ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lionel Messi: ಗಾಯಗೊಂಡ ಮೆಸ್ಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಲಭ್ಯ

ದಕ್ಷಿಣ ಅಮೆರಿಕಾದ ಅರ್ಹತಾ ಪಂದ್ಯಗಳಲ್ಲಿ ಮುನ್ನಡೆ ಸಾಧಿಸಿರುವ ಅರ್ಜೆಂಟೀನಾ ಶುಕ್ರವಾರ ಎರಡನೇ ಸ್ಥಾನದಲ್ಲಿರುವ ಉರುಗ್ವೆಗೆ ವಿರುದ್ಧ ಆಡಲಿದೆ. ಇದಾಗಿ ನಾಲ್ಕು ದಿನಗಳ ನಂತರ ಬ್ಯೂನಸ್ ಐರಿಸ್‌ನ ಮಾನ್ಯುಮೆಂಟಲ್ ಕ್ರೀಡಾಂಗಣದಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್‌ ವಿರುದ್ಧ ಸೆಣಸಾಡಲಿದೆ.

ಗಾಯಗೊಂಡ ಮೆಸ್ಸಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಅಲಭ್ಯ

Profile Abhilash BC Mar 18, 2025 3:28 PM

ಬ್ಯೂನಸ್ ಐರಿಸ್: ಸ್ನಾಯು ಸೆಳೆತಕ್ಕೊಳಗಾಗಿರುವ ಅರ್ಜೆಂಟೀನಾದ ಸ್ಟಾರ್‌ ಫುಟ್ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ(Lionel Messi) ಅವರು ಮಾರ್ಚ್ 21 ಮತ್ತು 25 ರಂದು ನಡೆಯುವ ಎರಡು ವಿಶ್ವಕಪ್(2026 FIFA World Cup Qualifiers) ಅರ್ಹತಾ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕಳೆದ ಭಾನುವಾರ ಅರ್ಜೆಂಟೀನಾ(Argentina) ಯುನೈಟೆಡ್ ವಿರುದ್ಧದ ಪಂದ್ಯದಲ್ಲಿ ಸ್ನಾಯು ಸೆಳೆತ ಉಂಟಾಗಿತ್ತು ಎಂದು ಇಂಟರ್ ಮಿಯಾಮಿ ತಿಳಿಸಿದೆ. ವಿಶ್ವಕಪ್ ಅರ್ಹತಾ ಪಂದ್ಯಗಳಿಗೆ ಕೋಚ್ ಲಿಯೋನೆಲ್ ಸ್ಕಲೋನಿ ಅವರು ಪ್ರಕಟಿಸಿದ 25 ಆಟಗಾರರ ತಂಡದಲ್ಲಿ 37 ವರ್ಷ ವಯಸ್ಸಿನ ಮೆಸ್ಸಿ ಅವರ ಹೆಸರು ಸೇರ್ಪಡೆಯಾಗಿಲ್ಲ. ಉರುಗ್ವೆ ಮತ್ತು ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಆಡುದಿಲ್ಲ.

ಚಿಕಿತ್ಸೆಗೆ ಮೆಸ್ಸಿ ಹೇಗೆ ಸ್ಪಂದಿಸುತ್ತಾರೆಂಬುದರ ಮೇಲೆ ಪಂದ್ಯಾವಳಿಗೆ ಅವರ ಲಭ್ಯತೆ ನಿರ್ಧಾರವಾಗಲಿದೆ ಎಂದು ಕೋಚ್ ಲಿಯೋನೆಲ್ ಸ್ಕಲೋನಿ ಹೇಳಿದ್ದಾರೆ. ದಕ್ಷಿಣ ಅಮೆರಿಕಾದ ಅರ್ಹತಾ ಪಂದ್ಯಗಳಲ್ಲಿ ಮುನ್ನಡೆ ಸಾಧಿಸಿರುವ ಅರ್ಜೆಂಟೀನಾ ಶುಕ್ರವಾರ ಎರಡನೇ ಸ್ಥಾನದಲ್ಲಿರುವ ಉರುಗ್ವೆಗೆ ವಿರುದ್ಧ ಆಡಲಿದೆ. ಇದಾಗಿ ನಾಲ್ಕು ದಿನಗಳ ನಂತರ ಬ್ಯೂನಸ್ ಐರಿಸ್‌ನ ಮಾನ್ಯುಮೆಂಟಲ್ ಕ್ರೀಡಾಂಗಣದಲ್ಲಿ ಐದನೇ ಸ್ಥಾನದಲ್ಲಿರುವ ಬ್ರೆಜಿಲ್‌ ವಿರುದ್ಧ ಸೆಣಸಾಡಲಿದೆ.

ಇದನ್ನೂ ಓದಿ IPL 2025: ಐಪಿಎಲ್ 2025 ಆರಂಭಕ್ಕೆ ಮುಹೂರ್ತ ಫಿಕ್ಸ್..!

2022ರಲ್ಲಿ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್‌ ಪಟ್ಟಕೇರಿಸಿದ್ದ ಎಂಟು ಬಾರಿಐ ಬ್ಯಾಲನ್ ಡಿ'ಓರ್ ಪ್ರಶಸ್ತಿ ವಿಜೇತ ಲಿಯೋನೆಲ್ ಮೆಸ್ಸಿ, ಗಾಯದ ಕಾರಣದಿಂದಾಗಿ ಈ ಋತುವಿನಲ್ಲಿ ಇಂಟರ್ ಮಿಯಾಮಿ ತಂಡದಿಂದ ಹಲವಾರು ಬಾರಿ ಹೊರಗುಳಿದಿದ್ದರು. ಗಾಯದಿಂದ ಈ ತಿಂಗಳು, ಲಿಯೋನೆಲ್ ಮೆಸ್ಸಿ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಇದೇ ವರ್ಷ ಭಾರತಕ್ಕೆ ಭೇಟಿ ನೀಡಲಿದೆ ಅರ್ಜೆಂಟೀನಾ ತಂಡ

ಅರ್ಜೆಂಟೀನಾ(Argentina) ಫುಟ್‌ಬಾಲ್ ತಂಡ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯಕ್ಕಾಗಿ ಇದೇ ಅಕ್ಟೋಬರ್ 25 ಕೇರಳಕ್ಕೆ ಆಗಮಿಸಲಿದೆ. ಅರ್ಜೆಂಟೀನಾ ತಂಡ ಕೇರಳಕ್ಕೆ ಭೇಟಿ ನೀಡುವ ವಿಚಾರವನ್ನು ಕೇರಳ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್(Sports Minister V. Abdurahiman) ಈಗಾಗಲೇ ದೃಢಪಡಿಸಿದ್ದಾರೆ. ಮೆಸ್ಸಿ ಏಳು ದಿನಗಳ ಕಾಲ ಕೇರಳದಲ್ಲಿಯೇ ಇರಲಿದ್ದಾರೆ ಎಂದಿದ್ದಾರೆ. ಮೆಸ್ಸಿ 2011 ರಲ್ಲಿ ಕೊನೆಯ ಬಾರಿಗೆ ಭಾರತದಲ್ಲಿ ಫುಟ್ಬಾಲ್‌ ಪಂದ್ಯವನ್ನಾಡಿದ್ದರು. ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ವೆನೆಜುವೆಲಾ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯ ಇದಾಗಿತ್ತು. ಈ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತ್ತು. ಮೆಸ್ಸಿ ಭಾರತದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಕೇರಳದಲ್ಲಿ ಅಧಿಕ.