India men’s hockey: ಹಾಕಿ ಏಷ್ಯಾಕಪ್ ಗೆದ್ದ ಆಟಗಾರರಿಗೆ ತಲಾ ₹10 ಲಕ್ಷ ಬಹುಮಾನ ಘೋಷಿಸಿದ ನಿತೀಶ್ ಕುಮಾರ್
"ರಾಜ್‌ಗೀರ್‌ನಲ್ಲಿರುವ ರಾಜ್ಯ ಕ್ರೀಡಾ ಅಕಾಡೆಮಿ-ಕಮ್-ಬಿಹಾರ ಕ್ರೀಡಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಏಷ್ಯಾಕಪ್ 2025 ರಲ್ಲಿ ಭಾರತೀಯ ಹಾಕಿ ತಂಡ ಅದ್ಭುತ ಗೆಲುವು ಸಾಧಿಸಿದೆ, ಇದರಿಂದಾಗಿ ಇಡೀ ದೇಶವೇ ಹೆಮ್ಮೆಯಿಂದ ತುಂಬಿದೆ" ಎಂದು ಎಕ್ಸ್‌ನಲ್ಲಿ ನಿತೀಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

-

ರಾಜ್ಗಿರ್ (ಬಿಹಾರ): ಈ ಬಾರಿ ಪುರುಷರ ಹಾಕಿ(India men’s hockey) ಏಷ್ಯಾಕಪ್‌ನಲ್ಲಿ(Hockey Asia Cup 2025) ಚಾಂಪಿಯನ್ ಆಗಿ ಹೊರ ಹೊಮ್ಮಿದ ಭಾರತ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಬಿಹಾರ ಸರ್ಕಾರ ₹10 ಲಕ್ಷ ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಸೋಮವಾರ (ಸೆಪ್ಟೆಂಬರ್ 8, 2025) ಘೋಷಿಸಿದರು. ಭಾನುವಾರ (ಸೆಪ್ಟೆಂಬರ್ 7, 2025) ರಾಜ್‌ಗಿರ್‌ನಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಸೋಲಿಸುವ ಮೂಲಕ ಭಾರತ ಪುರುಷರ ಹಾಕಿ ಏಷ್ಯಾ ಕಪ್ ತನ್ನದಾಗಿಸಿಕೊಂಡಿತು. ಜತೆಗೆ 2026ರ ಹಾಕಿ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು.
"2025 ರ ಏಷ್ಯಾ ಕಪ್ ಗೆದ್ದ ಭಾರತೀಯ ಹಾಕಿ ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಪ್ರೋತ್ಸಾಹ ಮತ್ತು ಪ್ರೇರಣೆ ನೀಡಲು ರಾಜ್ಯ ಸರ್ಕಾರವು ಗೌರವ ಧನ ನೀಡಲು ನಿರ್ಧರಿಸಿದೆ. 2025 ರ ಏಷ್ಯಾ ಕಪ್ ಗೆದ್ದ ಭಾರತೀಯ ತಂಡದ ಪ್ರತಿಯೊಬ್ಬ ಆಟಗಾರನಿಗೆ 10 ಲಕ್ಷ ರೂಪಾಯಿಗಳ ಗೌರವ ಧನ ಮತ್ತು ಪ್ರತಿಯೊಬ್ಬ ಸಹಾಯಕ ಸಿಬ್ಬಂದಿ ಸದಸ್ಯರಿಗೆ 5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು" ಎಂದು ನಿತೀಶ್ ಕುಮಾರ್ ಹೇಳಿದರು.
"ರಾಜ್‌ಗೀರ್‌ನಲ್ಲಿರುವ ರಾಜ್ಯ ಕ್ರೀಡಾ ಅಕಾಡೆಮಿ-ಕಮ್-ಬಿಹಾರ ಕ್ರೀಡಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಏಷ್ಯಾಕಪ್ 2025 ರಲ್ಲಿ ಭಾರತೀಯ ಹಾಕಿ ತಂಡ ಅದ್ಭುತ ಗೆಲುವು ಸಾಧಿಸಿದೆ, ಇದರಿಂದಾಗಿ ಇಡೀ ದೇಶವೇ ಹೆಮ್ಮೆಯಿಂದ ತುಂಬಿದೆ" ಎಂದು ಎಕ್ಸ್‌ನಲ್ಲಿ ನಿತೀಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ಏಷ್ಯಾಕಪ್‌ನಲ್ಲಿ ಭಾರತದ ಪುರುಷರು ಗೆದ್ದ 4ನೇ ಪ್ರಶಸ್ತಿ ಇದಾಗಿದೆ. ಈ ಮೊದಲು 2003, 2007, 2017ರಲ್ಲಿ ಪ್ರಶಸ್ತಿ ಗೆದ್ದಿತ್ತು. ವಿಶ್ವಕಪ್ 2026 ಆಗಸ್ಟ್ 14ರಿಂದ ಬೆಲ್ಡಿಯಂ, ನೆದರ್‌ಲೆಂಡ್ಸ್‌ನಲ್ಲಿ ನಡೆಯಲಿದೆ.
ಇದನ್ನೂ ಓದಿ ಕೊರಿಯಾವನ್ನು ಮಣಿಸಿ ನಾಲ್ಕನೇ ಏಷ್ಯಾಕಪ್ ಹಾಕಿ ಪ್ರಶಸ್ತಿ ಗೆದ್ದ ಭಾರತ