ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್ ಪಂದ್ಯದ ಆಡುವ ಬಳಗ, ಪಿಚ್ ರಿಪೋರ್ಟ್ ಹೀಗಿದೆ
IND vs SA: ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉಪನಾಯಕ ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡು ಮರಳಿದರೂ, ವಿಕೆಟ್ ಕೀಪರ್ ಧ್ರುವ್ ಜುರೆಲ್ ತಂಡದಲ್ಲಿ ಮುಂದುವರಿಯುವುದು ಖಚಿತವಾಗಿದೆ. ನಾಯಕ ಶುಭಮನ್ ಗಿಲ್ ವನ್‌ಡೌನ್ ಆಗಿ ಬ್ಯಾಟ್ ಬೀಸಲಿದ್ದಾರೆ.
ನಾಯಕ ಗಿಲ್ ಅವರಿಂದ ಬ್ಯಾಟಿಂಗ್ ಟಿಪ್ಸ್ ಪಡೆಯುತ್ತಿರುವ ಜೈಸ್ವಾಲ್ -
ಕೋಲ್ಕತಾ: ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ರಿಕಾ ಮತ್ತು ಭಾರತ(IND vs SA) ತಂಡಗಳ ನಡುವಣ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ(ನ.14) ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರಂಭಗೊಳ್ಳಲಿದೆ. ಸರಣಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಭಾರತದ ಗುರಿಯಾದರೆ, ಅತ್ತ ದಕ್ಷಿಣ ಆಫ್ರಿಕಾ ತಂಡವು 15 ವರ್ಷಗಳ ಬಳಿಕ ಸರಣಿಯಲ್ಲಿ ಜಯಿಸುವತ್ತ ಚಿತ್ತ ನೆಟ್ಟಿದೆ. ಈ ಪಂದ್ಯಕ್ಕೆ ಉಭಯ ಆಡುವ ಬಳಗ(India Playing XI)ದ ಕಾಂಬಿನೇಷನ್, ಪಿಚ್ ರಿಪೋರ್ಟ್(Pitch Report Of Eden Gardens) ಹೇಗಿರಲಿದೆ ಎಂಬ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಈ ಬಾರಿ ಭಾರತ ತಂಡ ಸ್ಪರ್ಧಾತ್ಮಕ ಪಿಚ್‌ಗೆ ಮೊರೆ ಹೋಗಿರು ಕಾರಣ ಕಪ್ಪು ಮಣ್ಣಿನಿಂದ ಮಾಡಿದ ಪಿಚ್‌ನಲ್ಲಿ ವೇಗಿಗಳಿಗೆ ರಿವರ್ಸ್ ಸ್ವಿಂಗ್ ಸಿಗುವ ಸೂಚನೆ ಇದೆ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಸ್ಪಿನ್ ಪಿಚ್ ತಯಾರಿಸಿ 0-3 ಅಂತರದಲ್ಲಿ ಸೋತ ಅನುಭವ ಇರುವುದರಿಂದ, ಮೊದಲ ದಿನದಿಂದಲೇ ಚೆಂಡು ತಿರುಗುವಂತಹ ಪಿಚ್ ಮಾಡಲು ಭಾರತ ಮುಂದಾಗುವುದಿಲ್ಲ ಎಂಬುದು ಖಚಿತ. ದಕ್ಷಿಣ ಆಫ್ರಿಕಾದ ಸ್ಪಿನ್ ವಿಭಾಗ ಈ ಬಾರಿ ಬಲಿಷ್ಠವಾಗಿದೆ.
ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಉಪನಾಯಕ ರಿಷಭ್ ಪಂತ್ ಗಾಯದಿಂದ ಚೇತರಿಸಿಕೊಂಡು ಮರಳಿದರೂ, ವಿಕೆಟ್ ಕೀಪರ್ ಧ್ರುವ್ ಜುರೆಲ್ ತಂಡದಲ್ಲಿ ಮುಂದುವರಿಯುವುದು ಖಚಿತವಾಗಿದೆ. ನಾಯಕ ಶುಭಮನ್ ಗಿಲ್ ವನ್‌ಡೌನ್ ಆಗಿ ಬ್ಯಾಟ್ ಬೀಸಲಿದ್ದಾರೆ. ಪಂದ್ಯದ ನಿರ್ಣಾಯಕ ಪಾತ್ರವಹಿಸುವಲ್ಲಿ ಸ್ಪಿನ್ ಪ್ರಮುಖ ಪಾತ್ರವಹಿಸುವ ನಿಟ್ಟಿನಲ್ಲಿ ಭಾರತ ಮೂವರು ಸ್ಪಿನ್ ಕಾಂಬಿನೇಷನ್‌ನೊಂದಿಗೆ ಆಡಲಿಳಿಯುವುದು ಖಚಿತ.
ಅತ್ತ ಹರಿಣ ಪಡೆ ಡೆವಾಲ್ಡ್ ಬ್ರೆವಿಸ್, ಮಾರ್ಕೊ ಜಾನ್ಸನ್, ಕೇಶವ್ ಮಹಾರಾಜ್, ಏಡನ್ ಮಾರ್ಕ್ರಾಮ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ವಿಯಾನ್ ಮುಲ್ಡರ್ ಅವರಂತಹ ಯುವ ಆಟಗಾರರನ್ನು ಕಣಕ್ಕಿಳಿಸಬಹುದು.
ಹವಾಮಾನ ವರದಿ
ಕೋಲ್ಕತಾದಲ್ಲಿ ನಡೆಯುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಇಲ್ಲ. ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 18°C ಇರಬಹುದೆಂದು ಅಂದಾಜಿಸಲಾಗಿದೆ.
ಸಂಭಾವ್ಯ ತಂಡಗಳು
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿ.ಕೀ.), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ IND vs SA: ದಕ್ಷಿಣ ಆಫ್ರಿಕಾ ಸರಣಿಗೆ ಸ್ಪಿನ್ ಪಿಚ್ ಸಾಹಸ ಕೈಬಿಟ್ಟ ಭಾರತ
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್, ಟೋನಿ ಡಿ ಜೋರ್ಜಿ, ಟೆಂಬಾ ಬವುಮಾ (ನಾಯಕ), ಡೆವಾಲ್ಡ್ ಬ್ರೆವಿಸ್, ಕೈಲ್ ವೆರ್ರೆನ್ನೆ (ವಿ.ಕೀ.), ಮಾರ್ಕೊ ಜಾನ್ಸೆನ್, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡ.
ಪಂದ್ಯ ಆರಂಭ: ಬೆಳಗ್ಗೆ 9.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಲೈವ್ ಸ್ಟ್ರೀಮಿಂಗ್: ಜಿಯೋ ಹಾಟ್‌ಸ್ಟಾರ್
ಮುಖಾಮುಖಿ-44
ಭಾರತ ಗೆಲುವು-16
ದಕ್ಷಿಣ ಆಫ್ರಿಕಾ ಗೆಲುವು-18
ಡ್ರಾ-10