ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Most Sixes In ODIs: ಕ್ರಿಸ್‌ ಗೇಲ್‌ ಸಿಕ್ಸರ್‌ ದಾಖಲೆ ಮುರಿದ ರೋಹಿತ್‌

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌(Most Sixes In ODIs) ಬಾರಿಸಿದ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಬ್ಯಾಟರ್‌ ಶಾಹಿದ್ ಅಫ್ರಿದಿ(351) ಹೆಸರಿನಲ್ಲಿದೆ. ಈ ಹಿಂದೆ 2ನೇ ಸ್ಥಾನದಲ್ಲಿದ್ದ ಕ್ರಿಸ್‌ ಗೇಲ್(331)‌ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಬಿರುಸಿನ ಬ್ಯಾಟಿಂಗ್‌ ಮೂಲಕ ಮುನ್ನುಗ್ಗಿದ ರೋಹಿತ್‌ 30 ಎಸೆತದಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಶುಭಮನ್‌ ಗಿಲ್‌ ಜತೆಗೂಡಿ ಮೊದಲ ವಿಕೆಟ್‌ಗೆ 136 ರನ್‌ ಒಟ್ಟುಗೂಡಿಸಿದರು.

ಕಟಕ್‌: ಬ್ಯಾಟಿಂಗ್‌ ಲಯಕ್ಕೆ ಮರಳಲು ಹೆಣಗಾಡುತ್ತಿದ್ದ ಟೀಮ್ ಇಂಡಿಯಾದ ನಾಯಕ ರೋಹಿತ್‌ ಶರ್ಮ(Rohit Sharma) ಇಂಗ್ಲೆಂಡ್‌ ಎದುರಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್‌ ಮೂಲಕ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ಜತೆಗೆ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌(Most Sixes In ODIs) ಬಾರಿಸಿದ ಬ್ಯಾಟರ್‌ಗಳ ಯಾದಿಯಲ್ಲಿ ವೆಸ್ಟ್‌ ಇಂಡೀಸ್‌ನ ಮಾಜಿ ದಿಗ್ಗಜ ಬ್ಯಾಟರ್‌ ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಿದರು. ಮೂರು ಸಿಕ್ಸರ್‌ ಬಾರಿಸುತ್ತಿದ್ದಂತೆ ರೋಹಿತ್‌(332 ಸಿಕ್ಸರ್‌) ಈ ಸಾಧನೆಗೈದರು.

ಆರಂಭದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್‌ಗೆ ಒತ್ತು ಕೊಟ್ಟ ರೋಹಿತ್‌, ಬಾರಾಬತಿ ಸ್ಟೇಡಿಯಂನ ಮೂಲೆ ಮೂಲೆಗೂ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಮೂರು ಸಿಕ್ಸರ್‌ ಬಾರಿಸುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ವಿಶ್ವದ ಎರಡನೇ ಬ್ಯಾಟರ್‌ ಎನಿಸಿಕೊಂಡರು.

ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಹಾಗೂ ಬ್ಯಾಟರ್‌ ಶಾಹಿದ್ ಅಫ್ರಿದಿ(351) ಹೆಸರಿನಲ್ಲಿದೆ. ಈ ಹಿಂದೆ 2ನೇ ಸ್ಥಾನದಲ್ಲಿದ್ದ ಕ್ರಿಸ್‌ ಗೇಲ್(331)‌ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಬಿರುಸಿನ ಬ್ಯಾಟಿಂಗ್‌ ಮೂಲಕ ಮುನ್ನುಗ್ಗಿದ ರೋಹಿತ್‌ 30 ಎಸೆತದಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಶುಭಮನ್‌ ಗಿಲ್‌ ಜತೆಗೂಡಿ ಮೊದಲ ವಿಕೆಟ್‌ಗೆ 136 ರನ್‌ ಒಟ್ಟುಗೂಡಿಸಿದರು.



ODIನಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ಬ್ಯಾಟರ್‌ಗಳು

ಶಾಹಿದ್‌ ಅಫ್ರಿದಿ-351

ರೋಹಿತ್‌-332*

ಕ್ರಿಸ್‌ ಗೇಲ್‌-331

ಸನತ್‌ ಜಯಸೂರ್ಯ-270

ಎಂ.ಎಸ್‌ ಧೋನಿ- 229

ಇಯಾನ್‌ ಮಾರ್ಗನ್‌- 220

ಇದನ್ನೂ ಓದಿ IND vs ENG 2nd ODI: ಭಾರತಕ್ಕೆ ಬೃಹತ್‌ ಗೆಲುವಿನ ಗುರಿ ನೀಡಿದ ಇಂಗ್ಲೆಂಡ್‌

ತಾಳ್ಮೆ ಕಳೆದುಕೊಂಡ ರೋಹಿತ್‌

ಇದೇ ಪಂದ್ಯದಲ್ಲಿ ರೋಹಿತ್‌ ತಾಳ್ಮೆ ಕಳೆದುಕೊಂಡ ಘಟನೆಯೂ ಸಂಭವಿಸಿತು. 32ನೇ ಓವರ್‌ನಲ್ಲಿ ಬೌಲಿಂಗ್‌ ನಡೆಸುತ್ತಿದ್ದ ಹರ್ಷಿತ್‌ ರಾಣಾ ಬ್ಯಾಟಿಂಗ್‌ ನಡೆಸುತ್ತಿದ್ದ ಜಾಸ್‌ ಬಟ್ಲರ್‌ಗೆ ಸತತ ನಾಲ್ಕು ಎಸೆತಗಳನ್ನು ಡಾಟ್‌ ಮಾಡಿದರು. ಐದನೇ ಎಸೆತದಲ್ಲಿ ಬಟ್ಲರ್‌ ಡಿಫೆನ್ಸ್‌ ಮಾಡಿದಾಗ ಚೆಂಡು ನೇರವಾಗಿ ಬೌಲಿಂಗ್‌ ಮಾಡುತ್ತಿದ್ದ ರಾಣಾ ಕೈ ಸೇರಿತು. ಬಟ್ಲರ್‌ ಕ್ರೀಸ್‌ನಿಂದ ಮುಂದಿದ್ದ ಕಾರಣ ರಾಣಾ ಚೆಂಡನ್ನು ವಿಕೆಟ್‌ನತ್ತ ಎಸೆದರು. ಆದರೆ ಚೆಂಡು ಕೀಪರ್‌ ರಾಹುಲ್‌ ಅವರಿಗಿಂತಲೂ ದೂರವಾಗಿ ಸಾಗಿ ಬೌಂಡರಿ ಗೆರೆ ದಾಟಿತು. ಅನಗತ್ಯ ಬೌಂಡರಿ ದಾಖಲಾದದನ್ನು ಕಂಡು ಪಿತ್ತ ನೆತ್ತಿಗೇರಿಸಿಕೊಂಡ ರೋಹಿತ್‌ ನಿನಗೇನು ತಲೆ ಕೆಟ್ಟಿದೆಯಾ?, ಏನು ಮಾಡುತ್ತಿದ್ದಿಯಾ? ಎಂದು ಬೈದರು.



ಹರ್ಷಿತ್‌ ರಾಣಾ ಈ ಪಂದ್ಯದಲ್ಲಿ ಅತ್ಯಂತ ದುಬಾರಿಯಾಗಿ ಕಂಡುಬಂದರು. 9 ಓವರ್‌ ಎಸೆದು 62 ರನ್‌ ಬಿಟ್ಟುಕೊಟ್ಟರು. ಉರುಳಿಸಿದ್ದು ಕೇವಲ ಒಂದು ವಿಕೆಟ್‌ ಮಾತ್ರ. ಮೊದಲ ಪಂದ್ಯದಲ್ಲಿ ಮೂರು ವಿಕೆಟ್‌ ಕಡೆವಿದ್ದರು.