IPL 2025: ಐಪಿಎಲ್‌ನಲ್ಲಿ 100 ವಿಕೆಟ್ ಪೂರ್ತಿಗೊಳಿಸಿದ ಸಿರಾಜ್
Mohammed Siraj: ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತನ್ನ ತಂಡದಿಂದ ರಿಲೀಸ್ ಮಾಡಿತ್ತು. ಹರಾಜಿನಲ್ಲಿ ಗುಜರಾತ್ ತಂಡ 12 ಕೋಟಿ ನೀಡಿ ಖರೀದಿ ಮಾಡಿತ್ತು. ಸದ್ಯ ಗುಜರಾತ್ ಪರ ಸಿರಾಜ್ ಪಂದ್ಯದಿಂದ ಪಂದ್ಯಕ್ಕೆ ಮುತ್ತಮ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ


ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್(SRH vs GT) ವಿರುದ್ಧ ಘಾತಕ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದ ವೇಗಿ ಮೊಹಮ್ಮದ್ ಸಿರಾಜ್(Mohammed Siraj ) ಅವರು ಐಪಿಎಲ್(IPL 2025)ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಹೈದರಾಬಾದ್ ಮೂಲದವರಾದ ಸಿರಾಜ್, ತಮ್ಮ ನೆಚ್ಚಿನ ಮೈದಾನದಲ್ಲಿ ಮಾರಕ ದಾಳಿ ಸಂಘಟಿಸಿ ಕೇವಲ 17 ರನ್ ವೆಚ್ಚದಲ್ಲಿ ನಾಲ್ಕು ವಿಕೆಟ್ ಕಿತ್ತು ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದು ಐಪಿಎಲ್‌ನಲ್ಲಿ ಸಿರಾಜ್ ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಯಜುವೇಂದ್ರ ಚಾಹಲ್ ಅವರ ಹೆಸರಲ್ಲಿದೆ. ಚಾಹಲ್ ಒಟ್ಟು 206 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2017 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುವ ಮೂಲಕ ಐಪಿಎಲ್ ಪ್ರಯಾಣ ಆರಂಭಿಸಿದ ಸಿರಾಜ್. ಹೈದರಾಬಾದ್ ಪರ ಆರು ಪಂದ್ಯಗಳನ್ನು ಆಡಿ 21.20 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದರು.
Wickets, wickets, wickets... I like..! I can't avoid!! pic.twitter.com/Jtrq71GVSb
— Gujarat Titans (@gujarat_titans) April 6, 2025
2018 ರ ಋತುವಿಗೆ ಮುನ್ನ ಆರ್‌ಸಿಬಿ ಸಿರಾಜ್‌ರನ್ನು 2.20 ಕೋಟಿ ರೂ.ಗೆ ಖರೀದಿಸಿತ್ತು. 7 ವರ್ಷಗಳ ಕಾಲ ಆರ್‌ಸಿಬಿ ಪರ ಆಡಿದ್ದ ಸಿರಾಜ್ 87 ಪಂದ್ಯಗಳಲ್ಲಿ 83 ವಿಕೆಟ್‌ಗಳನ್ನು ಕಬಳಿಸಿದ್ದರು. ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತನ್ನ ತಂಡದಿಂದ ರಿಲೀಸ್ ಮಾಡಿತ್ತು. ಹರಾಜಿನಲ್ಲಿ ಗುಜರಾತ್ ತಂಡ 12 ಕೋಟಿ ನೀಡಿ ಖರೀದಿ ಮಾಡಿತ್ತು. ಸದ್ಯ ಗುಜರಾತ್ ಪರ ಸಿರಾಜ್ ಪಂದ್ಯದಿಂದ ಪಂದ್ಯಕ್ಕೆ ಮುತ್ತಮ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿಗೆ ಕೊಡುಗೆ ನೀಡುತ್ತಿದ್ದಾರೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದಿದ್ದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೂ ಸಿರಾಜ್ 19 ರನ್ನಿಗೆ ಮೂರು ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಭಾನುವಾರ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟಿಂಗ್ ಮರೆತವರಂತೆ ಆಡಿ 8 ವಿಕೆಟ್‌ಗೆ 152 ರನ್ ಬಾರಿಸಿತು. ಜಬಾಬಿತ್ತ ಗುಜರಾತ್ ಆರಂಭಿಕ ಆಘಾತ ಹೊರತಾಗಿಯೂ 16.4 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 153 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ವೇಗಿ ಮೊಹಮ್ಮದ್ ಸಿರಾಜ್(17 ಕ್ಕೆ 4) ಬಿಗಿ ಬೌಲಿಂಗ್ ದಾಳಿ ಹಾಗೂ ನಾಯಕ ಶುಭಮನ್ ಗಿಲ್(61*) ಬಾರಿಸಿದ ಅಜೇಯ ಅರ್ಧಶತಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.