ಕನ್ಕಷನ್ಗೆ ಒಳಗಾದ ಆಟಗಾರ ಇನ್ನು 7 ದಿನ ಆಡುವಂತಿಲ್ಲ
ವೈಡ್ ಬಾಲ್‌ನಲ್ಲೂ ಹೊಸ ನಿಯಮ ಜಾರಿಯಾಗಲಿದೆ. ಬೌಲರ್ ಚೆಂಡು ಎಸೆಯುವ ವೇಳೆ ಬ್ಯಾಟರ್ ಎಲ್ಲಿರುತ್ತಾನೋ, ಆ ಸ್ಥಳವನ್ನೇ ಗುರುತಿಸಿ ವೈಡ್ ಕರೆ ನೀಡಲಾಗುತ್ತದೆ. ಚೆಂಡು ಎಸೆದ ಮೇಲೆ ಬ್ಯಾಟರ್ ಅತ್ತಿತ್ತ ಹೋದರೂ, ಚೆಂಡು ಎಸೆಯುವಾಗ ಬ್ಯಾಟರ್ ಇರುವ ಸ್ಥಳದ ಆಧಾರದಲ್ಲಿ ವೈಡ್ ತೀರ್ಪು ನೀಡಲಾಗುತ್ತದೆ.


ದುಬೈ: ಆಟಗಾರರ ಸುರಕ್ಷತೆ ದೃಷ್ಟಿಯಿಂದ ಪಂದ್ಯದ ವೇಳೆ ತಲೆಗೆ ಚೆಂಡೇಟು ಬಿದ್ದು ಹೊರಗುಳಿಯುವ(ಕನ್ಕಷನ್) ಆಟಗಾರ, ಕಡ್ಡಾಯ 7 ದಿನಗಳ ವಿಶ್ರಾಂತಿ ಬಳಿಕವೇ ಕ್ರಿಕೆಟ್‌ಗೆ ಮರಳಬೇಕು(Concussion Rules) ಎಂದು ಐಸಿಸಿ ನಿಯಮಯೊಂದನ್ನು(ICC Rules) ಜಾರಿಗೆ ತಂದಿದೆ.
ಎಲ್ಲ ತಂಡಗಳು ಕನ್ಕಷನ್ ಸಬ್‌ಸ್ಟಿಟ್ಯೂಟ್ ಆಟಗಾರರ ಪಟ್ಟಿಯನ್ನು ಪಂದ್ಯ ಆರಂಭಕ್ಕೂ ಮುನ್ನವೇ ಸಲ್ಲಿಸಬೇಕು. ಈ ಹಿಂದೆ ಪಂದ್ಯ ವೇಳೆ ಯಾರನ್ನು ಕೂಡ ಆಯ್ಕೆ ಮಾಡುವ ಅವಕಾಶವಿತ್ತು. ಆದರೆ ಇನ್ನು ಇದು ಸಾಧ್ಯವಿಲ್ಲ. ಬದಲಿಯಾಗಿ ಬರುವ ಆಟಗಾರನಿಗೆ ಬ್ಯಾಟಿಂಗ್ ಬೌಲಿಂಗ್ ಅವಕಾಶ ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಆಟಗಾರನೊಬ್ಬ ಗಂಭೀರ ಬಾಹ್ಯ ಗಾಯದಿಂದ ಮೈದಾನ ತೊರೆದಾಗ ಬರುವ ಬದಲಿ ಆಟಗಾರನಿ ವೇಗಿಗೆ ವೇಗಿ, ಸ್ಪಿನ್ನರ್ಗೆ ಸ್ಪಿನ್ನರ್, ಬ್ಯಾಟರ್ಗೆ ಬ್ಯಾಟರ್, ಆಲ್ರೌಂಡರ್ಗೆ ಆಲ್ರೌಂಡರ್, ಕೀಪರ್ಗೆ ಕೀಪರ್ ಬದಲಿಗರಾಗಿ ಆಡಬಹುದು. ಅಲ್ಲದೆ ಇದಕ್ಕೆ ಮ್ಯಾಚ್ ರೆಫ್ರಿ ಒಪ್ಪಿಗೆಯೂ ಅಗತ್ಯ.
ವೈಡ್ ಬಾಲ್ ನಿಯಮದಲ್ಲೂ ಬದಲಾವಣೆ
ವೈಡ್ ಬಾಲ್‌ನಲ್ಲೂ ಹೊಸ ನಿಯಮ ಜಾರಿಯಾಗಲಿದೆ. ಬೌಲರ್ ಚೆಂಡು ಎಸೆಯುವ ವೇಳೆ ಬ್ಯಾಟರ್ ಎಲ್ಲಿರುತ್ತಾನೋ, ಆ ಸ್ಥಳವನ್ನೇ ಗುರುತಿಸಿ ವೈಡ್ ಕರೆ ನೀಡಲಾಗುತ್ತದೆ. ಚೆಂಡು ಎಸೆದ ಮೇಲೆ ಬ್ಯಾಟರ್ ಅತ್ತಿತ್ತ ಹೋದರೂ, ಚೆಂಡು ಎಸೆಯುವಾಗ ಬ್ಯಾಟರ್ ಇರುವ ಸ್ಥಳದ ಆಧಾರದಲ್ಲಿ ವೈಡ್ ತೀರ್ಪು ನೀಡಲಾಗುತ್ತದೆ.
ಶಾರ್ಟ್ ರನ್ ತಿದ್ದುಪಡಿ
ರನ್ ಗಳಿಸುವ ವೇಳೆ ಬ್ಯಾಟರ್ ಶಾರ್ಟ್ ರನ್ ತೆಗೆದುಕೊಳ್ಳುವುದು ಅಂದರೆ ಕ್ರೀಸ್ನೊಳಗೆ ಬ್ಯಾಟ್ ಅಥವಾ ಕಾಲು ಸ್ಪರ್ಶಿಸದೆ ಇನ್ನೊಂದು ಸ್ಟ್ರೆಕ್ನತ್ತ ಓಡುವುದು ಕಂಡು ಬಂದರೆ, ಇದುವರೆಗೆ ಅಂಪೈರ್ ಬ್ಯಾಟಿಂಗ್ ತಂಡಕ್ಕೆ 5 ರನ್ ಪೆನಾಲ್ಟಿ ನೀಡುತ್ತಿದ್ದರು. ಆದರೆ ಇನ್ನು ಮುಂದೆ ಬ್ಯಾಟರ್ಗಳು ವಿಕೆಟ್ ನಡುವಿನ ಓಟದ ವೇಳೆ, ಅಂಪೈರ್ ಕಣ್ತಪ್ಪಿಸಲು ಅಥವಾ ಸ್ಟ್ರೆಕ್ ಕಾಯ್ದುಕೊಳ್ಳಲು ಉದ್ದೇಶಪೂರ್ವಕವಾಗಿ ಶಾರ್ಟ್ ರನ್ ಕಸಿಯುವುದು ಕಂಡುಬಂದರೆ, ಅಂಪೈರ್ಗಳು ಫೀಲ್ಡಿಂಗ್ ತಂಡಕ್ಕೆ ಯಾವ ಬ್ಯಾಟರ್ ಸ್ಟ್ರೆಕ್ನಲ್ಲಿರಬೇಕೆಂದು ನಿರ್ಧರಿಸುವ ಅಧಿಕಾರ ನೀಡುತ್ತಾರೆ. ಜತೆಗೆ 5 ಪೆನಾಲ್ಟಿ ರನ್ ಕೂಡ ಲಭಿಸುತ್ತದೆ.