ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ: ಮೂವರು ವೇಗಿಗಳ ನಾಮನಿರ್ದೇಶನ
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ 2-0 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮ್ಯಾಟ್ ಹೆನ್ರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 33 ವರ್ಷದ ಮ್ಯಾಟ್ ಹೆನ್ರಿ 90ಕ್ಕೆ9 ಮತ್ತು 56ಕ್ಕೆ7 ವಿಕೆಟ್ ಕಿತ್ತು ಬುಲವಾಯೊದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಲು ಸಹಾಯ ಮಾಡಿದ್ದರು.

-

ದುಬೈ: 'ಐಸಿಸಿ ಆಗಸ್ಟ್ ತಿಂಗಳ ಕ್ರಿಕೆಟಿಗ' ಪ್ರಶಸ್ತಿಗೆ(ICC Player of the Month) ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj), ನ್ಯೂಜಿಲ್ಯಾಂಡ್‌ನ ಮ್ಯಾಟ್ ಹೆನ್ರಿ, ವೆಸ್ಟ್ ಇಂಡೀಸ್‌ನ ಜೇಡನ್ ಸೀಲ್ಸ್ ಹೆಸರು ಸೂಚಿಸಲ್ಪಟ್ಟಿದೆ.
ಇತ್ತೀಚೆಗೆ ಓವಲ್‌ನಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದ 5ನೇ ದಿನದಂದು ಭಾರತಕ್ಕೆ ಆರು ರನ್‌ಗಳ ರೋಮಾಂಚಕ ಜಯ ತಂದುಕೊಟ್ಟಿದ್ದಕ್ಕಾಗಿ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರು. ಮಾತ್ರವಲ್ಲದೆ ಸರಣಿಯಲ್ಲಿ ಅತ್ಯಧಿಕ 23 ವಿಕೆಟ್ ಕಿತ್ತ ಸಾಧನೆಗೈದಿದರು.
ಮತ್ತೊಂದೆಡೆ, 1991 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧದ 2-1 ಏಕದಿನ ಸರಣಿ ಗೆಲುವಿನಲ್ಲಿ ವೆಸ್ಟ್ ಇಂಡೀಸ್ ಪರ ಜೇಡನ್ ಸೀಲ್ಸ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಬಲಗೈ ವೇಗಿ ಮೂರು ಇನ್ನಿಂಗ್ಸ್‌ಗಳಿಂದ 10 ಸರಾಸರಿ ಮತ್ತು 4.10 ರ ಎಕಾನಮಿಯಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದರು.
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ 2-0 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಮ್ಯಾಟ್ ಹೆನ್ರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. 33 ವರ್ಷದ ಮ್ಯಾಟ್ ಹೆನ್ರಿ 90ಕ್ಕೆ9 ಮತ್ತು 56ಕ್ಕೆ7 ವಿಕೆಟ್ ಕಿತ್ತು ಬುಲವಾಯೊದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಲು ಸಹಾಯ ಮಾಡಿದ್ದರು.
ಇದನ್ನೂ ಓದಿ Mohammed Siraj: ಆಶಾ ಭೋಸ್ಲೆ ಮೊಮ್ಮಗಳ ಜತೆ ರಕ್ಷಾಬಂಧನ ಆಚರಿಸಿದ ಸಿರಾಜ್