೂಪದ ಮಿಡ್‌ಫೀಲ್ಡರ್‌ಗಳ ಪಟ್ಟಿಯಲ್ಲೂ ಅವರು ಸ್ಥಾನ ಪಡೆದಿದ್ದಾರೆ.

ಶ್ವಕಪ್ 2026ರ ವೈಯಕ್ತಿಕ ಪ್ರಶಸ್ತಿ ವಿಜೇತರ ಪಟ್ಟಿ

ಸಿಲ್ವರ್ ಬಾಲ್ ಪ್ರಶಸ್ತಿ – ಲಿಯೋನೆಲ್ ಮೆಸ್ಸಿ

ಕಂಚಿನ ಬಾಲ್ ಪ್ರಶಸ್ತಿ – ಕಿಲಿಯನ್ ಎಂಬಾಪೆ

ಗೋಲ್ಡನ್ ಶೂ ಪ್ರಶಸ್ತಿ – ಕೈಲಿಯನ್ ಎಂಬಾಪೆ

ಸಿಲ್ವರ್ ಶೂ ಪ್ರಶಸ್ತಿ – ಲಿಯೋನೆಲ್ ಮೆಸ್ಸಿ

ಕಂಚಿನ ಶೂ ಪ್ರಶಸ್ತಿ – ಎರ್ಲಿಂಗ್ ಹಾಲಂಡ್

ಅತ್ಯುತ್ತಮ ಯುವ ಆಟಗಾರ ಪ್ರಶಸ್ತಿ – ಪೌ ಕುಬಾರ್ಸಿ

ಫಿಫಾ ಫೇರ್ ಪ್ಲೇ ಪ್ರಶಸ್ತಿ – ನೆದರ್ಲೆಂಡ್ಸ್‌

ಗೋಲ್ಡನ್ ಗ್ಲೋವ್ ಪ್ರಶಸ್ತಿ – ಉನೈ ಸೈಮೋನ್