ಚೊಚ್ಚಲ ಪಂದ್ಯದಲ್ಲೇ 6 ವಿಕೆಟ್ ಕಿತ್ತು ಹಲವು ದಾಖಲೆ ಬರೆದ ಸ್ಪಿನ್ನರ್ ಮಾನವ್ ಸುತಾರ್
IND vs AFG One-off Test: ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಕನಸಿನ ಆರಂಭವನ್ನು ಪಡೆದರು. ಟಿನು ಯೋಹನ್ನನ್ ನಂತರ 21 ನೇ ಶತಮಾನದಲ್ಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
Manav Suthar -
ಮುಲ್ಲನ್‌ಪುರ, ಜೂ.8: ನ್ಯೂ ಚಂಡೀಗಢದ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಫ್ಘಾನಿಸ್ತಾನ(IND vs AFG One-off Test) ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್(Manav Suthar) ಸ್ಮರಣೀಯ ಸಾಧನೆ ಮಾಡಿದ್ದಾರೆ. ಚೊಚ್ಚಲ ಪಂದ್ಯದಲ್ಲಿ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದರು. ಅಮಿತ್ ಮಿಶ್ರಾ ನಂತರ ತಮ್ಮ ಮೊದಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು.
ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆಯುವ ಮೂಲಕ ಸುತಾರ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಕನಸಿನ ಆರಂಭವನ್ನು ಪಡೆದರು. ಟಿನು ಯೋಹನ್ನನ್ ನಂತರ 21 ನೇ ಶತಮಾನದಲ್ಲಿ ತಮ್ಮ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನಿಂಗ್ಸ್‌ನ 58 ನೇ ಓವರ್‌ನಲ್ಲಿ ರಹಮತ್ ಶಾ ಅವರನ್ನು ಕ್ಲೀನ್‌ಔಟ್ ಮಾಡಿ ತಮ್ಮ ಐದು ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ನಂತರ ಅವರು ಸಲೀಮ್ ಸಫಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿ ಓವರ್‌ನ ಎರಡನೇ ಮತ್ತು ಇನ್ನಿಂಗ್ಸ್‌ನ ಆರನೇ ವಿಕೆಟ್ ಪಡೆದರು.
The fifth one always hits different 🌟
— BCCI (@BCCI) June 8, 2026
A moment Manav Suthar will replay for the rest of his life 🎞️
Updates ▶️ https://t.co/Au50EfVM30#TeamIndia | #INDvAFG | @IDFCFIRSTBank pic.twitter.com/yUo8AsXHZu
6 ವಿಕೆಟ್ ಕೀಳುವ ಮೂಲಕ ಭಾರತದ ಪರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಎರಡನೇ ಭಾರತೀಯ ಆಟಗಾರ ಎನಿಸಿದರು. 1988ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರ್ವಾನಿ 8/61 ವಿಕೆಟ್ ಕಿತ್ತದ್ದು ದಾಖಲೆ. ಸುತಾರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದ 10ನೇ ಭಾರತೀಯ ಬೌಲರ್ ಮತ್ತು ಏಳನೇ ಸ್ಪಿನ್ನರ್ ಎನಿಸಿಕೊಂಡರು.
ಚೊಚ್ಚಲ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಿತ್ತ ಭಾರತೀಯ ಬೌಲರ್
ಮೊಹಮ್ಮದ್ ನಿಸ್ಸಾರ್ – 5/93, ಇಂಗ್ಲೆಂಡ್ ವಿರುದ್ಧ (1932)
ವಾಮನ್ ಕುಮಾರ್ – 5/64, ಪಾಕಿಸ್ತಾನ ವಿರುದ್ಧ (1961)
ಅಬಿದ್ ಅಲಿ – 6/55, ಆಸ್ಟ್ರೇಲಿಯಾ ವಿರುದ್ಧ (1967)
ದಿಲೀಪ್ ದೋಷಿ – 6/103, ಆಸ್ಟ್ರೇಲಿಯಾ ವಿರುದ್ಧ (1979)
ನರೇಂದ್ರ ಹಿರ್ವಾನಿ – 8/61, ವೆಸ್ಟ್ ಇಂಡೀಸ್ ವಿರುದ್ಧ (1988)
ಅಮಿತ್ ಮಿಶ್ರಾ – 5/71, ಆಸ್ಟ್ರೇಲಿಯಾ ವಿರುದ್ಧ (2008)
ಮಾನವ್ ಸುತಾರ್ – 6/33, ಅಫ್ಘಾನಿಸ್ತಾನ ವಿರುದ್ಧ (2026)*
ಮಾನವ್ ಸ್ಪಿನ್ ಜಾದೂ; ಆಫ್ಘಾನ್‌ಗೆ ಫಾಲೋ-ಆನ್ ಹೇರಿದ ಭಾರತ
ಟೆಸ್ಟ್ ಕ್ರಿಕೆಟ್‌ನ ಮೊದಲ ಓವರ್‌ನಲ್ಲಿ ವಿಕೆಟ್ ಪಡೆದ ಭಾರತೀಯ ಬೌಲರ್‌ಗಳು
ಮಾಂಟು ಬ್ಯಾನರ್ಜಿ vs ವೆಸ್ಟ್ ಇಂಡೀಸ್ (1948)
ಮನೋಹರ್ ಹಾರ್ಡಿಕರ್ vs ವೆಸ್ಟ್ ಇಂಡೀಸ್ (1958)
ವಾಮನ್ ಕುಮಾರ್ vs ಪಾಕಿಸ್ತಾನ (1961)
ಚೇತನ್ ಶರ್ಮಾ vs ಪಾಕಿಸ್ತಾನ (1984)
ಡಬ್ಲ್ಯೂ.ವಿ. ರಾಮನ್ vs ವೆಸ್ಟ್ ಇಂಡೀಸ್ (1988)
ನೀಲೇಶ್ ಕುಲಕರ್ಣಿ vs ಶ್ರೀಲಂಕಾ (1997)
ಟಿನು ಯೋಹನ್ನನ್ vs ಇಂಗ್ಲೆಂಡ್ (2001)
ಮಾನವ್ ಸುತಾರ್ vs ಅಫ್ಘಾನಿಸ್ತಾನ (2026)*