KCL 2025: 12 ಎಸೆತಗಳಲ್ಲಿ 11 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದ ಸಲ್ಮಾನ್ ನಿಝಾರ್!
ಕೇರಳ ಕ್ರಿಕೆಟ್ ಲೀಗ್‌ನ ಪ್ರತಿಯೊಂದು ಪಂದ್ಯವೂ ರೋಮಾಂಚನದಿಂದ ಕೂಡಿದೆ. ಅದಾನಿ ತ್ರಿವಂಡ್ರಮ್ ರಾಯಲ್ಸ್ ವಿರುದ್ಧದ ಟೂರ್ನಿಯ 19ನೇ ಪಂದ್ಯದಲ್ಲಿ ಸಲ್ಮಾನ್ ನಿಝಾರ್, ಕ್ಯಾಲಿಕಟ್ ಗ್ಲೋಬ್‌ಸ್ಟಾರ್ ಪರ ಅದ್ಭುತ ಇನಿಂಗ್ಸ್ ಆಡಿದರು. ಅವರು 12 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ.

12 ಎಸೆತಗಳಲ್ಲಿ 11 ಸಿಕ್ಸರ್ ಬಾರಿಸಿದ ಸಲ್ಮಾನ್ ನಿಝಾರ್. -

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಕೇರಳ ಕ್ರಿಕೆಟ್ ಲೀಗ್‌ನ (KCL 2025) 19ನೇ ಪಂದ್ಯದಲ್ಲಿ ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ (Calicut Globstars) ಬ್ಯಾಟ್ಸ್‌ಮನ್ ಸಲ್ಮಾನ್ ನಿಝಾರ್ (Salman Nizar) ತಮ್ಮ ಬಿರುಗಾಳಿಯ ಬ್ಯಾಟಿಂಗ್‌ನಿಂದ ವಿನಾಶವನ್ನುಂಟು ಮಾಡಿದ್ದಾರೆ. ಅದಾನಿ ತ್ರಿವೇಂಡ್ರಮ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಸಲ್ಮಾನ್ ನಿಝಾರ್, ಇನಿಂಗ್ಸ್‌ನ ಕೊನೆಯ 12 ಎಸೆತಗಳಲ್ಲಿ 11 ಸಿಕ್ಸರ್‌ಗಳನ್ನು ಬಾರಿಸಿದರು. ಕ್ಯಾಲಿಕಟ್ ಪರ ಬ್ಯಾಟಿಂಗ್ ಮಾಡಿದ ಸಲ್ಮಾನ್ 26 ಎಸೆತಗಳಲ್ಲಿ 86 ರನ್‌ಗಳ ಅಜೇಯ ಇನಿಂಗ್ಸ್ ಆಡಿದರು. ಅವರು ತಮ್ಮ ಇನಿಂಗ್ಸ್‌ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಲಿಲ್ಲ. ಅವರು ಒಟ್ಟು 12 ಸಿಕ್ಸರ್‌ಗಳನ್ನು ಮೂಲೆ ಮೂಲೆಗಳ ಕಡೆಗೆ ಸಿಡಿಸಿದರು. ಅದರಲ್ಲಿ 11 ಸಿಕ್ಸರ್‌ಗಳು ಅವರ ಕೊನೆಯ ಎರಡು ಓವರ್‌ಗಳಲ್ಲಿ ಬಂದವು. ಸಲ್ಮಾನ್ ಅವರ ಈ ಬಿರುಗಾಳಿಯ ಇನಿಂಗ್ಸ್ ನೆರವಿನಿಂದ ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ತಂಡ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 186 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಯಿತು.
18ನೇ ಓವರ್‌ನ ಅಂತ್ಯದ ವೇಳೆಗೆ ಕ್ಯಾಲಿಕಟ್, 6 ವಿಕೆಟ್‌ಗಳ ನಷ್ಟಕ್ಕೆ 115 ರನ್‌ಗಳನ್ನು ಗಳಿಸಿತ್ತು. ಐಪಿಎಲ್‌ನಲ್ಲಿ ಆಡಿರುವ ಬಾಸಿಲ್ ಥಂಪಿ, ಅದಾನಿ ತ್ರಿವೇಂಡ್ರಮ್ ಪರ ಇನಿಂಗ್ಸ್‌ನ 19ನೇ ಓವರ್ ಬೌಲ್ ಮಾಡಲು ಬಂದರು. ಸಲ್ಮಾನ್ ಸ್ಟ್ರೈಕ್‌ನಲ್ಲಿದ್ದರು. ಥಂಪಿ ಎಸೆದ ಈ ಓವರ್‌ನಲ್ಲಿ ಮೊದಲ 5 ಎಸೆತಗಳಲ್ಲಿ ಸಲ್ಮಾನ್ ಸಿಕ್ಸರ್ ಬಾರಿಸಿದರು. ಥಂಪಿ ಹೇಗೋ ಓವರ್‌ನ ಕೊನೆಯ ಎಸೆತದಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಸಲ್ಮಾನ್ ಕೊನೆಯ ಎಸೆತದಲ್ಲಿ ಒಂದು ರನ್ ತೆಗೆದುಕೊಂಡು ಸ್ಟ್ರೈಕ್ ಅನ್ನು ತಮ್ಮ ಬಳಿಯೇ ಉಳಿಸಿಕೊಂಡರು. ಆ ಮೂಲಕ ಸಲ್ಮಾನ್ 19ನೇ ಓವರ್‌ನಲ್ಲಿ ಒಟ್ಟು 31 ರನ್ ಸಿಡಿಸಿದರು.
KCL 2025: ಏಷ್ಯಾ ಕಪ್‌ಗೂ ಮುನ್ನ ಮತ್ತೊಂದು ಅರ್ಧಶತಕ ಬಾರಿಸಿದ ಸಂಜು ಸ್ಯಾಮ್ಸನ್!
ಬಾಸಿಲ್ ಥಂಪಿಯನ್ನು ಸೋಲಿಸಿದ ನಂತರ, ಬೌಲಿಂಗ್‌ನಲ್ಲಿ ಅಭಿಜೀತ್ ಪ್ರವೀಣ್ ಅವರ ಸರದಿ ಬಂದಿತ್ತು. ಅಭಿಜೀತ್ ವಿರುದ್ಧದ ಮೊದಲ ಎಸೆತದಲ್ಲಿ ಸಲ್ಮಾನ್ ಸಿಕ್ಸರ್ ಬಾರಿಸಿದರು. ಸಲ್ಮಾನ್‌ನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಅಭಿಜೀತ್ ಮುಂದಿನ ಎಸೆತವನ್ನು ವೈಡ್‌ಗೆ ಪ್ರಯತ್ನಿಸಿದರು. ಮುಂದಿನ ಎಸೆತ ನೋ ಬಾಲ್ ಆಗಿತ್ತು, ಆ ಎಸೆತದಲ್ಲಿ ಸಲ್ಮಾನ್ 2 ರನ್ ಗಳಿಸಿದರು. ಇದಾದ ನಂತರ, ಸಲ್ಮಾನ್ ಉಳಿದ ಐದು ಎಸೆತಗಳಲ್ಲಿ ಸಿಕ್ಸರ್‌ಗಳನ್ನು ಬಾರಿಸಿದರು. ಈ ರೀತಿಯಾಗಿ, ಅಭಿಜೀತ್ ಓವರ್‌ನಲ್ಲಿ ಸಲ್ಮಾನ್ 6 ಸಿಕ್ಸರ್‌ಗಳನ್ನು ಬಾರಿಸಿದರು. ಕ್ಯಾಲಿಕಟ್ ತಂಡ ಈ ಓವರ್‌ನಲ್ಲಿ ಒಟ್ಟು 40 ರನ್‌ಗಳನ್ನು ದಾಖಸಿತು. ಆದರೆ ಸಲ್ಮಾನ್ 12 ಎಸೆತಗಳಲ್ಲಿ 11 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದರು.
The final over was pure annihilation! Salman rewrote the final over with six brutal signatures. 🖋️💣#KCLSeason2 #KCL2025 pic.twitter.com/gVYjHxhp3H
— Kerala Cricket League (@KCL_t20) August 30, 2025
ಕ್ಯಾಲಿಕಟ್ ತಂಡಕ್ಕೆ 13 ರನ್ ಜಯ
ಕ್ಯಾಲಿಕಟ್ ಗ್ಲೋಬ್‌ಸ್ಟಾರ್ಸ್ ನೀಡಿದ 187 ರನ್‌ಗಳ ಗುರಿಯನ್ನು ಬೆನ್ನಟ್ಟುವಾಗ ಅದಾನಿ ತಂಡವು ಕಠಿಣ ಹೋರಾಟವನ್ನು ನೀಡಿತು. ಕೊನೆಯ ಓವರ್‌ನಲ್ಲಿ ಗೆಲ್ಲಲು 15 ರನ್‌ಗಳು ಬೇಕಾಗಿದ್ದವು. ಆದರೆ, ಅವರ ಬಳಿ ಯಾವುದೇ ವಿಕೆಟ್ ಉಳಿದಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಕೊನೆಯ ಓವರ್‌ನಲ್ಲಿ ತಂಡವು ಹಿನ್ನಡೆ ಅನುಭವಿಸಿತು. ಅದಾನಿ ತ್ರಿವೇಂಡ್ರಮ್ 19.3 ಓವರ್‌ಗಳಲ್ಲಿ 173 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಕ್ಯಾಲಿಕಟ್‌ಗೆ 13 ರನ್‌ಗಳಿಂದ ಗೆಲುವು ಪಡೆಯಿತು.