MS Dhoni Out Or Not Out?: ಧೋನಿ ಔಟ್ ಅಥವಾ ನಾಟೌಟ್: ಏನಿದು ವಿವಾದ?
ಧೋನಿ ಕೂಡ ಅಂಪೈರ್ ನಿರ್ಧಾರಕ್ಕೆ ಮೈದಾನದಲ್ಲೇ ಅಸಮಾಧಾನಗೊಂಡರು. ಸಿಟ್ಟಿನಿಂದಲೇ ಪೆವಿಲಿಯನ್‌ಗೆ ಮರಳಿದ ಅವರ ಮುಖಭಾವದಲ್ಲಿ ಅದು ಸ್ಪಷ್ಟವಾಗಿತ್ತು. ಧೋನಿ ಕೇವಲ ಒಂದು ರನ್‌ಗೆ ಆಟ ಮುಗಿಸಿದರು. ಧೋನಿ ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಐಪಿಎಲ್‌ನಲ್ಲಿ ತಂಡ ಮುನ್ನಡೆಸಿದ ಹಿರಿಯ ಆಟಗಾರ ಎಂಬ ದಾಖಲೆ ಬರೆದರು.


ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್(CSK vs KKR) ನಡುವಣ ಶುಕ್ರವಾರದ ಐಪಿಎಲ್(IPL 2025) ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನೀಡಿದ ಎಲ್‌ಬಿಡಬ್ಲ್ಯು ತೀರ್ಪು(MS Dhoni Out Or Not Out?) ಇದೀಗ ವಿವಾದಕ್ಕೆ ಕಾರಣವಾಗಿದೆ. ಚೆಂಡು ಧೋನಿ ಬ್ಯಾಟ್‌ಗೆ ತಾಗಿರುವುದು ಸ್ಪಷ್ಟವಾಗಿ ಕಂಡು ಬಂದರೂ ಅಂಪೈರ್ ಎಲ್‌ಬಿಡಬ್ಲ್ಯು ನೀಡಿದ ಬಗ್ಗೆ ಧೋನಿ ಅಭಿಮಾನಿಗಳು ಅಂಪೈರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರನೇ ಅಂಪೈರ್ ಆತುರದಲ್ಲಿದ್ದಂತೆ ತೋರುತ್ತಿದ್ದು, ಎಲ್ಲಾ ಕೋನಗಳನ್ನು ಪರಿಶೀಲಿಸದೆ ಔಟ್ ಎಂದು ತೀರ್ಪು ನೀಡಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈ ತಂಡ 72 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ವೇಳೆ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಸುನಿಲ್ ನರೈನ್ ಚೆಂಡು ಧೋನಿ ಪ್ಯಾಡ್‌ಗೆ ಬಡಿಯಿತು. ಈ ವೇಳೆ ಕೆಕೆಆರ್ ಆಟಗಾರರು ಔಟ್‌ಗೆ ಬಲವಾಗಿ ಮನವಿ ಮಾಡಿದರು. ಫೀಲ್ಡ್ ಅಂಪೈರ್ ಔಟ್ ತೀರ್ಪು ನೀಡಿದರು. ಇದನ್ನು ಪ್ರಶ್ನಿಸಿ ಧೋನಿ ರಿವ್ಯೂ ಮೊರೆ ಹೋದರು. ಮೂರನೇ ಅಂಪೈರ್ ಅಲ್ಟ್ರಾ ಎಡ್ಜ್ ಪರಿಶೀಲನೆ ನಡೆಸುವಾಗ ಚೆಂಡು ಬ್ಯಾಟ್‌ಗೆ ಸವರಿ ಆ ಬಳಿಕ ಪ್ಯಾಟ್‌ಗೆ ಬಡಿದಿರುವುದು ಕಂಡುಬಂತು. ಆದರೂ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಇದು ಈಗ ವಿವಾದಕ್ಕೆ ಕಾರಣವಾಗಿದೆ.
क्या धोनी आउट थे या नॉट आउट?
— unity in diversity (@charag_official) April 12, 2025
अंपायर ने धोनी को LBW आउट दिया और Replay में अल्ट्रा-एज में शायद कुछ हरकत देखने को मिली! #viralpost2025 #viralvideoシ #viralreelsfacebook #cskfansofficial #iplanthemagic #ipl2025 #viralvideochallenge #csk #viralreelschallenge #ipl2025news #dhoni… pic.twitter.com/awBuD2I2Ob
ಧೋನಿ ಕೂಡ ಅಂಪೈರ್ ನಿರ್ಧಾರಕ್ಕೆ ಮೈದಾನದಲ್ಲೇ ಅಸಮಾಧಾನಗೊಂಡರು. ಸಿಟ್ಟಿನಿಂದಲೇ ಪೆವಿಲಿಯನ್‌ಗೆ ಮರಳಿದ ಅವರ ಮುಖಭಾವದಲ್ಲಿ ಅದು ಸ್ಪಷ್ಟವಾಗಿತ್ತು. ಧೋನಿ ಕೇವಲ ಒಂದು ರನ್‌ಗೆ ಆಟ ಮುಗಿಸಿದರು.
BIG WICKET! 🥵#SunilNarine dismisses #MSDhoni as #CSK lose a review! ☝
— Star Sports (@StarSportsIndia) April 11, 2025
Watch the LIVE action ➡ https://t.co/YPwDLdrTqi #IPLonJioStar 👉 #CSKvKKR | LIVE NOW on Star Sports Network & JioHotstar! pic.twitter.com/W4OGlTl62O
ಧೋನಿ ಬ್ಯಾಟಿಂಗ್‌ನಲ್ಲಿ ವಿಫಲರಾದರೂ ಐಪಿಎಲ್‌ನಲ್ಲಿ ತಂಡ ಮುನ್ನಡೆಸಿದ ಹಿರಿಯ ಆಟಗಾರ ಎಂಬ ದಾಖಲೆ ಬರೆದರು. ಜತೆಗೆ 683 ದಿನಗಳ ಬಳಿಕ ಐಪಿಎಲ್‌ನಲ್ಲಿ ಚೆನ್ನೈ ತಂಡದ ಸಾರಥ್ಯ ವಹಿಸಿದರು. 2023ರ ಫೈನಲ್ ಗೆಲುವಿನ ಬಳಿಕ ಧೋನಿ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದರು. ಹಾಲಿ ಆವೃತ್ತಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದ ಗಾಯಕ್ವಾಡ್ ಗಾಯಗೊಂಡು ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಧೋನಿ ಮತ್ತೆ ತಂಡದ ನಾಯಕನಾದರು.
ಧೋನಿಗೂ ಮುನ್ನ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿ ಅತಿ ಹಿರಿಯ ನಾಯಕ ಎಂಬ ದಾಖಲೆ ಶೇನ್ ವಾರ್ನ್ ಹೆಸರಿನಲ್ಲಿತ್ತು. ಅವರು 41 ವರ್ಷದಲ್ಲಿ ರಾಜಸ್ಥಾನ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಧೋನಿ 43ನೇ ವಯಸ್ಸಿನಲ್ಲಿ ನಾಯಕನಾಗುವ ಮೂಲಕ ವಾರ್ನ್ ದಾಖಲೆ ಮುರಿದರು.