MI vs KKR: ವಿಶ್ವಕಪ್ ಗೆದ್ದ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಆಟಗಾರ
Suryakumar Yadav: ಮುಂಬೈ ತಂಡವು ಅಫ್ಘಾನಿಸ್ತಾನದ ಸ್ಪಿನ್ನರ್ ಎ.ಎಂ. ಗಜನ್‌ಫರ್‌ಗೆ ಚೊಚ್ಚಲ ಪ್ರವೇಶ ನೀಡಿತು. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಕೂಡ ಫ್ರಾಂಚೈಸಿಗಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಕಳೆದ ಋತುವಿನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 388 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಬದಲಿಗೆ ರಯಾನ್ ರಿಕಲ್ಟನ್ ಅವರನ್ನು ತಂಡ ಆಯ್ಕೆ ಮಾಡಿತು.
Suryakumar Yadav -
ಮುಂಬಯಿ, ಮಾ. 29: ಭಾರತದ ಟಿ20 ವಿಶ್ವಕಪ್ ವಿಜೇತ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರನ್ನು ಕೆಕೆಆರ್(MI vs KKR) ವಿರುದ್ಧದ ಪಂದ್ಯಕ್ಕಾಗಿ ಮುಂಬೈ ಇಂಡಿಯನ್ಸ್‌ನ ಇಂಪ್ಯಾಕ್ಟ್ ಸಬ್‌ಗಳಲ್ಲಿ ಹೆಸರಿಸಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಕಳೆದ ವರ್ಷ ರೋಹಿತ್ ಶರ್ಮ ಅವರನ್ನು ಹಲವಾರು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಬದಲಿ ಆಟಗಾರನಾಗಿ ಆಡಿಸಲಾಗಿತ್ತು.
ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಸೂರ್ಯಕುಮಾರ್ ಅವರನ್ನು ಆರಂಭಿಕ ಆಡುವ ಬಳಗದಲ್ಲಿ ಸೇರಿಸಲಾಗಿಲ್ಲ. ಚೇಸಿಂಗ್ ಸಮಯದಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಬಳಸಿಕೊಳ್ಳುವ ನಿರೀಕ್ಷೆಯಿದೆ. ಸೂರ್ಯ ಅವರನ್ನು ಆಡುವ ಬಳದಿಂದ ಕೈಬಿಡ ವಿಚಾರದಲ್ಲಿ ನೆಟ್ಟಿಗರು ಮುಂಬೈ ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆದ್ದ ನಾಯಕನಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ಸಿಎಸ್‌ಕೆಗೆ ಗಾಯದ ಮೇಲೆ ಬರೆ; ಆರ್‌ಆರ್ ಪಂದ್ಯದಿಂದ ಹೊರಗುಳಿದ ಡೆವಾಲ್ಡ್ ಬ್ರೆವಿಸ್
ಮುಂಬೈ ತಂಡವು ಅಫ್ಘಾನಿಸ್ತಾನದ ಸ್ಪಿನ್ನರ್ ಎ.ಎಂ. ಗಜನ್‌ಫರ್‌ಗೆ ಚೊಚ್ಚಲ ಪ್ರವೇಶ ನೀಡಿತು. ಶಾರ್ದೂಲ್ ಠಾಕೂರ್ ಮತ್ತು ಶೆರ್ಫೇನ್ ರುದರ್ಫೋರ್ಡ್ ಕೂಡ ಫ್ರಾಂಚೈಸಿಗಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು. ಕಳೆದ ಋತುವಿನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 388 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಬದಲಿಗೆ ರಯಾನ್ ರಿಕಲ್ಟನ್ ಅವರನ್ನು ತಂಡ ಆಯ್ಕೆ ಮಾಡಿತು. ಟ್ರೆಂಟ್ ಬೌಲ್ಟ್ ಅವರನ್ನು ನಾಲ್ಕನೇ ವಿದೇಶಿ ಆಟಗಾರನಾಗಿ ಆಯ್ಕೆ ಮಾಡಲಾಯಿತು.
ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆಡಿದ 35 ಪಂದ್ಯಗಳಲ್ಲಿ 24ರಲ್ಲಿ ಗೆಲುವು ಸಾಧಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ 10-2 ಮುನ್ನಡೆಯಲ್ಲಿದೆ. 2024 ರಿಂದ, ಕೆಕೆಆರ್ ತಂಡವು 2-1 ಮುನ್ನಡೆಯಲ್ಲಿದೆ.
ಉಭಯ ಆಡುವ ಬಳಗ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್(ವಿ.ಕೀ.), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಶೆರ್ಫಾನ್ ರುದರ್‌ಫೋರ್ಡ್, ನಮನ್ ಧೀರ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಾಂಡೆ, ಎಎಮ್ ಗಜನ್‌ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.
ಇಂಪ್ಯಾಕ್ಟ್ ಆಟಗಾರರು: ಸೂರ್ಯಕುಮಾರ್ ಯಾದವ್, ಕಾರ್ಬಿನ್ ಬಾಷ್, ರಾಬಿನ್ ಮಿಂಜ್, ರಾಜ್ ಬಾವಾ, ಅಶ್ವನಿ ಕುಮಾರ್
ಕೋಲ್ಕತಾ ನೈಟ್‌ರೈಡರ್ಸ್: ಫಿನ್ ಅಲೆನ್, ಅಜಿಂಕ್ಯ ರಹಾನೆ(ನಾಯಕ), ಕ್ಯಾಮರೂನ್ ಗ್ರೀನ್, ಆಂಗ್ಕ್ರಿಶ್ ರಘುವಂಶಿ(ಡಬ್ಲ್ಯೂ), ರಿಂಕು ಸಿಂಗ್, ರಮಣದೀಪ್ ಸಿಂಗ್, ಅನುಕೂಲ್ ರಾಯ್, ಸುನಿಲ್ ನರೈನ್, ವರುಣ್ ಚಕ್ರವರ್ತಿ, ವೈಭವ್ ಅರೋರಾ, ಬ್ಲೆಸ್ಸಿಂಗ್ ಮುಜರಬಾನಿ.
ಇಂಪ್ಯಾಕ್ಟ್ ಆಟಗಾರರು: ಮನೀಶ್ ಪಾಂಡೆ, ರೋವ್ಮನ್ ಪೊವೆಲ್, ಕಾರ್ತಿಕ್ ತ್ಯಾಗಿ, ಸೌರಭ್ ದುಬೆ, ತೇಜಸ್ವಿ ದಹಿಯಾ.